ನವದೆಹಲಿ: ಭಾರತದ ನವೀಕರಿಸಬಹುದಾದ ಇಂಧನ (ಆರ್ಇ) ವಲಯ 2030ರ ವೇಳೆಗೆ 32.45 ಲಕ್ಷ ಕೋಟಿ ರೂ. ಹೂಡಿಕೆಗೆ ತೆರೆದುಕೊಳ್ಳಲಿದೆ ಎಂದು ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ನವೀಕರಿಸಬಹುದಾದ ಇಂಧನ ಯೋಜನೆಯ ಡೆವಲಪರ್ಗಳು ಮತ್ತು ಉಪಕರಣ ತಯಾರಕರು ಮಹತ್ವಾಕಾಂಕ್ಷೆಯ ವಿಸ್ತರಣಾ ಯೋಜನೆಗಳನ್ನು ಹೊಂದುವ ಕೇಂದ್ರ ಸರ್ಕಾರದ ಗುರಿಗೆ ನೆರವಾಗಲಿದ್ದಾರೆ.
ಹಸಿರು ಇಂಧನ ಕಂಪನಿಗಳು 570 ಗಿಗಾ ವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾದನೆ, 338 ಗಿ.ವ್ಯಾ. ಸೌರ ಘಟಕ ಉತ್ಪಾದನಾ ಸಾಮರ್ಥ್ಯ, 239 ಗಿ.ವ್ಯಾ. ಸೌರಕೋಶ ಉತ್ಪಾದನಾ ಸಾಮರ್ಥ್ಯ, 22 ಗಿ.ವ್ಯಾ. ಪವನಶಕ್ತಿ ಉತ್ಪಾದನಾ ಸಾಮರ್ಥ್ಯ ಮತ್ತು 10 ಮೆ.ವ್ಯಾ. ಎಲೆಕ್ಟ್ರೋ ಟರ್ಬೆನ್ ಉತ್ಪಾದನಾ ಸಾಮರ್ಥ್ಯದ ಮೂಲಕ ನಮ್ಮ ಚಿಂತನೆಗಳನ್ನು 2030ರ ಒಳಗಾಗಿ ಜಾರಿಗೆ ತರಲು ಭರವಸೆ ನೀಡಿವೆ ಎಂದು ಸಚಿವರು ಹೇಳಿದ್ದಾರೆ.
2030ರ ವೇಳೆಗೆ 500 ಗಿಗಾ ವ್ಯಾಟ್ ನವೀಕರಿಸಬಹುದಾದ ಇಂಧನ ಹೊಂದುವ ಭಾರತದ ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ಪೂರಕವಾಗಿ 24.8 ಲಕ್ಷ ಕೋಟಿ ರೂ. ಮೌಲ್ಯದ ಸಾಲಗಳನ್ನು ನೀಡಲು ಬ್ಯಾಂಕ್ಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳು ತಮ್ಮ ಬದ್ಧತೆ ನೀಡಿವೆ ಎಂದು ಸಚಿವರು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

