BigTv News
October 5, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರು: ಶಿವಮೊಗ್ಗದಲ್ಲಿ ಈಡ್ ಮಿಲಾದ್ ಮೆರವಣಿಗೆ ವೇಳೆ ನಡೆದ ಘಟನೆಯು ರಾಜ್ಯಮಟ್ಟದಲ್ಲಿ ಸುದ್ದಿಯಾಗಿದ್ದು, ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆದ ಈ ಘಟನೆ ಮತ್ತು ಶಿವಮೊಗ್ಗ ಪರಿಸ್ಥಿತಿಯನ್ನು 1990ರ ದಶಕದಲ್ಲಿ ಕಾಶೀರದಲ್ಲಿನ ಘಟನೆ ಮತ್ತು ಅಂದಿನ ಪರಿಸ್ಥಿತಿಗಳಿಗೆ ಕರ್ನಾಟಕ ಬಿಜೆಪಿ ಹೋಲಿಕೆ ಮಾಡಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದೆ. ಈ ಕುರಿತು ಹೋಲಿಕೆಯ ಪಟ್ಟಿಗಳನ್ನು ನೀಡಿ ಗುರುವಾರ ಟ್ವೀಟ್ ಮಾಡಿರುವ ಬಿಜೆಪಿಯು, ಇತ್ತೀಚೆಗೆ …
Read More »
BigTv News
October 4, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರಿನಲ್ಲಿ ಜಾರ್ಖಂಡ್ ನೋಂದಾಯಿತ ವಾಹನದಲ್ಲಿ ಹೊರಟಿದ್ದ ಸ್ನೇಹಿತರ ಕಾರನ್ನು ಅಡ್ಡಗಟ್ಟಿದ ದ್ವಿಚಕ್ರ ವಾಹನ ಸವಾರ ಬೆದರಿಕೆ ಹಾಕಿದ್ದು, ಈ ದೃಶ್ಯಗಳನ್ನು ಕಾರಿನಲ್ಲಿದ್ದವರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಉತ್ತರ ಭಾರತದಲ್ಲಿ ಬೆಂಗಳೂರಿಗರನ್ನು ಗೂಂಡಾಗಳಂತೆ ಬಿಂಬಿಸುತ್ತಿದ್ದಾರೆ. ಹೀಗೆ ಬಿಂಬಿಸಲು ಇದೊಂದೆ ಘಟನೆ ಕಾರಣವಲ್ಲ, ಈ ಹಿಂದೆ ಇಸ್ರೋ ವಿಜ್ಞಾನಿಯೊಬ್ಬರಿಗೆ ಕಿರುಕುಳ ನೀಡಿದ ಘಟನೆ ಕೂಡ ಕಾರಣವಾಗಿದೆ. ಬೆಂಗಳೂರಿನಲ್ಲಿ ಕಾರುಗಳಲ್ಲಿ ಸಂಚರಿಸುವ ಜನರನ್ನು ಸ್ಥಳೀಯರು …
Read More »
BigTv News
October 4, 2023
ಕರ್ನಾಟಕ, ಧಾರವಾಡ, ಸುದ್ದಿ
ಧಾರವಾಡ: ಶಿಕ್ಷಕರ OPS ಹಣ ಬಿಡುಗಡೆ ಮಾಡುವುದು, ಹಳೆಯ ಪಿಂಚಣಿ ಯೋಜನೆಯನ್ನೇ ಜಾರಿಗೆ ತರುವುದು ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಪಡಿಸುವಂತೆ ಆಗ್ರಹಿಸಿ ಅಖಿಲ ಭಾರತ ಶಿಕ್ಷಕರ ಫೆಡರೇಶನ್ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ನೇತೃತ್ವದಲ್ಲಿ ನಡೆಯುತ್ತಿರುವ ಶಿಕ್ಷಕರ ಭಾರತ ಯಾತ್ರೆ ಉತ್ತರ ಪ್ರದೇಶ ತಲುಪಿದೆ. ವಿವಿಧ ರಾಜ್ಯಗಳಲ್ಲಿ ಯಾಲಿ ಹಾಗೂ ಸಮಾವೇಶಗಳನ್ನು ನಡೆಸಿದ ನಂತರ ಇದೀಗ ಯಾತ್ರೆಯು ಉತ್ತರ ಪ್ರದೇಶಕ್ಕೆ ಬಂದು ತಲುಪಿದೆ.ಮಧ್ಯಪ್ರದೇಶದ ರೇವಾದಲ್ಲಿ ನಿನ್ನೆ ಬೃಹತ್ ಸಮಾವೇಶ ನಡೆಸಿದ …
Read More »
BigTv News
October 4, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ತನ್ನ ಮೊದಲ ಲಘು ಯುದ್ಧ ವಿಮಾನ (ಎಲ್‌ಸಿಎ) ಟ್ವಿನ್-ಸೀಟರ್ ಟ್ರೈನರ್ ಆವೃತ್ತಿಯ ವಿಮಾನವನ್ನು ಬುಧವಾರ ಬೆಂಗಳೂರಿನಲ್ಲಿ ಭಾರತೀಯ ವಾಯುಪಡೆಗೆ (ಐಎಎಫ್) ಹಸ್ತಾಂತರಿಸಲಿದೆ. ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಮತ್ತು ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಅವರು ಎಲ್ ಸಿಎ ತೇಜಸ್ ವಿಭಾಗದ ಸ್ಥಾವರಕ್ಕೆ ಆಗಮಿಸಲಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮವು ಎಲ್‌ಸಿಎ ಟ್ವಿನ್ ಸೀಟರ್ ಅನ್ನು ಉತ್ಪಾದಿಸುವ ಪ್ರಮುಖ …
Read More »
BigTv News
October 4, 2023
ಕರ್ನಾಟಕ, ಸುದ್ದಿ, ಹುಬ್ಬಳ್ಳಿ, ಹುಬ್ಬಳ್ಳಿ ಸುದ್ದಿ
ಹುಬ್ಬಳ್ಳಿ:ಕಬ್ಬಿನ ಹೊಲದಲ್ಲಿ ನವಜಾತ ಶಿಶು ಪತ್ತೆ.ಧಾರವಾಡ ಜಿಲ್ಲೆ ಕಲಘಟಗಿ ಪಟ್ಟಣದ ಹೊರ ವಲಯದಲ್ಲಿ ಘಟನೆ ನಡೆದಿದೆ.ಕೆಇಬಿ ಗ್ರೀಡ್ ಬಳಿಯ ಕಬ್ಬಿನ ಹೊಲದಲ್ಲಿ ಪತ್ತೆಯಾದ ಮಗು.ಕಬ್ಬಿನ ಹೊಲದಲ್ಲಿಯೇ ಮಗುವಿಗೆ ಜನ್ಮ ನೀಡಿ ಪರಾರಿಯಾದ ತಾಯಿ.ಮೂರು ಕೆಜಿ ತೂಕವಿರುವ ಗಂಡು ಶಿಶು.ಇರುವೆಗಳು ಕಚ್ಚಲು ಆರಂಭಿಸಿದಾಗ ಅಳಲು ಆರಂಭಿಸಿದ್ದ ಮಗು,ಧ್ವನಿ ಕೇಳಿ ಸ್ಥಳೀಯರಿಂದ ಶಿಶು ರಕ್ಷಿಸಿ, ಆರೈಕೆ ಮಾಡಲಾಯಿತು.ಶಿಶುಪಾಲನಾ ಕೇಂದ್ರಕ್ಕೆ ಮಗು ರವಾನೆ ಮಾಡಲಾಗಿದೆ.ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
BigTv News
October 3, 2023
ಕರ್ನಾಟಕ, ಬೀದರ್, ಸುದ್ದಿ
ಬೀದರ್: ಕಾವೇರಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶ ಮಾಡಬೇಕು ಎಂಬ ಕೂಗಿನ ನಡುವೆಯೇ ಮೋದಿ ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದಾರೆ. ಹೌದು ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಮೋದಿ ಬೀದರ್‌ಗೆ ಆಗಮಿಸಲಿದ್ದಾರೆ. ಬೀದರ್‌ನ ವಾಯುಸೇನೆ ತರಬೇತಿ ಕೇಂದ್ರಕ್ಕೆ ಮಂಗಳವಾರ ಮಧ್ಯಾಹ್ನ 1.50ಕ್ಕೆ ವಿಶೇಷ ವಿಮಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಬೀದರ್ ಜಿಲ್ಲಾಡಳಿತ ಡ್ರೋನ್ ಹಾರಾಟ ನಿಷೇಧಿಸಿದೆ. ನರೇಂದ್ರ ಮೋದಿ ಭದ್ರತೆಯ ಶಿಷ್ಟಾಚಾರದಂತೆ ಬೀದರ್‌ನ ವಾಯುಸೇನೆ …
Read More »
BigTv News
October 3, 2023
ಕ್ರಿಕೆಟ್, ಕ್ರೀಡೆ, ಚೀನಾ, ಸುದ್ದಿ
ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 2023ರ ಏಷ್ಯನ್ ಗೇಮ್ಸ್‌ನ ಕ್ರಿಕೆಟ್ ಪಂದ್ಯಾವಳಿಯ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ನೇಪಾಳ ವಿರುದ್ಧ ಭಾರತ ತಂಡ 202 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಈ ವೇಳೆ ಭಾರತದ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ಹ್ಯಾಂಗ್‌ಝೌನ ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ನೇಪಾಳ ವಿರುದ್ಧ ಪಂದ್ಯದಲ್ಲಿ ತಮ್ಮ ಚೊಚ್ಚಲ ಟಿ20 ಅಂತಾರಾಷ್ಟ್ರೀಯ ಶತಕ ಗಳಿಸಿದ ಅತ್ಯಂತ ಕಿರಿಯ ಭಾರತೀಯ ಎಂಬ ಗಮನಾರ್ಹ ಸಾಧನೆ ಮಾಡಿದರು.ಯಶಸ್ವಿ …
