Breaking News

ಪಿಎಂ ವಿಶ್ವಕರ್ಮ ಯೋಜನೆ ಅನುಷ್ಠಾನಕ್ಕೆ ಸೂಚನೆ: ವಿ.ಸೋಮಣ್ಣ

ತುಮಕೂರು: ಸಮಾಜದಲ್ಲಿ ಧ್ವನಿ ಇಲ್ಲದ ವಿಶ್ವಕರ್ಮ ಸಮುದಾಯವನ್ನು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಆದ್ಯತೆ ಮೇರೆಗೆ ಪರಿಗಣಿಸುವಂತೆ ಕೇಂದ್ರ ಜಲಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸಲಹೆ ನೀಡಿದರು.
ಯೋಜನೆ ಅನುಷ್ಠಾನದಲ್ಲಿ ಲೋಪ ಕಂಡುಬಂದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ವಿಶ್ವಕರ್ಮ ಸಮುದಾಯವು ಹಿಂದೂ ಧರ್ಮಕ್ಕೆ ನೀಡಿರುವ ಕೊಡುಗೆ ಸ್ಮರಣೀಯ. ವಿಶ್ವದ ಯಾವುದೇ ಕೆತ್ತನೆ, ಕುಸುರಿ, ಆಭರಣಗಳಲ್ಲಿ ವಿಶ್ವಕರ್ಮ ಸಮುದಾಯದವರ ಸ್ಪರ್ಶ ಕಾಣಬಹುದಾಗಿದೆ. ವಿಶ್ವಕರ್ಮರ ಸ್ಪರ್ಶವಿಲ್ಲದ ಗುಡಿ ಗೋಪುರಗಳಿಲ್ಲ, ಮಠ ಮಂದಿರಗಳಿಲ್ಲ, ಕೃಷಿ ಸಲಕರಣೆಗಳಿಲ್ಲ, ಜೀವಕಳೆ ಕೊಡುವ ದೇವತಾ ಮೂರ್ತಿಗಳಿಲ್ಲ ಎಂದು ಸಚಿವರು ಅಭಿಪ್ರಾಯಪಟ್ಟರು.

Share News

About BigTv News

Check Also

ಚಿನ್ನ ಖರೀದಿಸಲು ಬಂದವನಂತೆ ನಾಟಕವಾಡಿ ₹13 ಲಕ್ಷದ ಆಭರಣ ಎಗರಿಸಿದ ಖದೀಮ! ಕನ್ನಡಿಯಲ್ಲಿ ಮುಖ ನೋಡುತ್ತಲೇ ಮಾಲೀಕರಿಗೆ ಪಂಗನಾಮ

ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ₹13.20 ಲಕ್ಷ ಮೌಲ್ಯದ ಚಿನ್ನ ಕಳವು ಮಾಡಿದ್ದಾನೆ. ಪ್ರಕರಣಕ್ಕೆ …

Leave a Reply

Your email address will not be published. Required fields are marked *