Breaking News

19 ವರ್ಷದ ಬಳಿಕ ಬಾರಿ ಜನಸ್ತೋಮದ ನಡುವೆ ಜರುಗಿತು ಬಲಿ ಆಚರಣೆ ಉತ್ಸವ

ಚಾಮರಾಜನಗರ : ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ 19 ವರ್ಷದ ಬಳಿಕ ಸೀಗಮಾ ರಮ್ಮನ ಬಲಿ ಆಚರಣೆ ಉತ್ಸವ ಬಾರಿ ಜನಸ್ತೋಮದ ನಡುವೆ ಜರುಗಿತು.

ಗ್ರಾಮದ ಎಲ್ಲಾ ಸಮುದಾಯ ಜನರು ಸೇರಿ ಆಚರಣೆ ಮಾಡುವ ವಿಶೇಷ, ವೈಶಿಷ್ಟ್ಯವುಳ್ಳ ಹಬ್ಬ ಇದಾಗಿದೆ. ಕಳೆದ ತಿಂಗಳ 24 ರಂದು ಈ ಹಬ್ಬಕ್ಕೆ ಚಾಲನೆ ಸಿಕ್ಕಿತ್ತು. ಸೋಮವಾರ ತಡರಾತ್ರಿ ಬಲಿ ಆಚರಣೆಯು ಸಾಂಪ್ರದಾಯಿಕವಾಗಿ ನೆರವೇರಿತು.

ಗ್ರಾಮದ ಸೀಗಮಾರಮ್ಮನ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಖೇಲ್ ಉತ್ಸವ ತರುವುದಕ್ಕೆ ಬಲಿ ಬೀಳುವವರು ಸೇರಿದಂತೆ ಐದು‌ ಮಂದಿಯ ತಂಡ ತೆರಳಿ ಬಾವಿ ಹತ್ತಿರ ತೆರಳಿ ಪೂಜೆ ಸಲ್ಲಿಸಿ ತಾಮ್ರದ ಕೊಡದ ಮೂಲಕ ನೀರನ್ನು ಸಂಗ್ರಹಿಸಿ ಕುಣಿಯುತ್ತ ರಂಗಮಂದಿರ ಹತ್ತಿರ ಬರುವಾಗ ಎದುರು ಬದುರಾಗಿ ದೇವಿಯ ಮುಖವಾಡ ಮೆರವಣಿಗೆ ಮತ್ತು ಹೆಬ್ರ ದೇವರ ಮನೆಯಿಂದ ಹೆಬ್ರ ಬಡಿದು ಬರುವ ತಂಡ ಮುಖಾ ಮುಖಿ‌ಯಾಯಿತು.

ಬೆಳಂ ಬೆಳಗ್ಗೆ ಅರ್ಚಕರು ಜ್ಞಾನತಪ್ಪಿದ ವ್ಯಕ್ತಿಯ ಎದೆಮೇಲೆ ಕಾಲಿಟ್ಟ ಮೇಲೆ ಅವರ ಪ್ರಾಣಪಕ್ಷಿ ಹಾರಿ ಹೋಗಲಿದೆ ಎಂಬುದು ಪ್ರತೀತಿ ಇದೆ. ಬಳಿಕ ಆ ವ್ಯಕ್ತಿಯನ್ನು ಶವದ ಮೆರವಣಿಗೆ ರೀತಿ ಮಾಡಿ ಮೆರವಣಿಗೆ ಮುಗಿದ ಮೇಲೆ ದೇವಿಯ ತೀರ್ಥ ಪ್ರೋಕ್ಷಣೆ ಮಾಡಿದ ಮೇಲೆ ಜೀವ ಮರುಕಳಿಸುತ್ತದೆ ಎಂಬುದು ನಂಬಿಕೆಯಾಗಿದೆ.

ಇಂತಹ ಪುರಾಣ ಪ್ರಸಿದ್ಧ ಬಲಿ ಉತ್ಸವ ನಿನ್ನೆ ತಡರಾತ್ರಿ ಸಾವಿರಾರು ಸಂಖ್ಯೆ ಜನರ ಸಮ್ಮುಖದಲ್ಲಿ ನೆರವೇರಿತು.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *