BigTv News
November 24, 2023
ಕ್ರಿಕೆಟ್, ಕ್ರೀಡೆ, ಸುದ್ದಿ
ಕಳೆದ ಭಾನುವಾರ, ನವೆಂಬರ್ 19ರಂದು ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆರು ವಿಕೆಟ್‌ಗಳ ಸೋಲು, ಮೂರನೇ ಏಕದಿನ ವಿಶ್ವಕಪ್ ಟ್ರೋಫಿ ಎತ್ತುವ ಭಾರತ ತಂಡದ ಕನಸು ಭಗ್ನಗೊಂಡಿತು. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಪಂದ್ಯಾವಳಿಯಲ್ಲಿ ಸತತ 10 ಪಂದ್ಯಗಳನ್ನು ಗೆದ್ದು ಫೈನಲ್‌ಗೆ ತಲುಪಿತ್ತು. ಆದರೆ, ಅಂತಿಮ ಪಂದ್ಯದಲ್ಲಿ ಗೆಲುವಿನ ಆವೇಗ ಕಡಿಮೆಯಾಯಿತು.
Read More »
BigTv News
November 24, 2023
ದೇಶ-ವಿದೇಶ, ಬರ್ಹಾಂಪುರ, ಸುದ್ದಿ
ಬರ್ಹಾಂಪುರ: ವಿಷಪೂರಿತ ಹಾವನ್ನು ಕೋಣೆಗೆ ಬಿಡುವ ಮೂಲಕ ಪತ್ನಿ ಮತ್ತು ಎರಡು ವರ್ಷದ ಮಗಳನ್ನು ಕೊಂದ ಘಟನೆ ಒಡಿಶಾದ ಗಂಜಾಂದಲ್ಲಿ ನಡೆದಿದೆ. 25 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಗಂಜಾಂನಿಂದ ಸುಮಾರು 60 ಕಿಮೀ ದೂರದಲ್ಲಿರುವ ಕಬಿಸೂರ್ಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅಧೇಗಾಂವ್ ಗ್ರಾಮದಲ್ಲಿ ಒಂದೂವರೆ ತಿಂಗಳ ಹಿಂದೆ ಈ ಘಟನೆ ನಡೆದಿದೆ. ಆರೋಪಿಯನ್ನು ಕೆ ಗಣೇಶ್ ಪಾತ್ರ ಎಂದು ಗುರುತಿಸಲಾಗಿದ್ದು, ಆತನ ಪತ್ನಿ ಕೆ ಬಸಂತಿ ಪತ್ರಾ …
Read More »
BigTv News
November 24, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರು: ಡಿ ಕೆ ಶಿವಕುಮಾರ್ ಅವರಿಗೆ ಈಗ ಗೋಲ್ಡನ್ ಅವಕಾಶ ಇದೆ. ಡಿ ಕೆ ಶಿವಕುಮಾರ್ ಅವರು ತಾವು ಸತ್ಯ ಹರಿಶ್ಚಂದ್ರರು ಅಂತ ಸಾಬೀತು ಮಾಡುವ ಅವಕಾಶ ಇದೆ. ಜನತೆಯ ಮುಂದೆ ನೀವು ತಪ್ಪು ಮಾಡಿಲ್ಲ ಅಂತ ತನಿಖೆ ಎದುರಿಸಿ ತೋರಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.ಈ ಕುರಿತು ಶುಕ್ರವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ …
Read More »
BigTv News
November 24, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರು: ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಅಕ್ರಮ ಆಸ್ತಿಯ ಸಿಬಿಐ ತನಿಖೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಸಾರಸಗಟಾಗಿ ಹಿಂಪಡೆದು, ರಾಜ್ಯವನ್ನು ಗೂಂಡಾ, ಭ್ರಷ್ಟಚಾರಿಗಳ ಅಡುಗುದಾಣ ಮಾಡುತ್ತಿದೆ. ಕಾಂಗ್ರೆಸ್ ಕಳ್ಳರ ಸಂತೆಯಲ್ಲಿ ಕಡುಭ್ರಷ್ಟ ಮಹಾರಾಜರು ಡಿ ಕೆ ಶಿವಕುಮಾರ್ ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ. ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ನ್ಯಾಯ, ಪ್ರಾಮಾಣಿಕತೆ ಎಂದು ಭಾಷಣ ಬಿಗಿಯುವ ಸಿದ್ದರಾಮಯ್ಯರವರೇ, ಡಿ. ಕೆ. ಶಿವಕುಮಾರ್ 5 ವರ್ಷಗಳಲ್ಲಿ 380 …
