ಧಾರವಾಡ: ಉದ್ದಟತನ ಪ್ರದರ್ಶಿಸಿದ ಹಲವು ಅಧಿಕಾರಿಗಳು ಈ ದೇಶದಲ್ಲಿ ಪಾಠ ಕಲಿತಿದ್ದಾರೆ. ಎಡಿಜಿಪಿ ಚಂದ್ರಶೇಖರ್ ಅವರಿಗೂ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಎಡಿಜಿಪಿ ಚಂದ್ರಶೇಖರ ಅವರು ಜಾರ್ಜ್ ಫರ್ನಾಂಡಿಸ್ ಹೆಸರು ಉಲ್ಲೇಖ ಮಾಡಿ, ಅವರು ಬಳಸಿದಂತ ಪದ ಯಾರೂ ಒಪ್ಪುವಂತದ್ದಲ್ಲ. ಅವರು ಹಿರಿಯ ಐಪಿಎಸ್ ಅಧಿಕಾರಿ ಎಂದು ಏನು ಬೇಕಾದರೂ ಮಾಡಬಹುದು ಎಂದುಕೊಂಡಿದ್ದಾರೆ. ಉದ್ದಟತನ ತೋರಿದ ಅನೇಕ ಅಧಿಕಾರಿಗಳು ಈ ದೇಶದಲ್ಲಿ ತಕ್ಕ ಪಾಠ ಕಲಿತಿದ್ದಾರೆ. ಇವರಿಗೂ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದರು.
ಈಶ್ವರಪ್ಪ ಅವರು ಮರಳಿ ಪಕ್ಷಕ್ಕೆ ಸೇರ್ಪಡೆಯಾಗುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಬೆಲ್ಲದ, ಪಕ್ಷಕ್ಕೆ ಬರುವವರನ್ನು ನಾವು ಸ್ವಾಗತ ಮಾಡುತ್ತೇವೆ. ಈಶ್ವರಪ್ಪನವರು ಪಕ್ಷಕ್ಕೆ ಬರುತ್ತಾರೆ ಎಂದರೆ ನಾವು ಸ್ವಾಗತ ಮಾಡುತ್ತೇವೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





