Breaking News

ಧಾರವಾಡದಲ್ಲಿ ಪತ್ತೆಯಾದ ಇನ್ ಸ್ಟಾಗ್ರಾಂನಲ್ಲಿ ಅಶ್ಲೀಲವಾಗಿ ಪೋಟೊ ಎಡಿಟ್ ಮಾಡು ತಂಡ

ಧಾರವಾಡ: ಇನ್‌ಸ್ಟಾಗ್ರಾಂನ ಆ್ಯಪ್‌ನಲ್ಲಿ ಫೋಟೋಗಳನ್ನು ತೆಗೆದುಕೊಂಡು ಅಶ್ಲೀಲ ಧ್ವನಿ ಸೇರಿಸಿ ಎಡಿಟ್ ಮಾಡಿ ಅವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುವ ಗ್ಯಾಂಗೊಂದು ಪತ್ತೆಯಾಗಿದೆ.

ಧಾರವಾಡದಲ್ಲಿ ಇದೀಗ ಸೆರೆಯಾಗಿದ್ದಾರೆ. ಈಗಾಗಲೇ ಮೂವರನ್ನು ಉಪನಗರ ಠಾಣೆ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. ಸಚಿನ್ ಖಡಕಬಾವಿ, ಅಕ್ಷಯ ಕಾಂಬಳೆ, ಆಕಾಶ ಮೇಟಿ ಹಾಗೂ ಸಚಿನ್ ಖಡಕಬಾವಿ ಎಂಬಾತನ ತಂದೆಯ ವಿರುದ್ಧ ಧಾರವಾಡದ ಉಪನಗರ ಠಾಣೆಯಲ್ಲಿ ಕೆಲ ವಿದ್ಯಾರ್ಥಿಗಳು ದೂರು ದಾಖಲಿಸಿದ್ದರು.

ಧಾರವಾಡದ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿನಿಯರು ತಮ್ಮ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದರು. ಆ ಫೋಟೋಗಳಿಗೆ ಆರೋಪಿಗಳು ಅಶ್ಲೀಲ ಧ್ವನಿ ಸೇರಿಸಿ ಎಡಿಟ್ ಮಾಡಿ ಟ್ರೋಲ್ ಪೇಜ್‌ನಲ್ಲಿ ಹಾಕಿಕೊಂಡಿದ್ದರು. ಅವುಗಳನ್ನು ಡಿಲೀಟ್ ಮಾಡುವಂತೆ ವಿದ್ಯಾರ್ಥಿನಿಯರು ಕೇಳಿಕೊಂಡಿದ್ದಕ್ಕೆ ಈ ಆರೋಪಿಗಳು ಹಣದ ಬೇಡಿಕೆ ಸಹ ಇಟ್ಟಿದ್ದರು. 15-20 ಸಾವಿರ ಕೊಟ್ಟರೆ ಫೋಟೋಗಳನ್ನು ಡಿಲೀಟ್ ಮಾಡಲಾಗುವುದು ಇಲ್ಲದೇ ಹೋದರೆ ಅವುಗಳನ್ನೇ ಬೆತ್ತಲೆ ಫೋಟೋಗಳನ್ನಾಗಿ ಮಾಡಿ ಮತ್ತೆ ಹರಿಬಿಡಲಾಗುವುದು ಎಂದು ಬೆದರಿಕೆ ಸಹ ಹಾಕಿದ್ದರು. ಈ ವಿಷಯವನ್ನು 6 ಜನ ವಿದ್ಯಾರ್ಥಿನಿಯರು ಸಚಿನ್ ಖಡಕಬಾವಿ ಅವರ ತಂದೆಯ ಗಮನಕ್ಕೂ ತಂದಿದ್ದರು. ಆದರೆ, ಸಚಿನ್ ತಂದೆ ಅದೇ ವಿದ್ಯಾರ್ಥಿನಿಯರಿಗೆ ದೂರು ನೀಡದಂತೆ ಜೀವ ಬೆದರಿಕೆ ಸಹ ಹಾಕಿದ್ದರು ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪನಗರ ಠಾಣೆ ಪೊಲೀಸರು ಸಚಿನ್‌ ತಂದೆಯೂ ಸೇರಿದಂತೆ ಮೂವರನ್ನು ವಶಕ್ಕೆ ಪಡೆದಿದ್ದು, ಸಚಿನ್ ಖಡಕಬಾವಿಗಾಗಿ ಹುಡುಕಾಟ ನಡೆಸಿದ್ದಾರೆ.

Share News

About Shaikh BigTv

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *