Breaking News

ಬೆಳ್ತಂಗಡಿ | ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ : ಆರೋಪಿ ಸೆರೆ

ಬೆಳ್ತಂಗಡಿ: ಶಾಲೆಗೆ ರಿಕ್ಷಾದಲ್ಲಿ ತೆರಳುತ್ತಿದ್ದ 14 ವರ್ಷದ ಬಾಲಕಿಗೆ ಅನುಚಿತವಾಗಿ ವರ್ತಿಸಿ, ಜೀವ ಬೆದರಿಕೆ ಹಾಕಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ವೇಣೂರು ಪೊಲೀಸರು ರಿಕ್ಷಾ ಚಾಲಕ ಜಮಾಲುದ್ದೀನ್‌ನನ್ನು ಬಂಧಿಸಿದ್ದಾರೆ. ಕೆಲವು ತಿಂಗಳಿಂದ ಬಾಲಕಿ ಆರೋಪಿಯ ರಿಕ್ಷಾದಲ್ಲಿ ಶಾಲೆಗೆ ತೆರಳುತ್ತಿದ್ದು, ಈ ವೇಳೆ ಆರೋಪಿ ಅನುಚಿತವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ. ಬಾಲಕಿ ವಿರೋಧಿಸಿದಾಗ ಜೀವ ಬೆದರಿಕೆ ಹಾಕಿದ್ದರಿಂದ ಭಯಗೊಂಡು ಯಾರಿಗೂ ವಿಷಯ ತಿಳಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆ.13ರಂದು ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಾಗ ಆರೋಪಿ ಮನೆಗೆ ಬಂದು ಬೆದರಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಲಾಗಿದೆ. ಆ.15ರಂದು ಬಾಲಕಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Share News

About BigTv News

Check Also

ಬೆಳಗಾವಿ ದಮೋನೆ ಫ್ಯಾಮಿಲಿ ದುರಂತದ ಟ್ವಿಸ್ಟ್: 6 ಜನರ ಸಾವಿಗೆ ಫ್ರಿಡ್ಜ್ ಬ್ಲಾಸ್ಟ್ ಕಾರಣವಲ್ಲ, CCTV ವಿಡಿಯೋ ಸಂದೇಹ!

ಬೆಳಗಾವಿ: ಚವಾಟ್‌ಗಲ್ಲಿಯಲ್ಲಿ ಸೆ.16ರಂದು ಒಂದೇ ಕುಟುಂಬದ 6 ಮಂದಿ ಮೃತಪಟ್ಟ ಅಗ್ನಿ ದುರಂತ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಘಟನೆಗೂ …

Leave a Reply

Your email address will not be published. Required fields are marked *