ಹುಬ್ಬಳ್ಳಿ: ಗಾಂಜಾ ಸಾಗಿಸುತ್ತಾ ಮಾರಾಟ ಮಾಡುತ್ತಿದ್ದ ಓರ್ವ ಬಾಲಕ ಸೇರಿ ಆರು ಜನರನ್ನು ಪೊಲೀಸರು ಬಂಧಿಸಿ, ಅಂದಾಜು 2.8 ಲಕ್ಷ ರೂ. ಮೌಲ್ಯದ 2.8 ಕೆಜಿ ಗಾಂಜಾ ಹಾಗೂ ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ.

ಹುಬ್ಬಳ್ಳಿ ನಿವಾಸಿಗಳಾದ ಮತ್ತುಮ್ ಮೊರಬ, ತೌಸಿಫ್ ಅಕ್ರಮ ಹಾಲಬಾವಿ, ಸಾಹಿಲ ನದಾಫ, ಜಾಫರ, ಬಬಲು ಎಂಬುವರೆ ಬಂಧಿತರಾದವರು. ಇವರು ಕುಸುಗಲ್ ರಸ್ತೆ ರೈಲ್ವೆ ಸೇತುವೆ ಮೇಲೆ ಗಾಂಜಾ ಮಾರಾಟ ಮಾಡುತ್ತಿದ್ದರು. ಇನ್ನೂ ಖಚಿತ ಮಾಹಿತಿ ಮೇರೆಗೆ ಸೈಬರ್ ಕ್ರೈಂ ಪೊಲೀಸರು ದಾಳಿ ನಡೆಸಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಅಪ್ರಾಪ್ತ ಸೇರಿ ಆರು ಜನರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಈ ಕುರಿತು ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

