Breaking News

ಸುದ್ದಿ

ಆಗಸದ ಕೌತುಕ ಸೂಪರ್‌ಮೂನ್ ಆಗಸ್ಟ್​ 1ರಂದು ಗೋಚರ…!

ನವದೆಹಲಿ: ಆಗಸ ಸದಾ ಕೌತುಕದ ಕಣಜ. ಅಲ್ಲಿ ನಡೆಯುವ ಅನೇಕ ಬೆಳವಣಿಗೆಗಳು ನಮಗೆ ಅಚ್ಚರಿ ಮೂಡಿಸುತ್ತವೆ. ಅದೇ ರೀತಿಯ ಘಟನೆಗಳಿಗೆ ಆಗಸ್ಟ್​ ತಿಂಗಳು ಸಾಕ್ಷಿಯಾಗಲಿದೆ. ಆಗಸ್ಟ್​ನಲ್ಲಿ ಬಾನಂಗಳದಲ್ಲಿ ಎರಡು ಬ್ಲೂ ಮೂನ್​ ಕಾಣಿಸಿಕೊಳ್ಳುತ್ತಿದೆ.ಸಾಮಾನ್ಯ ಹುಣ್ಣಿಮೆಯಲ್ಲಿ ಹೊಳೆಯುವ ಚಂದ್ರ ಈ ಬಾರಿ ಸೂಪರ್‌ಮೂನ್​ನಲ್ಲಿ ಮತ್ತಷ್ಟು ಪ್ರಖರವಾಗಿ ಕಾಣಿಸಿಕೊಳ್ಳಲಿದ್ದಾನೆ. ವರ್ಷದ ಮೊದಲ ಸೂಪರ್‌ಮೂನ್​ ಜುಲೈನಲ್ಲಿ ಗೋಚರಿಸಿತ್ತು. ಆದರೀಗ ಒಂದೇ ತಿಂಗಳಲ್ಲಿ ಎರಡು ಸೂಪರ್‌ಮೂನ್ ಅನ್ನು ನೀವು ಆನಂದಿಸಬಹುದು. ಅಪರೂಪದ ವಿದ್ಯಮಾನ ವಿಜ್ಞಾನಿಗಳು ಹೇಳುವಂತೆ, …

Read More »

ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಮಂಡ್ಯಕ್ಕೆ ಆಗಮಸಿದ ಸಿಎಂ ಸಿದ್ದರಾಮಯ್ಯ…

ಮಂಡ್ಯ: ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ಇಂದು ಸಿಎಂ ಮಂಡ್ಯ ಜಿಲ್ಲೆಗೆ ಭೇಟಿ ನೀಡಿದ್ದು, ಮಂಡ್ಯ ತಾಲೂಕಿನ ಗುಮ್ಮಡಹಳ್ಳಿ ಗೇಟ್ ಹೆದ್ದಾರಿ ವೀಕ್ಷಣೆ ನಡೆಸಿದ್ದಾರೆ. ಅಪಘಾತ ಹೆಚ್ಚಾದ ಹಿನ್ನೆಲೆ ಅಳವಡಿಸಿದ 360° ಕ್ಯಾಮರಾ ವೀಕ್ಷಿಸಿದ್ದಾರೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸ್ಪೀಡ್ ಡಿಟೆಕ್ಟರ್ ಗೆ ಚಾಲನೆ ನೀಡಿದ್ದು, ಹೊಸ ತಂತ್ರಜ್ಞಾನ ಬಳಸಿ ಸ್ವೀಡ್ ಡಿಟೆಕ್ಟರ್ ಅಳವಡಿಕೆ ಮಾಡಲಾಗಿದೆ. ವಾಹನಗಳ ವೇಗ ಕ್ಯಾಪ್ಚರ್ ಮಾಡಲು ಎಐ ತಂತ್ರಜ್ಞಾನ ಬಳಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದ್ದು, …

Read More »

