Breaking News

ಶಿವಳ್ಳಿ ನೆನೆದು ಕಣ್ಣೀರಿಟ್ಟ ಸಚಿವ ಡಿ.ಕೆ.ಶಿವಕುಮಾರ್​

​ಹುಬ್ಬಳಿ: ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬ್ಯುಸಿಯಾಗಿರುವ ಸಚಿವ ಡಿ.ಕೆ.ಶಿವಕುಮಾರ್ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಶಿವಳ್ಳಿ ಪತ್ನಿ, ಕುಸುಮಾ ಶಿವಳ್ಳಿ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಅದ್ರಂತೆ ಇಂದು ಇಂಗಳಗಿ ಗ್ರಾಮದಲ್ಲಿ ಪ್ರಚಾರ ನಡೆಸ್ತಿದ್ದಾಗ ಸಚಿವ ಡಿ.ಕೆ.ಶಿವಕುಮಾರ್, ಸಿಎಸ್​ ಶಿವಳ್ಳಿಯನ್ನ ನೆನೆದು ಭಾವುಕರಾದರು.ಪ್ರಚಾರದ ವೇಳೆ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್, ಸಿ.ಎಸ್.ಶಿವಳ್ಳಿ ಜಾತಿ ಧರ್ಮ ಭೇದ ಭಾವ ಮಾಡಿಲ್ಲ. ಆತ ನಿಮಗೆ ಯಾವತ್ತೂ ಕಿರುಕುಳ ನೀಡಿದ್ನಾ ಅಂತಾ ನೀವೇ ಹೇಳಿ. ಪಾಪ ಶಿವಳ್ಳಿ ಪತ್ನಿ ಕುಸುಮಾ ಇಂದು ಚುನಾವಣೆಗೆ ನಿಂತಿದ್ದಾರೆ. ಅವರನ್ನ ನಿಮ್ಮ ಮಡಿಲಿಗೆ ಹಾಕಿದ್ದೇವೆ ಎಂದು ಕಣ್ಣಿರು ಇಟ್ಟರು.ಮತ್ತೆ ಮಾತು ಮುಂದುವರಿಸಿದ ಅವರು, ಚುನಾವಣೆ ಬಂದಿದೆ ವೋಟ್ ಕೊಡಿ ಎಂದು ನಾನು ಕಣ್ಣಿರು ಹಾಕಿಲ್ಲ. ಬದಲಿಗೆ ನನಗೆ ತುಂಬಾ ಹತ್ತಿರವಾದ ಗೆಳೆಯ ಶಿವಳ್ಳಿ ಕಳೆದು ಕೊಂಡು ನನಗೆ ನೋವಾಗಿದೆ. ಹೀಗಾಗಿ ನನಗೆ ಅಳು ಬಂದಿದೆ. ನಾನು ನಾಟಕ ಮಾಡುತಿಲ್ಲ ಅಂತಾ ಹೇಳಿದ್ರು.

Share News

About admin

Check Also

ಹುಬ್ಬಳ್ಳಿಗೆ ನೂತನ ಕಮಿಷನರ್ ಎಂಟ್ರಿ! ಇಂದು ಮಧ್ಯಾಹ್ನ 2 ಗಂಟೆಯೊಳಗೆ ಭೂಷಣ್ ಬೋರ್ಸೆ ಆಗಮನ..

ನಿನ್ನೆ ಸುದ್ದಿ… ಇಂದು ಕಮಿಷನರ್ ಎಂಟ್ರಿ! ಅವಳಿ ನಗರದ ಖಾಕಿಗೆ ಭೂಷಣ್ ಬೋರ್ಸೆ ಸಾರಥ್ಯ.. ನಿನ್ನೆ ಬ್ರೇಕ್ ಮಾಡಿದ ಸುದ್ದಿ …

Leave a Reply

Your email address will not be published. Required fields are marked *