Read More »
BigTv News
November 24, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರು: ಜಾತಿ ಗಣತಿ ಎಂದು ಕರೆಯಲ್ಪಡುವ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಲು ಆತುರಪಡಬೇಡಿ. ಈ ಬಗ್ಗೆ ಮುಂದುವರಿಯುವ ಮೊದಲು ಎಲ್ಲಾ ಸಮುದಾಯಗಳು ಮತ್ತು ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ವಿರೋಧ ಪಕ್ಷದ ನಾಯಕ ಆರ್ ಅಶೋಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ. ಜಾತಿ ಗಣತಿ ವರದಿಯ ಮೂಲ ಕರಡು ಪ್ರತಿ ನಾಪತ್ತೆಯಾದ ನಂತರ ಅವರು ಈ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. 2015ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ …
Read More »
BigTv News
November 24, 2023
ಕ್ರಿಕೆಟ್, ಕ್ರೀಡೆ, ಸುದ್ದಿ
ಭಾರತದ ವೇಗದ ಬೌಲರ್ ನವ್‌ದೀಪ್ ಸೈನಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೈರ್ಯಾಣದಲ್ಲಿ ಹುಟ್ಟಿ ಬೆಳೆದಿರುವ ಅವರು 2019ರಲ್ಲಿ ಭಾರತ ತಂಡದ ಪರವಾಗಿ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇದೀಗ ಅವರು ತಮ್ಮ 30ನೇ ಹರೆಯದಲ್ಲಿ ಸುದೀರ್ಘ ಕಾಲದ ಗೆಳತಿ ಸ್ವಾತಿ ಅಸ್ಥಾನ ಜೊತೆಗೆ ವೂವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವುದನ್ನು ಸ್ವತಃ ನವ್‌ದೀಪ್ ಸೈನಿ ಇನ್‌ಸ್ಟಾಗ್ರಾಂ ಪೋಸ್ಟ್ ಪೂಲಕ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. “ನಿನ್ನ ಜೊತೆಗೆ ಪ್ರತಿ ದಿನವೂ …
Read More »
BigTv News
November 23, 2023
ದೆಹಲಿ, ಸುದ್ದಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಡೀಪ್‌ಫೇಕ್‌ಗಳು ಮತ್ತು ಸಿಂಥೆಟಿಕ್ ಕಂಟೆಂಟ್‌ಗಳ ಸಮಸ್ಯೆಯನ್ನು ತುರ್ತಾಗಿ ನಿಭಾಯಿಸಲು ಕಾನೂನನ್ನು ತರಲು ಚಿಂತನೆ ನಡೆಸಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಹೇಳಿದ್ದಾರೆ.ಪ್ರಧಾನಿ ನರೇಂದ್ರ ಮೋದಿಯವರ ಡೀಪ್‌ಫೇಕ್ ವಿಡಿಯೋ ವೈರಲ್ ಆದ ನಂತರ ಸರ್ಕಾರದಲ್ಲಿ ಕಾನೂನು ಜಾರಿ ಮಾಡುವ ಬಗ್ಗೆ ಯೋಜನೆ ನಡೆಯುತ್ತಿದೆ. ಗುರುವಾರ ಸರ್ಕಾರವು ಸಾಮಾಜಿಕ ಮಾಧ್ಯಮ ಕಂಪನಿಗಳು, ನಾಸ್ಕಾಮ್, ಕೃತಕ ಬುದ್ಧಿಮತ್ತೆ ಕ್ಷೇತ್ರ ಮತ್ತು …
Read More »
BigTv News
November 23, 2023
ಕ್ರಿಕೆಟ್, ಕ್ರೀಡೆ, ಸುದ್ದಿ
ಗುರುವಾರ ನವೆಂಬರ್ 23ರಿಂದ ಆರಂಭವಾಗಲಿರುವ 5 ಪಂದ್ಯಗಳ ಟಿ20 ಸರಣಿಯಲ್ಲಿ ಆತಿಥೇಯ ಭಾರತ ತಂಡವು ಪ್ರವಾಸಿ ಆಸ್ಟ್ರೇಲಿಯಾ ತಂಡವನ್ನು ಆಡುತ್ತಿದೆ. ಮೊದಲ ಪಂದ್ಯವು ವಿಶಾಖಪಟ್ಟಣದಲ್ಲಿ ನಡೆಯಲಿದ್ದು, ಭಾರತ ಯುವ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ಅಹಮದಾಬಾದ್‌ನಲ್ಲಿ ಉಭಯ ತಂಡಗಳು ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯವನ್ನು ಆಡಿದ ನಾಲ್ಕು ದಿನಗಳ ನಂತರ ಟಿ20 ಸರಣಿಯು ಆರಂಭವಾಗುತ್ತಿದೆ.ಗಮನಾರ್ಹವಾಗಿ, ಈ ಸರಣಿಗೆ ಕಡಿಮೆ ಪ್ರಚಾರವಿದೆ ಮತ್ತು ಪಂದ್ಯದ ಪೂರ್ವ ಪತ್ರಿಕಾಗೋಷ್ಠಿಗೆ ಕೇವಲ ಇಬ್ಬರು ಪತ್ರಕರ್ತರು …
Read More »
BigTv News
November 23, 2023
ಕರ್ನಾಟಕ, ಕುಂದಾಪುರ, ಸುದ್ದಿ
ಕುಂದಾಪುರ: ಇತ್ತೀಚಿಗೆ ಜನ ಸಂದಣಿ ಇರುವ ಜಾಗದಲ್ಲೇ ಹಾವು ಕಂಡು ಬರುವುದು ಜಾಸ್ತಿಯಾಗುತ್ತಿದೆ. ಬೇಸಿಗೆಯ ಧಗೆಗೆ ನೀರು ಅರಸಿ ಹಾವುಗಳು ಬಿಲದಿಂದ, ಹುತ್ತದಿಂದ ಹೊರಬರುತ್ತವೆ. ಹೀಗಾಗಿ ಜನರಿರುವ ಪ್ರದೇಶದಲ್ಲಿ ಹಾವುಗಳ ಒಡಾಟ, ಅವುಗಳ ರಕ್ಷಣೆ ಕಾರ್ಯಗಳು ಹೆಚ್ಚಾಗುತ್ತಿದೆ. ಹಾವುಗಳನ್ನು ಕಂಡರೆ ಯಾರಿಗೆ ಭಯ ಇಲ್ಲ ಹೇಳಿ..? ಹಾವುಗಳೆಂದರೆ ಅಲ್ಲಿಂದ ಕಾಲ್ಕಿತ್ತು ಓಡುವವರೇ ಹೆಚ್ಚು. ಉರಗ ತಜ್ಞರು ಎಷ್ಟು ಜಾಗೃತಿ ಮೂಡಿಸಿದರೂ ಕೂಡ ಕೆಲವರು ಕಂಡ ಕಂಡಲ್ಲಿ ಹಾವುಗಳನ್ನು ಹೊಡೆದು ಕೊಲ್ಲುತ್ತಾರೆ. …
Read More »
BigTv News
November 23, 2023
ಕರ್ನಾಟಕ, ಮೇಲುಕೋಟೆ, ಸುದ್ದಿ
ಮೇಲುಕೋಟೆ: ಶ್ರೀಚೆಲುವನಾರಾಯಣಸ್ವಾಮಿಯವರ ಕಾರ್ತಿಕಮಾಸದ ತೊಟ್ಟಿಲಮಡು ಜಾತ್ರಾಮಹೋತ್ಸವವೆಂದೇ ಪ್ರಖ್ಯಾತವಾದ ”ಅಷ್ಠತೀರ್ಥೋತ್ಸವ” ಬುಧವಾರ ವೈಭವದಿಂದ ನೆರವೇರಿತು. ರಾಜಮುಡಿ ಬ್ರಹ್ಮೋತ್ಸವದ ಆರನೇ ತಿರುನಾಳ್ ಮತ್ತು ದಶಮಿತಿಥಿ ಕೂಡಿದ ವಿಶೇಷ ದಿನದಂದು ಶ್ರೀಚೆಲುವನಾರಾಯಣನ ಬಂಗಾರದ ಪಾದುಕೆಗೆ ಪಂಚಕಲ್ಯಾಣಿ, ವೈಕುಂಠಗಂಗೆ ಹಾಗೂ ಎಲ್ಲಾ ಎಂಟು ತೀರ್ಥಗಳಲ್ಲಿ ವೇದಘೋಷದೊಂದಿಗೆ ಅಭಿಷೇಕ ನೆರವೇರಿಸಲಾಯಿತು. ರಾಜ್ಯದ ವಿವಿಧಭಾಗಗಳು ಮತ್ತು ಆಂದ್ರಪ್ರದೇಶದಿಂದ ಭಕ್ತರು ಹಾಗೂ ಮಕ್ಕಳಭಾಗ್ಯ ಅಪೇಕ್ಷಿಸಿ ಮಡಿಲು ತುಂಬಿ ಹರಕೆ ಹೊತ್ತ ನೂರಾರು ದಂಪತಿಗಳು, ಕಂಕಣಭಾಗ್ಯ ಅಪೇಕ್ಷಿತರು, ಪಾದುಕೆಯ ಪಲ್ಲಕ್ಕಿಯೊಡನೆ 20ಕಿಮಿಗೂ …
Read More »