ಹುಬ್ಬಳ್ಳಿ: ಬೆಳಗಾವಿಯಲ್ಲಿ ನಾವು ಕಸ ಹೊಡೆದು, ಕೊಳೆಯಲ್ಲಾ ತೆಗೀತೀವಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಮಾರ್ಮಿಕವಾಗಿ ಮಾತನಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಬೆಳಗಾವಿಯಿಂದಲೇ ಸರ್ಕಾರ ಪತನ ಅನ್ನೋ ಬಿಜೆಪಿ ನಾಯಕರ ಹೇಳಿಕೆಗೆ ಗರಂ ಆದ ಅವರು, ಬೆಳಗಾವಿಯಲ್ಲಿ ನಾವು ಕಸ ಹೊಡೆದು, ಕೊಳೆಯಲ್ಲಾ ತಗೀತಿವಿ ಎಂದು ಪರೋಕ್ಷವಾಗಿ ಬೆಳಗಾವಿ ನಾಯಕರಿಗೂ ಟಾಂಗ್ ಕೊಟ್ಟಿದ್ದಾರೆ.
ಬೆಳಗಾವಿಯಲ್ಲಿ ಗಾಂಧಿ ಬಾವಿ ನೀರು ಸಿಂಪಡಿಸಿ ಕಾರ್ಯಕ್ರಮ ಮಾಡತೀದಿವಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ ವಿಚಾರ ನನ್ನ ಬಾಯಿ ಸೇರಿ ಎಲ್ಲರೂ ಬೀಗ ಹಾಕಬೇಕು ಎಂದು ದೆಹಲಿ ನಾಯಕರು ಹೇಳಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಸಾಹೇಬರು ರಾಷ್ಟ್ರೀಯ ಅಧ್ಯಕ್ಷರು ಅವರ ಮಾರ್ಗದರ್ಶನದಲ್ಲಿ ನಾವು ದುಡೀತಿವಿ, ಈಗಿರುವವರು ನಕಲಿ ಗಾಂಧಿಗಳು ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಕಿಡಿಕಾರಿದರು.
ಒಂದೇ ಗಾಂಧಿ ಇರೋದು, ನಾವೆಲ್ಲ ಗಾಂಧಿ ವಂಶಸ್ಥರು ಬಿಜೆಪಿ ನಾಯಕರ ನಕಲಿ ಗಾಂಧಿ ಹೇಳಿಕೆಗೆ ಡಿಕೆ ತಿರುಗೇಟು ನೀಡಿದ ಅವರು ನಕಲಿ ಗಾಂಧಿ ಅಂದಿರೋದು ಬಹಳ ಸಂತೋಷ ಎಂದರು.
ಮಹಾದಾಯಿ ಯೋಜನೆ ವಿಳಂಬ ವಿಚಾರವಾಗಿ ಹತ್ತು ದಿನದಿಂದ ನಾವು ಮೀಟಿಂಗ್ ಮಾಡಿದ್ವೀ ದೆಹಲಿಯಲ್ಲಿ ಮೀಟಿಂಗ್ ಇತ್ತು. ಮೋದಿ ಅವರನ್ನು ಭೇಟಿ ಮಾಡಿದಾಗ, ಸಚಿವರಿಗೆ ತಿಳಿಸಿದ್ದೇನೆ ಆದ್ರೆ ಮೀಟಿಂಗ್ ಅಲ್ಲಿ ಏನೂ ತೀರ್ಮಾನ ಆಗಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