Read More »
BigTv News
October 3, 2023
ಕರ್ನಾಟಕ, ಕೊಡಗು, ಸುದ್ದಿ
ಕೂರ್ಗ್ ಮತ್ತು ಚಿಕ್ಕಮಗಳೂರಿನಂತಹ ಗಿರಿಧಾಮಗಳಿಗೆ ಭೇಟಿ ಕೊಟ್ಟು ಬೇಸತ್ತಿದ್ದಲ್ಲಿ, ಈ ಗಿರಿಧಾಮಗಳಷ್ಟೇ ರಮಣೀಯವಾದ ಹಾಗೂ ಜನದಟ್ಟಣೆ ಕಡಿಮೆಯಿರುವ ಕೆಲವು ಗಿರಿಧಾಮಗಳಿಗೆ ಭೇಟಿ ಕೊಡಿ. ದಕ್ಷಿಣಭಾರತದ ರಾಜ್ಯಗಳಲ್ಲಿ ಕರ್ನಾಟಕವು ಶ್ರೀಮಂತ ರಾಜ್ಯವೆಂಬ ವಿಷಯ ಹೊಸತೇನು ಅಲ್ಲ ಇದು ಇನ್ನೂ ಅನ್ವೇಷಣೆಗೆ ಒಳಗಾಗದೇ ಇರುವಂತಹ ಹಲವಾರು ಕಣಿವೆಗಳು ಗಿರಿಗಳು ಮತ್ತು ಅರಣ್ಯಗಳನ್ನು ಹೊಂದಿದೆ. ಆದುದರಿಂದ ಇವುಗಳು ನಿಮಗೆ ಬೇಕಾದ ಆನಂದವನ್ನು ಒದಗಿಸುವಾಗ ಯಾವಾಗಲೂ ಅನ್ವೇಶಿತ ಪ್ರದೇಶಗಳಿಗೇ ಏಕೆ ಕೊಡುವಿರಿ? ಈ ಕೆಳಗಿನ ಪಟ್ಟಿಯಲ್ಲಿ …
Read More »
BigTv News
October 3, 2023
ಕರ್ನಾಟಕ, ಮೈಸೂರು, ಸುದ್ದಿ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯೇ ವಿದ್ಯುತ್ ದೀಪಗಳಿಂದ ಜಗಮಗಿಸುವ ಅರಮನೆ. ಈ ಅರಮನೆ ದಸರಾ ಮಾತ್ರವಲ್ಲದೆ ಎಲ್ಲ ದಿನಗಳಲ್ಲಿಯೂ ರಾತ್ರಿ ವೇಳೆ ನಿಗದಿತ ಅವಧಿಯಲ್ಲಿ ವಿದ್ಯುದ್ದೀಪಗಳಿಂದ ಮಿನುಗುತ್ತಾ ಗಮನಸೆಳೆಯುತ್ತದೆ. ಈ ಸುಂದರ ದೃಶ್ಯಗಳನ್ನು ಸವಿಯಲೆಂದೇ ಪ್ರವಾಸಿಗರು ಅರಮನೆಯತ್ತ ನೆರೆಯುತ್ತಾರೆ. ಅರಮನೆಗೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ವಿದ್ಯುತ್ ಬಲ್ಬ್‌ಗಳಿಂದ ಅಲಂಕೃತಗೊಂಡಿದ್ದು, ಈ ಬಲ್ಬ್‌ಗಳು ಹಲವು ಕಾರಣಗಳಿಗೆ ಹಾಳಾಗುತ್ತವೆ. ಅಂತಹ ಬಲ್ಬ್‌ಗಳನ್ನು ತೆಗೆದು ಹೊಸ ಬಲ್ಬ್‌ಗಳನ್ನು ಅಳವಡಿಸುವ ಕಾರ್ಯ …
Read More »
BigTv News
October 3, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಈ ವರ್ಷ ಮಳೆ ಪ್ರಮಾಣ ತೀವ್ರ ಕಡಿಮೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. 2018ರ ಬಳಿಕ ದೇಶದಲ್ಲಿ ಮೊದಲ ಬಾರಿಗೆ ವಾಡಿಕೆಗಿಂತ ಕಡಿಮೆ ಮಳೆ ಸುರಿದಿದೆ. ಕಳೆದ 5 ವರ್ಷಗಳಲ್ಲೇ ಈ ಬಾರಿ ಕಡಿಮೆ ಪ್ರಮಾಣದ ಮಳೆಯಾಗಿರುವುದು ಕೃಷಿ ವಲಯವನ್ನು ತೀವ್ರ ಸಂಕಷ್ಟಕ್ಕೆ ತಳ್ಳಿದೆ. ಎಲ್ ನಿನೋ ಕಾರಣದಿಂದ ಈ ಬಾರಿ ಮಳೆ ಕಡಿಮೆಯಾಗಿದೆ. ಶತಮಾನದಲ್ಲೇ ಮೊದಲ ಬಾರಿಗೆ ಆಗಸ್ಟ್‌ನಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ ಎಂದು ಸರ್ಕಾರಿ ಹವಾಮಾನ ಇಲಾಖೆ ವರದಿಯಲ್ಲಿ …
Read More »