ಬೆಂಗಳೂರು: ರಾಜ್ಯ ಸರಕಾರವು ಕೂಡಲೇ ಬರ ಪರಿಹಾರವನ್ನು ಪ್ರಕಟಿಸದಿದ್ದರೆ ರಾಜ್ಯದ ಉದ್ದಗಲಕ್ಕೆ ತೆರಳಿ ಹೋರಾಟ ಮಾಡುವೆ. ರೈತರ ಪರವಾಗಿ ನಿಲ್ಲುವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಎಚ್ಚರಿಕೆ ನೀಡಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ 6 ಸಾವಿರ ಕೊಟ್ಟರೆ ನಾನು 4 ಸಾವಿರ ಕೊಡುತ್ತಿದ್ದೆ. ಅದನ್ನು ನಿಲ್ಲಿಸಿ ದ್ರೋಹ ಬಗೆದಿದ್ದೀರಲ್ಲವೇ? ನಿಮಗೆ ಅಧಿಕಾರಕ್ಕೆ ಮುಂದುವರೆಯಲು ನೈತಿಕ ಹಕ್ಕಿಲ್ಲ. ರೈತರ ಜೀವನದ ಜೊತೆ ಚೆಲ್ಲಾಟ ಸಲ್ಲದು ಎಂದು ಎಚ್ಚರಿಸಿದರು.
ಹಣ, ಹೆಂಡ, ತೋಳಬಲದಿಂದ ಅಧಿಕಾರಕ್ಕೆ ಬರುವ ಭ್ರಮೆಯಿಂದ ಇದ್ದ ಕಾಂಗ್ರೆಸ್‍ಗೆ ಪಂಚರಾಜ್ಯ ಚುನಾವಣೆಯ ಫಲಿತಾಂಶ ಸಮರ್ಪಕ ಉತ್ತರ ನೀಡಿದೆ. ನರೇಂದ್ರ ಮೋದಿಯವರಂಥ ನಾಯಕ ಕಾಂಗ್ರೆಸ್‍ನಲ್ಲಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಲೂಟಿ, ಹಗಲುದರೋಡೆ ಮುಂದುವರೆದಿದೆ ಎಂದ ಅವರು, ತಮ್ಮ ಕಾಲದಲ್ಲಿ ಭಾಗ್ಯಲಕ್ಷ್ಮೀ ಯೋಜನೆ ಜಾರಿ ಮಾಡಿದ್ದನ್ನು ನೆನಪಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