ಮುಳಗುಂದದಲ್ಲಿ ಭಾವೈಕ್ಯತೆಯ ಮೊಹರಂ ಆಚರಣೆ…

ಮುಳಗುಂದ : ಹಿಂದು ಮುಸ್ಲಿಂ ಭಾವೈಕ್ಯತೆಯ ಪ್ರತೀಕ ಮೊಹರಂ ಹಬ್ಬವನ್ನು ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಕೋಲಾಟ, ಯುವಕರ ಹೆಜ್ಜೆ ಮೇಳ ಮೆರವಣಿಗೆಯೊಂದಿಗೆ ಶನಿವಾರ ಆಚರಿಸಲಾಯಿತು.ಸಂಪ್ರದಾಯದಂತೆ ಪಟ್ಟಣದ ದಾವಲ್ ಮಲ್ಲಿಕ ಪಹಾಡ, ನದಾಫ್ ಗಲ್ಲಿ ಕೌಲಪೇಟಿ, ಮಕಾನದಾರ ಮಸೀದಿ, ಚಿಂದಿಪೇಟಿ, ಸವಳಭಾವಿ, ತಿಗಡಿಕೇರಿ, ಬಂಡಿ ಓಣಿ, ಸಂಗನಪೇಟಿನಲ್ಲಿ ಪ್ರತಿಷ್ಠಾಪಿಸಲಾದ (ಪಂಜಾ) ಅಲೈದೇವರು, ಡೋಲಿ ಮೆರವಣೆಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಿ ಮಹಾಂತ ಶಿವಯೋಗಿಶ್ವರ ಮಠದ ಹತ್ತಿರ ಪರಸ್ಪರ ಎದರುಗೊಂಡ (ಅಲೈಬಲೈ) …

Read More »

ಅವಳಿ ನಗರದ ವಿವಿಧ ಪ್ರದೇಶದಲ್ಲಿ ಕ್ರಿಮಿನಾಶಕ ಎಣ್ಣೆ ಸಿಂಪಡಣೆ..

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಡೆಂಗ್ಯೂ ಮತ್ತು ಮಲೇರಿಯಾ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಸೊಳ್ಳೆಗಳ ನಿಯಂತ್ರಣ ಮಾಡಲು ಮಹಾನಗರ ಪಾಲಿಕೆಯಿಂದ ಅವಳಿ ನಗರದ ವಿವಿಧ ಪ್ರದೇಶದಲ್ಲಿ ಕ್ರಿಮಿನಾಶಕ ಎಣ್ಣೆಯನ್ನು ಸಿಂಪಡಿಸಲಾಯಿತು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತರು, ಆರೋಗ್ಯ ನಿರೀಕ್ಷಕರು, ವಾರ್ಡ್ ಜಮಾದಾರರು ಉಪಸ್ಥಿತರಿದ್ದರು.

Read More »

ಗೋವನಾಳ ಗ್ರಾಮ ಪಂಚಾಯಿತಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ…

ಲಕ್ಷ್ಮೇಶ್ವರ: ತಾಲೂಕಿನ ಗೋವನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮಂಜನಗೌಡ ನಿಂಗನಗೌಡ ಕೆಂಚನಗೌಡ್ರ ಮತ್ತು ಉಪಾಧ್ಯಕ್ಷೆಯಾಗಿ ನಿರ್ಮಲಾ ಚಂದ್ರಶೇಖರ ತಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಮೂರು ಗ್ರಾಮಗಳಾದ ಗೋವನಾಳ ಗುಲಗೊಂಜಿಕೊಪ್ಪ, ವಡೆಯರ ಮಲ್ಲಾಪುರ ಇರುವ ಪಂಚಾಯತಿಗೆ 8 ಸದಸ್ಯ ಸ್ಥಾನಗಳನ್ನು ಹೊಂದಿರುವ ಗ್ರಾಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಅ ವರ್ಗದ ಮಹಿಳೆಗೆ ಮೀಸಲಾಗಿತ್ತು. ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಇಬ್ಬರು ಸದಸ್ಯರು ಗೈರಾಗಿದ್ದರು. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ …

Read More »

ಮೂಲದಲ್ಲೇ ಕಸ ವಿಂಗಡಣೆ ಮಾಡಲು ಪ್ರಾಮುಖ್ಯತೆ ನೀಡಿ-ಸುಭಾಷ್ ಆಡಿ..!

ಹುಬ್ಬಳ್ಳಿ: ಘನತ್ಯಾಜ್ಯ ವಸ್ತು ನಿರ್ವಹಣೆಯನ್ನು ಸರಿಯಾಗಿ ಮಾಡಬೇಕು. ಮೂಲದಲ್ಲೇ ಕಸ ವಿಂಗಡಣೆ ಮಾಡಲು ಅಧಿಕಾರಿಗಳು ಪ್ರಾಮುಖ್ಯತೆ ನೀಡಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯ ಮಟ್ಟದ ಸಮಿತಿಯ ಅಧ್ಯಕ್ಷರಾದ ನಿವೃತ್ತ ನ್ಯಾಯಾಧೀಶ ಸುಭಾಷ್ ಆಡಿ ಹೇಳಿದರು.ಇಲ್ಲಿನ ಸರ್ಕ್ಯೂಟ್ ಹೌಸ್ ನಲ್ಲಿ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಧಾರವಾಡ ವಿಭಾಗ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ಪಾಲಿಕೆಯ ಎಲ್ಲಾ ವಲಯಾಧಿಕಾರಿಗಳು ಒಂದು …

Read More »

ಬಿಡನಾಳದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಮೊಹರಂ ಹಬ್ಬ…!

ಹುಬ್ಬಳ್ಳಿ: ಮೊಹರಮ್ ಹಬ್ಬ ಅಂದರೆ ಅದು ಕೇವಲ ಇಸ್ಲಾಂ ಧರ್ಮದವರು ಮಾತ್ರ ಆಚರಣೆ ಮಾಡುವ ಹಬ್ಬವಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಸೌಹಾರ್ದತೆಯನ್ನು ಗಟ್ಟಿಗೊಳಿಸುವ ಹಬ್ಬ ಎಂದೇ ಮೊಹರಮ್ ಹಬ್ಬ ಖ್ಯಾತಿ ಪಡೆದಿದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ ತಾಲೂಕಿನ ಬಿಡನಾಳ ಗ್ರಾಮದಲ್ಲಿ ವಿನೂತನ ಹಾಗೂ ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ. ಹಾಗಿದ್ದರೇ ಹೇಗಿದೆ ಮೊಹರಮ್ ಆಚರಣೆ ಅಂತೀರಾ ತೋರಿಸ್ತಿವಿ ನೋಡಿ.. ಹುಬ್ಬಳ್ಳಿಯ ಕೂಗಳತೆಯ ದೂರದಲ್ಲಿರುವ ಬಿಡನಾಳ ಗ್ರಾಮದಲ್ಲಿ …

Read More »

ಆಗಸ್ಟ್ 2ರಂದು ಮಂಗಳಮುಖಿಯರಿಗಾಗಿ ಮೂರನೇ ಮುಖ ಕಾರ್ಯಕ್ರಮ….

ಹುಬ್ಬಳ್ಳಿ: ನವಶ್ರೀ ಕಲಾ ಚೇತನಾ ಸಂಸ್ಥೆ ವತಿಯಿಂದ ಮಂಗಳಮುಖಿಯ ‘ಮೂರನೆಯ ಮುಖ’ ಎಂಬ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಗಷ್ಟೇ 02 ರಂದು ಸಂಜೆ 5 ಗಂಟೆಗೆ ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾಭವನದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರು ಸಂಗೀತಾ ದೇವದಾಸ್ ಹೇಳಿದರು.ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಮಾಸ ನಿಮಿತ್ತವಾಗಿ ದೇಶಪಾಂಡೆನಗರದ ಕಾಮಾಕ್ಷಿ ದೇವಸ್ಥಾನದಿಂದ ಸವಾಯಿ ಗಂಧರ್ವ ಕಲಾಭವನದವರೆಗೆ ಮೆರವಣಿಗೆ ಇರಲಿದ್ದು, ನಂತರ ಎಲ್ಲಮ್ಮ ಉತ್ಸವ ಎಂಬ ಕಾರ್ಯಕ್ರಮದ ಮೂಲಕ ವಿವಿಧ …

Read More »

ಮಗುವಿಗೆ ಲಿವರ್ ನೀಡಿ ಜೀವದಾನ ಮಾಡಿದ ತಂದೆ..

ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಯಕೃತ್ತಿನ ಸಮಸ್ಯೆ ವಯಸ್ಕರ ಹಾಗೆಯೇ ಮಕ್ಕಳಲ್ಲಿ ಕೂಡ ಕಾಡುತ್ತಿದೆ. ಈ ನಿಟ್ಟಿನಲ್ಲಿ ತಂದೆಯೊಬ್ಬ ಮಗುವಿನ ಕಾಯಿಲೆಗೆ ತನ್ನ ಯಕೃತ್ತನ್ನು ನೀಡುವ ಮೂಲಕ ಮಗುವಿಗೆ ಮರು ಜನ್ಮ ನೀಡಿರುವ ವಿಶೇಷ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪ್ರಸ್ತುತ ದಿನಮಾನಗಳಲ್ಲಿ ವಯಸ್ಕರಿಗಿಂತ ಮಕ್ಕಳ ಲಿವರ್ ಸಮಸ್ಯೆ ಸಾಕಷ್ಟು ಸವಾಲಿನೊಂದಿಗೆ ಬರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಈ ಮೊದಲು ವಯಸ್ಕರಲ್ಲಿ ಹಾಗೂ ಅತಿಯಾದ ಮದ್ಯಪಾನ ಮಾಡುವವರಲ್ಲಿ ಕಾಣಿಸಿಕೊಳ್ಳುತ್ತಿದ್ದ ಲಿವರ್ ಸಂಬಂಧಿಸಿದ ಕಾಯಿಲೆಗಳು ಹಾಗೂ …

Read More »

ಶಾಸಕ ತನ್ವೀರ್ ಸೇಠ್ ಬರೆದ ಪತ್ರದ ವಿರುದ್ಧ ಶಾಸಕ ಯತ್ನಾಳ್ ಕಿಡಿ…

ಬೆಂಗಳೂರು: ತನ್ವೀರ್ ಸೇಠ್ ಪತ್ರದ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ. ಈ ಹಿಂದೆ ಶಾಸಕ ತನ್ವೀರ್ ಸೇಠ್, ‘ಅಮಾಯಕರ ಮೇಲಿನ ಪ್ರಕರಣಗಳನ್ನು ಬಿಟ್ಟು ಬಿಡುವಂತೆ’ ಕೋರಿ ಪತ್ರ ಬರೆದಿದ್ದರು. ಈ ವಿಚಾರವಾಗಿ ವಿವಾದ ಉಂಟಾಗಿದ್ದು ಇದೀಗ ಬಸನಗೌಡ ಪಾಟೀಲ ಯತ್ನಾಳ್ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.ತನ್ವೀರ್ ಸೇಠ್ ಬರೆದಿದ್ದ ಪತ್ರದ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಕಿಡಿಕಾರಿದ್ದಾರೆ. ಶಾಸಕ ತನ್ವೀರ್ ಸೇಠ್ ಬರೆದ ಪತ್ರವನ್ನು ಟ್ಯಾಗ್ …

Read More »