Breaking News

ಹೆಚ್ಚು ಹಣ ಹೊಡಿಕೆ ಮಾಡುವಂತೆ ನಂಬಿಸಿ ಮಹಿಳೆಗೆ ವಂಚನೆ

ಹುಬ್ಬಳ್ಳಿ : ಖಾಸಗಿ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ನಂಬಿಸಿ ಇಲ್ಲಿನ ಗೋಕುಲ ರಸ್ತೆಯ ಬಸವೇಶ್ವರ ನಗರದ ಪ್ರಸನ್ನ ಕಾಲೊನಿಯ ಚಿತ್ರಾ ಹೇಮಂತ ಲಾಡ್ ಅವರಿಗೆ 97.50 ಲಕ್ಷ ರೂಪಾಯಿ ವಂಚಿಸಲಾಗಿದೆ. ಚಿತ್ರಾ ಅವರು ಷೇರು ಟ್ರೇಡಿಂಗ್ ಬಗ್ಗೆ ಗೂಗಲ್‌ನಲ್ಲಿ ಸರ್ಚ್ ಮಾಡಿದ್ದಾರೆ. ಆಗ ಸಿಕ್ಕ ಲಿಂಕ್ ಕ್ಲಿಕ್ ಮಾಡಿದಾಗ ಅವರ ಮೊಬೈಲ್ ಸಂಖ್ಯೆ ‘ಬಿ1 ವಿಜಯ್ ಬಜಾಜ್ ವೆಲ್ತ್ ಫ್ರೀಡಂ ಲರ್ನಿಂಗ್ ಗ್ರೂಪ್’ ಎಂಬ ವಾಟ್ಸ್ಆ್ಯಪ್ ಗ್ರೂಪ್ ಗೆ ಸೇರಿದೆ.

ನಂತರ ವಿಜಯ ಬಜಾಜ್, ರಾಮ ಲಕ್ಷ್ಮಿ ಎಂಬುವರು ಷೇರು ಮಾರ್ಕೆಟ್ ಬಗ್ಗೆ ಚಿತ್ರಾ ಅವರಿಗೆ ಮಾಹಿತಿ ನೀಡಿ, ជ ថ໖໖ “BAJAJA SST’ 2 ಅಪ್ಲಿಕೇಷನ್ ಅನ್ನು ಅವರ ಮೊಬೈಲ್‌ನಲ್ಲಿ ಇನ್‌ಸ್ಟಾಲ್‌ ಮಾಡಿಸಿ ಅದರಲ್ಲಿ ಹಣ ಹೂಡಿಕೆ ಮಾಡುವಂತೆ ಹೇಳಿದ್ದಾರೆ. ಬಳಿಕ ಚಿತ್ರಾ, ಅವರ ಪತಿ ಮತ್ತು ಪುತ್ರನ ವಿವಿಧ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾವಣೆ ಮಾಡಿಸಿಕೊಂಡು, ಹೂಡಿಕೆ ಮಾಡಿದ್ದಾರೆ. ಆದ್ರೆ ಹೂಡಿಕೆ ಮಾಡಿದ ಹಣವನ್ನು ವಾಪಸ್ ನೀಡದೆ ವಂಚಿಸಲಾಗಿದೆ .ಈ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About Shaikh BigTv

Check Also

ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!

ಚಿಕ್ಕಬಳ್ಳಾಪುರ: ಗೌರಿಬಿದನೂರಿನಲ್ಲಿ ಹಿರಿಯ ವಕೀಲ ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಣ್ಣಕಿ ವೆಂಕಟರಮಣಪ್ಪ ಅವರ ಕತ್ತು ಕೊಯ್ದು ಕೊಲೆಗೆ …

Leave a Reply

Your email address will not be published. Required fields are marked *