Breaking News

ಸುದ್ದಿ

ಕರ್ನಾಟಕ ಸರ್ಕಾರ ನರೇಗಾ ಯೋಜನೆಯಡಿ ಕಾಮಗಾರಿಗಳ ಮೊತ್ತಗಳನ್ನು ಪರಿಷ್ಕರಣೆ ಮಾಡಿದೆ.

ಬೆಂಗಳೂರು: ಕರ್ನಾಟಕ ಸರ್ಕಾರ ನರೇಗಾ ಯೋಜನೆಯಡಿ ಕಾಮಗಾರಿಗಳ ಮೊತ್ತಗಳನ್ನು ಪರಿಷ್ಕರಣೆ ಮಾಡಿದೆ. ವೈಯಕ್ತಿಕ ಕಾಮಗಾರಿ ಮೊತ್ತವನ್ನು 5 ಲಕ್ಷಕ್ಕೆ ಏರಿಕೆ ಮಾಡಿದೆ. ಇದಕ್ಕೆ ಅನ್ವಯವಾಗುವ ಷರತ್ತುಗಳನ್ನು ಸಹ ವಿವರಿಸಿದೆ.ಆಯುಕ್ತರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಈ ಕುರಿತು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಜ್ಞಾಪನಾ ಪತ್ರವನ್ನು ಬರೆದಿದ್ದಾರೆ. 2022-23ನೇ ಪ್ರಧಾನ ವಾರ್ಷಿಕ ಸುತ್ತೋಲೆಯನ್ನು ಉಲ್ಲೇಖ ಮಾಡಿದ್ದಾರೆ.

Read More »

ಬಹಳ ವಿಶೇಷ ಮತ್ತು ಸ್ಮರಣೀಯ ದಿನ: ಸಿದ್ದರಾಮಯ್ಯ

ಬೆಂಗಳೂರು: ಕೆ ಆರ್ ಪುರದಿಂದ ಬೈಯಪ್ಪನಹಳ್ಳಿ ಹಾಗೂ ಕೆಂಗೇರಿಯಿಂದ ಚಲ್ಲಘಟ್ಟದವರೆಗೆ ಮೆಟ್ರೋ ರೈಲು ವಿಸ್ತ್ರತ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುಯಲ್ ಮೂಲಕ ಶುಕ್ರವಾರ ಉದ್ಘಾಟನೆ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ವರ್ಚುಯಲ್ ಸಭೆ ಮೂಲಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾದರು. ರಾಜ್ಯ ಯೋಜನೆ ಆಯೋಗದ ಉಪಾಧ್ಯಕ್ಷ ಪ್ರೊ ರಾಜೀವ್ ಗೌಡ, ಮಾಜಿ ಸಚಿವ, ಶಾಸಕ ಎಸ್ ಟಿ …

Read More »

ಚಂಡೀಗಢ, ಮುಂಬೈ ಮತ್ತು ಬೆಂಗಳೂರಿನಲ್ಲಿ ವೀಸಾ ಮತ್ತು ಕಾನ್ಸುಲರ್ ಸೇವೆಗಳ ಕಾರ್ಯಾಚರಣೆಗಳಿಗೆ ತಡೆ…

ಒಟ್ಟಾವ್‌: ಭಾರತ ಹಾಗೂ ಕೆನಡಾ ನಡುವಿನ ಸಂಘರ್ಷ ಮುಂದುವರಿದಿದೆ. ಭಾರತದಿಂದ 41 ರಾಜತಾಂತ್ರಿಕರನ್ನು ವಾಪಸ್‌ ಕರೆಸಿಕೊಳ್ಳುವ ನಿರ್ಧಾರವನ್ನು ಕೆನಡಾ ತೆಗೆದುಕೊಂಡಿದೆ. ಅದೇ ರೀತಿ ಚಂಡೀಗಢ, ಮುಂಬೈ ಮತ್ತು ಬೆಂಗಳೂರಿನಲ್ಲಿ ವೀಸಾ ಮತ್ತು ಕಾನ್ಸುಲರ್ ( ದೂತಾವಾಸ ) ಸೇವೆಗಳ ಕಾರ್ಯಾಚರಣೆಗಳಿಗೆ ತಡೆ ನೀಡಿದೆ. ಕೆನಡಾ ಸರ್ಕಾರದ ಈ ನಿರ್ಧಾರವು ವಲಸೆ ಮತ್ತು ವೀಸಾ ಅರ್ಜಿ ಪ್ರಕ್ರಿಯೆ ವಿಳಂಬಕ್ಕೆ ಕಾರಣವಾಗಬಹುದು ಎಂದು ಸಚಿವ ಮಾರ್ಕ್ ಮಿಲ್ಲರ್ ಹೇಳಿದ್ದಾರೆ. ಇದರ ಪರಿಣಾಮವಾಗಿ ಕೆನಡಾದ …

Read More »

ಮಾನವೀಯತೆಗೆ ಸಾಕ್ಷರತೆಯಾದ ಆಟೋ ಚಾಲಕ…

ಹುಬ್ಬಳ್ಳಿ: ಈಗಿನ ಕಾಲದಲ್ಲಿ ಒಂದು ವಸ್ತು ಸಿಕ್ರೆ ಸಾಕು, ಕದ್ದು ಮುಚ್ಚಿ ಇಟ್ಕರೆ ಹೆಚ್ಚು. ಅಂತದರಲ್ಲಿ ಇಲ್ಲೊಬ್ಬ ಆಟೋ ಚಾಲಕ ಪ್ರಯಾಣಿಕರು ಬಿಟ್ಟು ಹೋದ ಮೊಬೈಲ್ ನ್ನು ಪೊಲೀಸ್‌ ಠಾಣೆಗೆ ಹೋಗಿ ಒಪ್ಪಿಸಿ ಗ್ರಾಹಕರಿಗೆ ಮರಳಿಸಿ ಮಾನವೀಯತೆ ಸಾಕ್ಷಿಯಾಗಿದ್ದಾರೆ.ಗಂಗಾಧರ ಇಂಡಿ ಎಂಬ ಆಟೋ ಚಾಲಕ ಹೊಸ ಬಸ್ ನಿಲ್ದಾಣದಿಂದ ಮಹಿಳಾ ಪ್ರಯಾಣಿಕರೊಬ್ಬರನ್ನು ಹತ್ತಿಸಿಕೊಂಡು ಶಕ್ತಿ ನಗರಕ್ಕೆ ತಲುಪಿಸಿದ್ದಾರೆ. ಆ ಪ್ರಯಾಣಿಕರು ಆಟೋದಲ್ಲೆ ತಮ್ಮ ಮೊಬೈಲ್‌ನ್ನು ಬಿಟ್ಟು ಹೋಗಿದ್ದಾರೆ. ಆಟೋ ಚಾಲಕ …

Read More »

ಕ್ರಿಕೆಟ್ ಬುಕ್ಕಿಗಳಿಗೆ ಬ್ರೇಕ್ ಹಾಕಿದ ಸಿಸಿಬಿ ಪೊಲೀಸರು…

ಹುಬ್ಬಳ್ಳಿ: ವಿಶ್ವಕಪ್ ಆರಂಭವಾಗುತ್ತಲೇ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲ ಬೆಟ್ಟಿಂಗ್ ಭರಾಟೆ ಜೋರಾಗಿದ್ದು, ಪೊಲೀಸರು ಕೂಡ ಪೂಲ್ ಅಲರ್ಟ್ ಆಗಿದ್ದು, ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.ದಕ್ಷಿಣ ಆಫ್ರಿಕಾ ನೆದರ್ ಲೆಂಡ್ ವಿರುದ್ದ ಕ್ರಿಕೆಟ್ ಮ್ಯಾಚ್ ವೇಳೆ ಬೆಟ್ಟಿಂಗ್ ನಲ್ಲಿ ಭಾಗಿಯಾಗಿದ್ದ ಮೂವರ ಬಂಧಿಸಿದ್ದು,ಇಬ್ಬರು ಪರಾರಿಯಾಗಿದ್ದಾರೆ. ಬಂಧಿತರಿಂದ 2 ಲಕ್ಷ 39 ಸಾವಿರ ಹಣ ಹಾಗೂ ವಿವಿಧ ಕಂಪನಿಯ ಮೊಬೈಲ್ ವಶಕ್ಕೆ ಪಡೆಯಲಾಗಿದೆ.‌ ನಗರದ ಡಾಕಪ್ಪ ಸರ್ಕಲ್ ನಲ್ಲಿ …

Read More »

ಸಂತೋಷ್ ಲಾಡ್‌ ಧಾರವಾಡ-ಹಳಿಯಾಳ ರಾಜ್ಯ ಹೆದ್ದಾರಿಯ ಪರಿಶೀಲನೆ…

ಧಾರವಾಡ: ಸ್ಥಳೀಯರ ಅಹವಾಲಿನಂತೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್‌ ಧಾರವಾಡ-ಹಳಿಯಾಳ ರಾಜ್ಯ ಹೆದ್ದಾರಿಯ ಪರಿಶೀಲನೆ ನಡೆಸಿದರು. ರಸ್ತೆ ತಿರುವು ದುರಸ್ತಿ ಮತ್ತು ಸೇತುವೆಯ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದರು.ಸಚಿವ ಸಂತೋಷ್ ಲಾಡ್, ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಅವರೊಂದಿಗೆ ಧಾರವಾಡ-ಹಳಿಯಾಳ ರಾಜ್ಯ ಹೆದ್ದಾರಿಯನ್ನು ಉನ್ನತ ಶಿಕ್ಷಣ ಅಕಾಡೆಮಿ ಹತ್ತಿರ ಪರಿಶೀಲನೆ ನಡೆಸಿದರು.

Read More »

ಬೆಳಗಾವಿ ಕಾಂಗ್ರೆಸ್‌ ನಲ್ಲಿ ಹೊತ್ತಿಕೊಂಡ ಅಸಮಾಧಾನದ ಜ್ವಾಲೆ…

ಬೆಳಗಾವಿ: ಸಚಿವ ಸತೀಶ್‌ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್‌ ನಡುವೆ ಮುಸುಕಿ ಗುದ್ದಾಟ ಜೋರಾಗಿದ್ದು, ಬೆಳಗಾವಿ ಕಾಂಗ್ರೆಸ್‌ ನಲ್ಲಿ ಹೊತ್ತಿಕೊಂಡ ಅಸಮಾಧಾನದ ಜ್ವಾಲೆಯನ್ನ ಶಮನಗೊಳಿಸಲು ಡಿಸಿಎಂ ಡಿಕೆ ಶಿವಕುಮಾರ್ ಬೆಳಗಾವಿಗೆ ಆಗಮಿಸಿದ್ದಾರೆ. ಬುಧವಾರ ಬೆಳಗಾವಿಗೆ ಆಗಮಿಸಿದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಿರುಕಿಲ್ಲ. 136 ಶಾಸಕರೂ ನಮ್ಮವರೇ. ನಮ್ಮಲ್ಲಿ ಬಿರುಕಿದೆ ಎಂದು ಹೇಳುವ ಬಿಜೆಪಿ ನಾಯಕರು ಒಮ್ಮೆ ಜೆ.ಎಚ್. …

Read More »

ಬೆಂಗಳೂರಿನಲ್ಲಿ ಸಿಲಿಂಡರ್‌ ಸ್ಟೋಟದಿಂದ ಮತ್ತೊಂದು ಅಗ್ನಿ ಅವಘಡ….

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು, ಕೋರಮಂಗಲ ಸಮೀಪರ ಪಬ್‌ ನಲ್ಲಿ ಸಿಲಿಂಡರ್‌ ಸ್ಟೋಟದಿಂದ ಅಗ್ನಿ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ ಕಟ್ಟಡದ ನಾಲ್ಕನೇ ಮಹಡಿ ಸಂಪೂರ್ಣ ಹೊತ್ತಿ ಉರಿದಿದೆ. ಇನ್ನೂ ನೋಡ ನೋಡುತ್ತಿದ್ದಂತೆ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಪ್ರಾಣ ಉಳಿಸಿಕೊಳ್ಳಲು ವ್ಯಕ್ತಿಯೊರ್ವ ನಾಲ್ಕನೇ ಮಹಡಿಯಿಂದ ಜಿಗಿದಿದ್ದಾನೆ. ಸಿಲಿಂಡರ್ ಸ್ಫೋಟದಿಂದ ಕೋರಮಂಗಲದ ಮಡ್‌ ಪೈಪ್ ಹುಕ್ಕಾ ಪಬ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆ ಕಟ್ಟಡದ ನಾಲ್ಕನೇ ಮಹಡಿ ಸಂಪೂರ್ಣ …

Read More »

ಸಿಲಿಕಾನ್ ಸಿಟಿಯಲ್ಲಿ ಸರ್ಕಾರಿ ಭೂಮಿಗಳು ಅಲ್ಲಲ್ಲಿ ಒತ್ತುವರಿ ಆಗಿದ್ದರ ವಿರುದ್ಧ ಸಮರ…

ಬೆಂಗಳೂರು: ಬೃಹದಾಕಾರವಾಗಿ ಬೆಳೆಯುತ್ತಿರುವ ಸಿಲಿಕಾನ್ ಸಿಟಿಯಲ್ಲಿ ಸರ್ಕಾರಿ ಭೂಮಿಗಳು ಅಲ್ಲಲ್ಲಿ ಒತ್ತುವರಿ ಆಗಿದ್ದರ ವಿರುದ್ಧ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA)ಸಮರ ಮುಂದುವರಿಸಿದೆ. ಇದೀಗ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಅತಿಕ್ರಮಣವಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು ಪ್ರಾಧಿಕಾರ ಮರಳಿ ಪಡೆದಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ₹25 ಕೋಟಿ ಮೌಲ್ಯದ 05 ಎಕರೆ ಭೂಮಿ ಒತ್ತುವರಿ ಆಗಿತ್ತು. ಮಂಗಳವಾರ ಒತ್ತುವರಿ ವಿರುದ್ಧ ಕ್ರಮ ಕೈಗೊಂಡ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅತಿಕ್ರಮಣ ತೆರವುಗೊಳಿಸಿ …

Read More »

‘ನಗಬ್ಯಾಡ್ವೇ ನನ್ನಕಂಡು, ನಾನೂ ಬಿಎ ಮಾಡಿದ ಗಂಡು’ ಎಂಬ ಹಾಡು ಬಿಡುಗಡೆಯಾಗಿದೆ….

ಪೋಷಕ ನಟರಾಗಿದ್ದ ಧರ್ಮಣ್ಣ ಕಡೂರು ಮೊದಲಬಾರಿಗೆ ನಾಯಕನಾಗಿ ನಟಿಸಿರುವ ಚಿತ್ರ ರಾಜಯೋಗ. ಲಿಂಗರಾಜ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಟ್ರೈಲರ್.ಇತ್ತೀಚೆಗಷ್ಟೇ ರಿಲೀಸಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.ಇದರ ಬೆನ್ನಲ್ಲೇ ಈಗ ‘ನಗಬ್ಯಾಡ್ವೇ ನನ್ನಕಂಡು, ನಾನೂ ಬಿಎ ಮಾಡಿದ ಗಂಡು’ ಎಂಬ ಹಾಡು ಬಿಡುಗಡೆಯಾಗಿದೆ. ನಟ ಅಭಿಷೇಕ್ ಅಂಬರೀಶ್ ಅವರು ಈ ಹಾಡನ್ನು ರಿಲೀಸ್ ಮಾಡಿ ಮಾತನಾಡುತ್ತ ರಾಜಯೋಗ ಚಿತ್ರದ ಮೊದಲ ಹಾಡನ್ನು ನೋಡಿದೆ. ನನ್ನ ಕಡೆಯಿಂದ ಇಡೀ ಚಿತ್ರತಂಡಕ್ಕೆ ಶುಭ …

Read More »