Breaking News

ನೂತನ ಅಂತಾರಾಷ್ಟ್ರೀಯ ಕಂಟೈನರ್ ಟರ್ಮಿನಲ್ ನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

ಚೆನ್ನೈ: ತಮಿಳುನಾಡಿನ ತೂತುಕುಡಿ ಬಂದರಿನಲ್ಲಿ ನೂತನ ಅಂತಾರಾಷ್ಟ್ರೀಯ ಕಂಟೈನರ್ ಟರ್ಮಿನಲ್ ಅನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಪ್ರಧಾನಿ, ಎರಡು ವರ್ಷಗಳ ಹಿಂದೆ ನಾನು ವಿ.ಓ. ಚಿದಂಬರನಾರ್ ಪೋರ್ಟ್‌ಗೆ ಸಂಬಂಧಿಸಿದ ಹಲವಾರು ಯೋಜನೆಗಳನ್ನು ಪ್ರಾರಂಭಿಸಿದ್ದು ನನಗೆ ನೆನಪಿದೆ.
ಆ ಸಮಯದಲ್ಲಿ ಈ ಬಂದರಿನ ಸರಕು ನಿರ್ವಹಣೆ ಸಾಮರ್ಥ್ಯವನ್ನು ಹೆಚ್ಚಿಸಲು ಅನೇಕ ಕೆಲಸಗಳನ್ನು ಪ್ರಾರಂಭಿಸಲಾಯಿತು. ಫೆಬ್ರವರಿಯಲ್ಲಿ ನಾನು ತೂತುಕುಡಿಗೆ ಬಂದಾಗ ಅನೇಕ ಬಂದರು ಸಂಬಂಧಿತ ಕೆಲಸಗಳು ಪ್ರಾರಂಭವಾದವು. ಈ ಕೆಲಸಗಳ ವೇಗ ನೋಡಿ ನನ್ನ ಖುಷಿ ದುಪ್ಪಟ್ಟಾಗಿತ್ತು ಎಂದರು.
ಇದೀಗ ಈ ಹೊಸ ಟರ್ಮಿನಲ್ ನಲ್ಲಿ 40% ರಷ್ಟು ಮಹಿಳೆಯರೇ ಉದ್ಯೋಗಿಗಳಾಗಿದ್ದು, ನನಗೆ ಖುಷಿ ತಂದಿದೆ. ಆದ್ದರಿಂದ ಈ ಟರ್ಮಿನಲ್ ಸಮುದ್ರ ವಲಯದಲ್ಲಿ ಮಹಿಳಾ ನಾಯಕತ್ವದ ಸಂಕೇತವಾಗಲಿದೆ ಎಂದು ಮೋದಿ ಹರ್ಷ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಈ ಟರ್ಮಿನಲ್ ಭಾರತದ ಕಡಲ ಮೂಲಸೌಕರ್ಯದಲ್ಲಿ ಹೊಸ ನಕ್ಷತ್ರವಾಗಿದೆ. ಇದರಿಂದ ವಿ.ಓ. ಚಿದಂಬರನಾರ್ ಬಂದರಿನ ಸಾಮರ್ಥ್ಯವು ಹೆಚ್ಚಾಗುತ್ತದೆ ಮತ್ತು ಲಾಜಿಸ್ಟಿಕ್ಸ್ ವೆಚ್ಚವು ಕಡಿಮೆಯಾಗುತ್ತದೆ ಮತ್ತು ದೇಶದ ವಿದೇಶಿ ವಿನಿಮಯ ವೆಚ್ಚವೂ ಉಳಿತಾಯವಾಗುತ್ತದೆ ಎನ್ನಲಾಗಿದೆ.

Share News

About BigTv News

Check Also

80s ಫೋಟೋ ಟ್ರೆಂಡ್‌ನಲ್ಲೂ ಸೈಬರ್ ವಂಚಕರ ಕನ್ನ: ಹಣ ಕೊಡದಿದ್ದಕ್ಕೆ ಬೆತ್ತಲೆ ಫೋಟೋ ಹರಿಬಿಟ್ಟ ವಂಚಕರು

ಬೆಂಗಳೂರು ಉತ್ತರ ತಾಲೂಕಿನ ಬಾಗಲಗುಂಟೆಯ ವಿನೋದ್ (45) ಎಂಬುವರು 80ರ ದಶಕದ ಶೈಲಿಯಲ್ಲಿ ಫೋಟೋ ಎಡಿಟ್ ಮಾಡಲು ನಕಲಿ ಆ್ಯಪ್ …

Leave a Reply

Your email address will not be published. Required fields are marked *