Breaking News

ಸುಸ್ಥಿರ ಭಾರತಕ್ಕಾಗಿ ರಿಯಲ್ ಎಸ್ಟೇಟ್ ಮತ್ತು ಸರ್ಕಾರ ಒಟ್ಟಾಗಿ ಕೆಲಸ ಮಾಡಲಿ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಸುಸ್ಥಿರ ಭಾರತವನ್ನು ನಿರ್ಮಿಸಲು ರಿಯಲ್‌ ಎಸ್ಟೇಟ್‌ ಕ್ಷೇತ್ರ ಮತ್ತು ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.
ಬ್ರಿಗೇಡ್ ರೀಪ್‌ ಇದರ ‘ಪ್ರೊಪಗೇಟ್-2024’ ಕಾರ್ಯಕ್ರಮ ‘ದಿ ಮೋಸ್ಟ್‌ ಇಂಪ್ಯಾಕ್ಟ್‌ಫುಲ್‌ ಪ್ರಾಪ್‌ಟೆಕ್‌ ಸಮ್ಮಿಟ್’ ಅನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ರಿಯಲ್‌ ಎಸ್ಟೇಟ್‌ ಕ್ಷೇತ್ರವು ಜಿಡಿಪಿಗೆ ಶೇ 7.3ರಷ್ಟು ಕೊಡುಗೆ ನೀಡುತ್ತಿದೆ. ಕರ್ನಾಟಕದಲ್ಲಿ ರಿಯಲ್‌ ಎಸ್ಟೇಟ್‌ ಕ್ಷೇತ್ರ ಅತಿ ವೇಗದಲ್ಲಿ ಬೆಳೆಯುತ್ತಿದೆ. ಬೆಂಗಳೂರು ಮುಂಚೂಣಿಯಲ್ಲಿದೆ. ಈ ಕ್ಷೇತ್ರಕ್ಕೆ ನೀತಿ ನಿರೂಪಿಸಲು ಇದು ಸಕಾಲ ಎಂದು ತಿಳಿಸಿದರು.
ಭಾರತದ ಮೊಟ್ಟಮೊದಲ ವರ್ತುಲ ಆರ್ಥಿಕ ನೀತಿಯನ್ನು ಕರ್ನಾಟಕ ಜಾರಿ ಮಾಡಿದೆ. ಇದರಡಿಯಲ್ಲಿ ಕಟ್ಟಡ ನಿರ್ಮಾಣ ವಸ್ತುಗಳಲ್ಲಿ ಶೇ 20ರಷ್ಟು ಸುಸ್ಥಿರವಾಗಿರುವಂತೆ ಖಾತ್ರಿ ಮಾಡಿಕೊಳ್ಳಲಾಗುತ್ತಿದೆ. ಮೇಕ್‌ ಇಂಡಿಯಾ, ಸ್ಟಾರ್ಟ್‌ಅಪ್‌ ಇಂಡಿಯಾ, ಡಿಜಿಟಲ್‌ ಇಂಡಿಯಾ ಎಂದು ಏನೆಲ್ಲ ಘೋಷಣೆಗಳು ಈಗ ದೇಶದಲ್ಲಿ ಕೇಳುತ್ತಿದೆಯೋ ಅದೆಲ್ಲ ಬೆಂಗಳೂರಿನಲ್ಲಿ ಈಗಾಗಲೇ ಇವೆ. ಗ್ರೇಡ್ ‘ಎ’ ಮಟ್ಟದ ವಾಣಿಜ್ಯ ಕಟ್ಟಡಗಳ ಸಂಖ್ಯೆ ಮಾತ್ರ ಹೆಚ್ಚಾಗಬೇಕಿದೆ ಎಂದರು.
ಬ್ರಿಗೇಡ್ ಗ್ರೂಪ್‌ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ನಿರೂಪ ಶಂಕರ್ ಮಾತನಾಡಿ, ‘ರಿಯಲ್‌ ಎಸ್ಟೇಟ್‌ ಅಭಿವೃದ್ಧಿಯಲ್ಲಿ ತಂತ್ರಜ್ಞಾನದ ಅಭಿವೃದ್ಧಿಯೂ ಸೇರಿಕೊಂಡಿದೆ. ಇದು ವೇಗ ಮತ್ತು ದಕ್ಷತೆಗೆ ಮಾತ್ರ ಸಂಬಂಧಿಸಿಲ್ಲ. ಸುರಕ್ಷತೆ ಮತ್ತು ಸುಸ್ಥಿರತೆಗೂ ಸಂಬಂಧಪಟ್ಟಿದೆ. ಪರಿಸರವನ್ನು ರಕ್ಷಿಸಿಕೊಂಡು ಸ್ಮಾರ್ಟ್‌ ನಗರಗಳನ್ನು ನಿರ್ಮಿಸಬೇಕಿದೆ’ ಎಂದು ಹೇಳಿದರು.
ಕೊಟಕ್ ಬ್ಯಾಂಕ್‌ನ ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಅಮಿತ್‌ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ರಿಗೇಡ್ ಗ್ರೂಪ್ ನಿರ್ದೇಶಕ (ಆತಿಥ್ಯ) ವಿನೀತ್‌ ವರ್ಮ, ಎಂಬಸಿ ಗ್ರೂಪ್‌ ವ್ಯವಸ್ಥಾಪಕ ನಿರ್ದೇಶಕ ಜಿತು ವೀರ್‌ವಾಣಿ, ಉದ್ಯಮಿಗಳು, ಸ್ಮಾರ್ಟ್‌ಅಪ್‌ ನಾಯಕರು, ಬ್ಯಾಂಕ್‌ಗಳ ಪ್ರತಿನಿಧಿಗಳು ಚರ್ಚೆಯಲ್ಲಿ ಪಾಲ್ಗೊಂಡರು.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *