Breaking News

ಕಲಿತ ಶಾಲೆಯಲ್ಲೇ ವಿಜ್ಞಾನ ಕೇಂದ್ರ ತೆರೆದ ವಿದ್ಯಾರ್ಥಿ

ಹುಬ್ಬಳ್ಳಿ
ಶಾಲೆಯಲ್ಲಿ ಕಲಿತು ವಿದೇಶದಲ್ಲಿ ಉದ್ಯಮ ಸ್ಥಾಪಿಸಿದ ಹಳೆ ವಿದ್ಯಾರ್ಥಿ ಯೋರ್ವ ತಾನು ಕಲಿತ ಶಾಲೆಯ ಆವರಣದಲ್ಲಿ ಸರಕಾರಿ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಎಂದು ಸ್ವಂತ ಖರ್ಚಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರವನ್ನು ಸ್ಥಾಪಿಸಿದ್ದಾರೆ.
ಹುಬ್ಬಳ್ಳಿಯ 16ನಂಬರ ಶಾಲೆಯ ಆವರಣದಲ್ಲಿ ಇಂದು ಲೋಕಾರ್ಪಣೆ ಅದ ಅನಸೂಯ ಮೇಳಿಗೇರಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರದಲ್ಲಿ ವಿಜ್ಞಾನದ ಪ್ರಾಯೋಗಿಕ ಪಾಠಗಳು ಮತ್ತು ಡಿಜಿಟಲ್ ಚಟುವಟಿಕೆಗಳ ಮುಖಾಂತರ ಮಕ್ಕಳಿಗೆ ಅತ್ಯುತ್ತಮ ಮಟ್ಟದ ಶಿಕ್ಷಣ ನೀಡುವ ಉದ್ದೇಶ ಏಕಸ್ ಪ್ರತಿಷ್ಠಾನದಿಂದ ರೂಪಿಸಲಾಗಿದೆ. ಕೇಂದ್ರವನ್ನು ಉಧ್ವತಿಸಿದ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಯವರು ಮಾತನಾಡಿ ಇಂದು ತಂದೆ ತಾಯಿವರನ್ನು ವೃದ್ಧಾಶ್ರಮಕ್ಕೆ ಕಳುಹಿಸುವ ಈಗಿನ ದಿನಗಳಲ್ಲಿ ಅರವಿಂದ ಮೇಳಿಗೇರಿ ಯವರ ತಾಯಿಯ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿದ್ದು ಶ್ಲಾಘನೀಯ ಎಂದು ನುಡಿದರು. ಬಸವರಾಜ ಹೊರಟ್ಟಿ
ಕಾರ್ಯಕ್ರಮದಲ್ಲಿ ಶಾಸಕ ಶಂಕರ ಪಾಟೀಲ ಮುನ್ನೆನಕೊಪ್ಪ, ಪ್ರದೀಪ್ ಶೆಟ್ಟರ, ಉಪಮಹಾಪೌರೆ ಮೇನಕಾ ಹುರಲಿ ಮುಂತಾದವರು ಉಪಸ್ಥಿತರಿದ್ದರು.
Share News

About Shaikh BIG TV NEWS, Hubballi

Check Also

ಹುಬ್ಬಳ್ಳಿಗೆ ನೂತನ ಕಮಿಷನರ್ ಎಂಟ್ರಿ! ಇಂದು ಮಧ್ಯಾಹ್ನ 2 ಗಂಟೆಯೊಳಗೆ ಭೂಷಣ್ ಬೋರ್ಸೆ ಆಗಮನ..

ನಿನ್ನೆ ಸುದ್ದಿ… ಇಂದು ಕಮಿಷನರ್ ಎಂಟ್ರಿ! ಅವಳಿ ನಗರದ ಖಾಕಿಗೆ ಭೂಷಣ್ ಬೋರ್ಸೆ ಸಾರಥ್ಯ.. ನಿನ್ನೆ ಬ್ರೇಕ್ ಮಾಡಿದ ಸುದ್ದಿ …

Leave a Reply

Your email address will not be published. Required fields are marked *