Breaking News

ಹುಬ್ಬಳ್ಳಿ-ಧಾರವಾಡ

‘ಉ-ಕ’ಕ್ಕೆ ಅನ್ಯಾಯವಾಗಲು ಇಲ್ಲಿನ ರಾಜಕಾರಣಿಗಳೇ ಕಾರಣ- ಹೊರಟ್ಟಿ

ಉತ್ತರ ಕರ್ನಾಟಕಕ್ಕೆ ಅನ್ಯಾವಾಗಲು ಇಲ್ಲಿಯ ಜನಪ್ರತಿನಿಧಿಗಳೇ ಕಾರಣ. ನಂಜುಂಡಪ್ಪ ವರದಿ ಬಂದ ನಂತರ ಸಾಕಷ್ಟು ಜನ ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿ ಆಗಿದ್ದಾರೆ, ಅವಾಗ ಏಕೆ ಅಭಿವೃದ್ಧಿ ಮಾಡಲಿಲ್ಲ…? ಎಂದು  ವಿಧಾನ ಪರಿಷತ್ ಸಭಾಪತಿ ‌ಬಸವರಾಜ ಹೊರಟ್ಟಿ ಆರೋಪಿಸಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,  ನಮ್ಮ ನಿಲುವು ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬಾರದು. ಅಖಂಡ ಕರ್ನಾಟಕ ಆಗಿರಬೇಕು, ಪ್ರತ್ಯೇಕ ರಾಜ್ಯ ಎನ್ನುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಸಿಎಂ ಕುಮಾರಸ್ವಾಮಿಯವರೇ …

Read More »

ಕಲಿತ ಶಾಲೆಯಲ್ಲೇ ವಿಜ್ಞಾನ ಕೇಂದ್ರ ತೆರೆದ ವಿದ್ಯಾರ್ಥಿ

ಹುಬ್ಬಳ್ಳಿ ಶಾಲೆಯಲ್ಲಿ ಕಲಿತು ವಿದೇಶದಲ್ಲಿ ಉದ್ಯಮ ಸ್ಥಾಪಿಸಿದ ಹಳೆ ವಿದ್ಯಾರ್ಥಿ ಯೋರ್ವ ತಾನು ಕಲಿತ ಶಾಲೆಯ ಆವರಣದಲ್ಲಿ ಸರಕಾರಿ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಎಂದು ಸ್ವಂತ ಖರ್ಚಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಹುಬ್ಬಳ್ಳಿಯ 16ನಂಬರ ಶಾಲೆಯ ಆವರಣದಲ್ಲಿ ಇಂದು ಲೋಕಾರ್ಪಣೆ ಅದ ಅನಸೂಯ ಮೇಳಿಗೇರಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರದಲ್ಲಿ ವಿಜ್ಞಾನದ ಪ್ರಾಯೋಗಿಕ ಪಾಠಗಳು ಮತ್ತು ಡಿಜಿಟಲ್ ಚಟುವಟಿಕೆಗಳ ಮುಖಾಂತರ ಮಕ್ಕಳಿಗೆ ಅತ್ಯುತ್ತಮ ಮಟ್ಟದ ಶಿಕ್ಷಣ ನೀಡುವ …

Read More »

ಇದನ್ನ ನೋಡಿದ್ರೇ ತಲೆ ತಗ್ಗಿಸಬೇಕಲ್ವೇ..

ಏನೇನೋ ಸಾಧಿಸಿದ್ದೇವೆ ಅಂತ ಹೇಳ್ತಿದ್ದೇವೆ. ಆದ್ರೇ, ನಮ್ಮ ಸಾಧನೆ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಅದರಿಂದ ಎಷ್ಟು ಪ್ರಯೋಜನವಾಗಿದೆ ಅನ್ನೋದ್ ಮಾತ್ರ ಪ್ರಶ್ನಾರ್ಥಕ. ತಮ್ಮ ನ್ಯಾಯ ಸಮ್ಮತ ಹಕ್ಕಿಗಾಗಿ ತಾವ್ ದುಡಿದ್ ದುಡ್ಡು ಪಡೆಯೋದಕ್ಕಾಗಿ ಜನ ಇನ್ನೂ ಎಂಥೆಂತ ಪ್ರತಿಭಟನೆ ಮಾಡ್ಬೇಕಾಗಿದೆ. ಹುಬ್ಬಳ್ಳಿಯಲ್ಲಿ ಗುತ್ತಿಗೆ ಪೌರ ಕಾರ್ಮಿಕರು ತಮ್ಮ ವೇತನಕ್ಕಾಗಿ ಮಲವನ್ನೇ ಮೈಮೇಲೆ ಸುರಿದುಕೊಂಡಿದಾರೆ. ನಾಗರಿಕ ಸಮಾಜ ಇನ್ನೂ ಎತ್ತ ಸಾಗ್ತಿದೆ. ಮನಕಲಕುವ ಈ ದೃಶ್ಯ ನೋಡಿದ್ರೇ ಇಂಥದೊಂದ್ ಜಿಜ್ಞಾಸೆ ಕಾಡದೇ …

Read More »

ಸಿದ್ದರಾಮಯ್ಯ ಕೊಟ್ಟಿದ್ರೂ ನೀವ್ಯಾಕೆ ಕೊಡಲಿಲ್ಲ..

ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಬಸ್ ನೀಡಲು ಆಗ್ರಹಿಸಿ ಪ್ರತಿಭಟನೆ. ಧಾರವಾಡದಲ್ಲಿ ವಿದ್ಯಾರ್ಥಿ‌ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ. ಈ ಹಿಂದೆ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಬಸ್ ಪಾಸ್ ಘೋಷಿಸಿದ್ರು. ಸಿದ್ದರಾಮಯ್ಯ ತಾವು ಮಂಡಿಸಿದ ಬಜೆಟ್ ನಲ್ಲಿ ಇದಕ್ಕೆ ಹಣ ಕೂಡ ತೆಗೆದಿರಿಸಿದ್ರು. ಆದ್ರೇ, ಈಗ ಸಿಎಂ ಕುಮಾರಸ್ವಾಮಿ ಬಜೆಟ್ ನಲ್ಲಿ ಹಣ ತೆಗೆದಿರಿಸದೇ ಸರಿಯಲ್ಲ. ಸಿದ್ದರಾಮಯ್ಯ ಆಶಯದಂತೆ ಬಡ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ …

Read More »

ಧಾರವಾಡ ಡಿಸಿ ಎಂ. ದೀಪಾ ಅಧಿಕಾರ ಸ್ವೀಕಾರ

ಧಾರವಾಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಎಂ.ದೀಪಾ ಅವರು ಇಂದು ಅಧಿಕಾರ ಸ್ವೀಕರಿಸಿದರು. ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ವಿಭಾಗದ ಪ್ರಧಾನ ವ್ಯವಸ್ಥಾಪಕ ಹುದ್ದೆಗೆ ವರ್ಗಾವಣೆಯಾಗಿರುವ ಡಾ.ಎಸ್.ಬಿ.ಬೊಮ್ಮನಹಳ್ಳಿ ಅಧಿಕಾರ ಹಸ್ತಾಂತರಿಸಿದರು. ತಮ್ಮ ಅಧಿಕಾರಾವಧಿಯಲ್ಲಿ ಎಲ್ಲ ಅಧಿಕಾರಿಗಳು,ಚುನಾಯಿತ ಪ್ರತಿನಿಧಿಗಳು,ಸಿಬ್ಬಂದಿ ವರ್ಗ ,ಮಾಧ್ಯಮ ಹಾಗೂ ಸಾರ್ವಜನಿಕರು ನೀಡಿದ ಸಹಕಾರವನ್ನು ನಿರ್ಗಮಿತ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸ್ಮರಿಸಿದರು. ಈ ಹಿಂದೆ ಹುಬ್ಬಳ್ಳಿ ಧಾರವಾಡ ಬಿಆರ್‌ಟಿಎಸ್ ಯೋಜನೆಯ ವ್ಯವಸ್ಥಾಪಕ ನಿರ್ದೇಶಕಿಯಾಗಿ ಕೆಲಸ ಮಾಡುವ ವೇಳೆ ಸ್ಥಳೀಯ ವಿಷಯಗಳ ಸೂಕ್ಷ್ಮ …

Read More »

ರೋಡ್ ರೋಮಿಯೋಗಲಳ ಅಂದರ್

ಹುಬ್ಬಳ್ಳಿಯಲ್ಲಿ ಜನನಿಬಿಡ ಪ್ರದೇಶ ಹಾಗೂ‌ಶಾಲಾ ಕಾಲೇಜುಗಳ ಬಳಿ ಯುವತಿಯರು, ಶಾಲಾ‌ ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಚುಡಾಯಿಸುತ್ತಿದ್ದ ಆರು ಜನ ರೋಡ್ ರೋಮಿಯೋಗಳನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ಲ್ಯಾಮಿಂಗ್ಟನ್ ಶಾಲೆಯಲ್ಲಿ ಶಾಲಾ‌ ವಿದ್ಯಾರ್ಥಿನಿಯರು ಹಾಗೂ ಹಳೇ ಬಸ್ ನಿಲ್ದಾಣ ಬಳಿ ಯುವತಿಯರನ್ನು ಚುಡಾಯಿಸುತ್ತಿದ್ದ ಆರು ಜನ ಯುವಕರನ್ನು ಬಂಧಿಸಲಾಗಿದೆ‌.‌ ಶಿರಡಿ‌ ನಗರದ ಸಂಜುಕುಮಾರ, ತೋರವಿಹಕ್ಕಲದ ಪ್ರವೀಣ ಜೈನ್, ಶಿರಾಜ್ ಅಹ್ಮದ್, ಶಂಕರ್ ತಲವಾಯಿ, ವಿವೇಕ ಗದಗಿ ಹಾಗೂ ವಿದ್ಯಾ …

Read More »

ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಯಮ್ಯ ಹೇಳಿಕೆ

ಉ-ಕ ಪ್ರತ್ಯೇಕ ರಾಜ್ಯ ಕುರಿತು ನಾಡೋಜ ಡಾ. ಪಾಪು ಹೇಳಿಕೆ ವಿಚಾರ ಈ ಬಗ್ಗೆ ನಾನೇನೂ ಯಾವುದೇ ಪ್ರತಿಕ್ರಿಯೆ ನೀಡಲು ಇಷ್ಟಪಡಲ್ಲ ಉತ್ತರಕರ್ನಾಟಕಕ್ಕೆ ಯಾವ ರೀತಿ ಅನ್ಯಾಯವಾಗಿದೆ ಅವರನ್ನೇ ಕೇಳಿ ಯಾವ ರೀತಿ ಅನ್ಯಾಯವೆಂದು ಪಾಟೀಲ ಪುಟ್ಟಪ್ಪನವರನ್ನೇ ಕೇಳಿ ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಯಮ್ಯ ಹೇಳಿಕೆ ವಿಮಾನ ನಿಲ್ದಾಣದಿಂದ ಬಾದಾಮಿಗೆ ತೆರಳುವ ಮೊದಲು ಹೇಳಿಕೆ ಯಾವಾಗಲೂ ಅಖಂಡ ಕರ್ನಾಟಕದ ಕನಸು ಕಾಣಬೇಕೇ ಹೊರತು ಯಾವುದೇ ಕಾರಣಕ್ಕೂ ಪ್ರತ್ಯೇಕ ರಾಜ್ಯದ ಕನಸು …

Read More »

ನಮ್ ಹೊಟ್ಟೆ ಮೇಲ್ಯಾಕೇ ಹೊಡೀತೀರಿ…?

ಮೂಗು ಹಿಡಿದ್ರೇ ಬಾಯಿ ತೆರೆಯುತ್ತೆ ಅನ್ನೋದು ನಿಜ. ಎಷ್ಟೇ ಹೇಳಿದ್ರೂ ಏನೇ ಡೆಡ್ ಲೈನ್ ಕೊಟ್ರೂ ಆಟೋಚಾಲಕರು, ಮಾಲೀಕರು ಎಚ್ಚೆತ್ತುಕೊಂಡಿರಲಿಲ್ಲ. ಯಾವಾಗ ಆರ್ ಟಿಒ ಪೊಲೀಸರ ಜತೆ ಸೇರಿ ರೇಡ್ ಮಾಡೋಕೆ ಶುರುವಾದರೋ ಆಗ ಆಟೋ ಚಾಲಕರಿಗೆ ಸರಿಯಾಗಿ ಬಿಸಿ ಮುಟ್ಟಿದೆ. ರೂಲ್ಸ್ ಫಾಲೋ ಮಾಡಿ, ಬೇಡ ಅನ್ನೋ ನಮ್ಮ ಸಮಸ್ಯೆಯನ್ನೂ ಕೇಳಿ ಅಂತಿವೆ ಆಟೋ ಸಂಘಟನೆಗಳು. ಹುಬ್ಬಳ್ಳಿ-ಧಾರವಾಡ ಪೊಲೀಸರು ಈಗ ಸಾಕಷ್ಟು ಸ್ಟ್ರಿಕ್ಟ್ ಆಗ್ಬಿಟ್ಟಿದಾರೆ. ವಾರದಿತ್ತೀಚಿಗಂತೂ ಅಪರಾಧಿಗಳಿಗಷ್ಟೇ ಅಲ್ಲ, …

Read More »

ಮಹಿಳೆ ಜತೆ ಕಂಡಕ್ಟರ್ ಅನುಚಿತ ವರ್ತನೆ

ಮಹಿಳೆಯ ಜೊತೆ ನಿರ್ವಾಹಕನೊಬ್ಬ ಅನುಚಿತ ವರ್ತನೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಧಾರವಾಡ ಜಿಲ್ಲೆಯ ನಲವಡಿಯಿಂದ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ಸಾರಿಗೆ ಬಸ್ ನಲ್ಲಿ ಈ ಘಟನೆ ನಡೆದಿದೆ. ಮಾನಸಿಕ ಅಸ್ವಸ್ಥಳಾದ ಮಹಿಳೆ ಟಿಕೆಟ್ ಪಡೆಯದೆ ಪ್ರಯಾಣ ಮಾಡುತ್ತಿದ್ದರಿಂದ ನಿರ್ವಾಹಕ ಮಹಿಳೆ ಜೊತೆ ಅನುಚಿತವಾಗಿ ವರ್ತನೆ ಮಾಡಿದ್ದಾನೆ. ಟಿಕೆಟ್ ತಗೆದುಕೊಳ್ಳುವಂತೆ ಮಹಿಳೆಯ ಮೈ ಕೈ ಮುಟ್ಟಿ ಪೀಡಿಸಿದ್ದಾನೆ. ಅಲ್ಲಿದ್ದ ಸಹ ಪ್ರಯಾಣಿಕರು ಮಹಿಳೆ ಯರ ಜೊತೆ ಸರಿಯಾಗಿ ವರ್ತನೆ ಮಾಡಿ …

Read More »

ಪ್ರತ್ಯೇಕ ರಾಜ್ಯದ ಕೂಗು; ಆಗಷ್ಟ್ 2ಕ್ಕೆ ಉ-ಕ ಬಂದ್ !

ಕರ್ನಾಟಕ ಏಕೀಕರಣಕ್ಕೆ ದೊಡ್ಡದಾದ ಬಲ ತಂದ್ಕೊಟ್ಟಿದ್ದೇ ಉತ್ತರಕರ್ನಾಟಕ. ಅದರಲ್ಲೂ ಅಖಂಡ ಧಾರವಾಡ ಜಿಲ್ಲೆಯ ಪಾತ್ರ ಏಕೀಕರಣದಲ್ಲಿ ಮಹತ್ವದ ಪಾತ್ರ. ಹುಯಿಲಗೋಳ ನಾರಾಯಣರಾವ, ಸಿದ್ದಪ್ಪ ಕಂಬಳಿ ಸಾಕಷ್ಟು ಮಂದಿ ಐಕ್ಯತೆ ಕುರಿತು ಹೋರಾಡಿದ್ದರು. ಈಗ ಅದೇ ಭಾಗದ ಜನ ಉತ್ತರಕರ್ನಾಟಕದ ಪ್ರತ್ಯೇಕ ರಾಜ್ಯದ ಕಹಳೆ ಮೊಳಗಿಸ್ತಿದಾರೆ. ಉತ್ತರಕರ್ನಾಟಕದ ಜನ ಕಷ್ಟಸಹಿಷ್ಣುಗಳು ನಿಜ. ದಕಶಗಳವರೆಗೂ ಈ ಭಾಗಕ್ಕೆ ಆಗ್ತಿರೋ ಅನ್ಯಾವನ್ನ ನುಂಗಿಕೊಂಡೇ ಅಖಂಡ ಕರ್ನಾಟಕದ ಅಸ್ತಿತ್ವ ಕಾಪಾಡಿಕೊಳ್ಳೋಕೆ ಇಲ್ಲಿನ ಜನ ತ್ಯಾಗ ಗುಣವೇ …

Read More »