Breaking News

ಕ್ಷೇತ್ರದ ಶಾಸಕರು ಶೇ.40 ಕಮಿಷನ್ ಪಡೆಯುವ ದಂಧೆಯಲ್ಲಿ ತೊಡಗಿದ್ದಾರೆ: ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಆರೋಪ

ಕೊಟ್ಟೂರು: ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಬಹುತೇಕ ಅಭಿವೃದ್ಧಿ ಕಾಮಗಾರಿಗಳನ್ನು ಯಾವುದೇ ಇಲಾಖೆಗೆ ವಹಿಸಿದೇ ಕರ್ನಾಟಕ ನೇರವಾಗಿ ರಾಜ್ಯ ಹ್ಯಾಬಿಟೆಡ್ ಸಂಸ್ಥೆಗೆ ವಹಿಸಿ ಮೂಲಕ ಶೇ.40 ಕಮೀಷನ್ ಪಡೆಯುವ ದಂಧೆಯಲ್ಲಿ ಕ್ಷೇತ್ರದ ಶಾಸಕರು ತೊಡಗಿದ್ದಾರೆಂದು ಕೆಎಂಎಫ್ ಅಧ್ಯಕ್ಷ ಎಸ್.ಭೀಮಾನಾಯ್ಕ ಆರೋಪಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ನಾನಾ ಯೋಜನೆಯಡಿ ಮಂಜೂರಾದ ಅಭಿವೃದ್ಧಿ ಕಾಮಗಾರಿಗಳನ್ನು ಯಾವುದೇ ಇಲಾಖೆಯಿಂದ ಟೆಂಡರ್‌ ಮೂಲಕ ಗುತ್ತಿಗೆದಾರರಿಗೆ ನೀಡದೇ ನೇರವಾಗಿ ಹ್ಯಾಬಿಟೆಡ್ ಸಂಸ್ಥೆಗೆ ನೀಡಿ ಅವರಿಂದ ಶೇ.40 ಕಮೀಷನ್ ದಂಧೆಗೆ ಶಾಸಕರು ಇಳಿದಿದ್ದಾರೆ. ಕಾಮಗಾರಿಗಳನ್ನು ಗುಣಮಟ್ಟದಲ್ಲಿ ನಿರ್ವಹಿಸದೇ ಕಳಪೆಯಲ್ಲಿ ಮಾಡುತ್ತಿದ್ದಾರೆ. ಈ ಕುರಿತು ಮುಖ್ಯಮಂತ್ರಿ, ಕಾರ್ಯದರ್ಶಿ, ಜಿಲ್ಲಾಧಿಕಾರಿ ಸೇರಿದಂತೆ ವಿವಿರವಾದ ಪತ್ರ ಬರೆದು ಸೂಕ್ತ ಕ್ರಮಕ್ಕೆ ಒತ್ತಾಯಿಸಿರುವೆ ಎಂದರು.

Share News

About BigTv News

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *