ಮೈಸೂರು: ಲಷ್ಕರ್ ಮೊಹಲ್ಲಾದ ದಾವೂದ್ ಖಾನ್ ರಸ್ತೆಯಲ್ಲಿರುವ ಫಾರೂಕಿಯಾ ಬಾಲಕಿಯರ ಪ್ರೌಢಶಾಲೆಯ ಬಳಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಮೈಸೂರಿನ ಡಿಡಿಪಿಐ ಶಾಲೆಗೆ ಬೀಗ ಜಡಿದಿದ್ದಾರೆ.
ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಮತ್ತು ಶಾಲೆಯನ್ನು ನಡೆಸುತ್ತಿರುವ ರಿಫಾಲ್ ಮುಸ್ಲಿಮೀನ್ ಎಜುಕೇಷನಲ್ ಟ್ರಸ್ಟ್ (ಆರ್ ಎಂಇಟಿ) ಪ್ರತಿನಿಧಿಗಳು ಸೋಮವಾರ ಪ್ರತಿಭಟನಾ ರ‍್ಯಾಲಿಗೆ ಸಿದ್ಧರಾಗುತ್ತಿದ್ದಂತೆ, ಮುಂಜಾಗ್ರತಾ ಕ್ರಮವಾಗಿ ಶಾಲೆಯ ಹೊರಗೆ ಪೊಲೀಸರನ್ನು ನಿಯೋಜಿಸಲಾಗಿದೆ. ಡಿಡಿಪಿಐ ಅಧಿಕಾರಿಗಳು ಶನಿವಾರ ಶಾಲೆಯನ್ನು ಸೀಲ್ಡೌನ್ ಮಾಡಿದ ನಂತರ, 500 ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ತೀವ್ರ ತೊಂದರೆಯಾಗಿದೆ.
ಜೂನ್ 30 ರಂದು ಎಂಟನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ಮೈಸೂರು ನ್ಯಾಯಾಲಯವು ತಡೆಯಾಜ್ಞೆಯನ್ನು ಹೊರಡಿಸಿದ್ದರೂ ಅಧಿಕಾರಿಗಳು ತರಾತುರಿಯಲ್ಲಿ ಕಾರ್ಯನಿರ್ವಹಿಸಿ ಶಾಲೆಯನ್ನು ಮುಚ್ಚಿದರು ಎಂದು ಆರ್ ಎಂಇಟಿಯ ನಬಿಲ್ ಖಾನ್ ಹೇಳಿದ್ದಾರೆ. ಶಿಕ್ಷಣ ಇಲಾಖೆ ಮತ್ತು ಆರ್ ಎಂಇಟಿ ಹಲವಾರು ದಶಕಗಳಿಂದ ಶಾಲಾ ಕಟ್ಟಡ ಇರುವ ಭೂಮಿಯ ಬಗ್ಗೆ ಕಾನೂನು ಹೋರಾಟದಲ್ಲಿ ನಿರತವಾಗಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





