Breaking News

ಸೇತುವೆ ನಿರ್ಮಾಣಕ್ಕೆ ಶಾಸಕ ಕೋನರಡ್ಡಿ ಭೂಮಿ ಪೂಜೆ

ಅಣ್ಣಿಗೇರಿ: ಕೊಂಡಿಕೊಪ್ಪ ಗ್ರಾಮದಲ್ಲಿ ಕೊಂಡಿಕೊಪ್ಪ ಕುರ್ತಕೋಟಿ ರಸ್ತೆಯ ಸವಳ ಹಳ್ಳಕ್ಕೆ ಸಣ್ಣ ನೀರಾವರಿ ಇಲಾಖೆಯಿಂದ ರೂ. 2.47 ಕೋಟಿ ಅನುದಾನದಲ್ಲಿ ಸೇತುವೆ ನಿರ್ಮಾಣಕ್ಕೆ ಶಾಸಕ ಕೋನರಡ್ಡಿ ಅವರು ನೆರವೇರಿಸಿ, ಮಾತನಾಡಿ ಅವರು ಹಳ್ಳದ ಆಚೆ ಇರುವ ಕೊಂಡಿಕೊಪ್ಪ ಗ್ರಾಮದ ರೈತರ ಜಮೀನುಗಳಿಗೆ ಹಳ್ಳದಾಟಿ ಹೋಗಲು ದೊಡ್ಡ ಸಮಸ್ಯೆಯಾಗಿತ್ತು. ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಪೂಜೆ ಮಾಡಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಗ್ರಾಮದ ಬಸ್ ಸಮಸ್ಯೆ ಹಾಗೂ ವಿವಿಧ ಬೇಡಿಕೆಗಳ ಸಲುವಾಗಿ ಮನವಿ ಸಲ್ಲಿಸಿದರು. ಅದಕ್ಕೆ ಸ್ಪಂಧಿಸಿದ ಅವರು ಆದಷ್ಟು ಬೇಗನೇ ಪರಿಹಾರ ಮಾಡುವುದಾಗಿ ಆಶ್ವಾಸನೆ ನೀಡಿದರು.

ಈ ಸಂದರ್ಭದಲ್ಲಿ ಹಿರಿಯರಾದ ಮಲ್ಲಿಕಾರ್ಜುನಗೌಡ ಶೇಷನಗೌಡ್ರ, ವಿ.ಡಿ. ಅಂದಾನಿಗೌಡ್ರ, ಬಿ.ಹೆಚ್. ಪಾಟೀಲ, ಗುತ್ತಿಗೆದಾರರು ಮಹಾಂತೇಶ ಕಾಮಶೆಟ್ಟಿ, ಸಾಸ್ವಿಹಳ್ಳಿ ಗ್ರಾಮಪಂಚಾಯತ ಅಧ್ಯಕ್ಷ ಶಕುಂತಲಾ ಮಾಡೂಳ್ಳಿ, ಸದಸ್ಯರಾದ ಜಗದೀಶಗೌಡ ಶೇಷನಗೌಡ ದೇವಕ್ಕ ಕುರಿ, ಮುಖಂಡರಾದ ಗಿರೀಶ ಕಿರೆಸೂರ, ಹನಮಂತಗೌಡ ಶೇಷನಗೌಡ್ರ, ಬಸವರಾಜ ಪಡೇಸೂರ, ವಿ.ಆ‌ರ್.ನೇಕಾರ, ಲಕ್ಷ್ಮಣ ಮುದಕನಾಯ್ಕರ, ರಮೇಶ ಬಡಿಗೇರ ಸೇರಿದಂತೆ ಗ್ರಾಮದ ರೈತರು ಉಪಸ್ಥಿತರಿದ್ದರು.

Share News

About Shaikh BigTv

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *