Breaking News

384 ಕೆಎಎಸ್ ಹುದ್ದೆ ನೇಮಕಾತಿ ಪರೀಕ್ಷೆ: 5 ಪ್ರಶ್ನೆಗಳಿಗೆ ಕೃಪಾಂಕ ನೀಡಲು ನಿರ್ಧಾರ

ಬೆಂಗಳೂರು: ಗೆಜೆಟೆಡ್ ಪ್ರೊಬೇಷನರಿ 384 ಹುದ್ದೆಗಳ ನೇಮಕಾತಿಗೆ ನಡೆದ ಪೂರ್ವಭಾವಿ ಮರು ಪರೀಕ್ಷೆಯ ಪರಿಷ್ಕೃತ ಕೀ ಉತ್ತರಗಳನ್ನು ಕರ್ನಾಟಕ ಲೋಕಸೇವಾ ಆಯೋಗ ಇಂದು ಪ್ರಕಟಿಸಿದೆ.
ಡಿಸೆಂಬರ್ 29ರಂದು ಪೂರ್ವಭಾವಿ ಮರು ಪರೀಕ್ಷೆ ನಡೆದಿತ್ತು. ಒಟ್ಟು 5 ಪ್ರಶ್ನೆಗಳಿಗೆ ಒಟ್ಟು 10 ಕೃಪಾಂಕಗಳನ್ನು ನೀಡಲು ನಿರ್ಧರಿಸಲಾಗಿದೆ.
ಪ್ರಶ್ನೆ ಪತ್ರಿಕೆ 1 ಮತ್ತು 2 ಸೇರಿ 13 ಪ್ರಶ್ನೆಗಳ ಸರಿ ಉತ್ತರಗಳಲ್ಲಿ ಬದಲಾವಣೆಯಾಗಿದೆ. ಪತ್ರಿಕೆ 1ರಲ್ಲಿ ಒಟ್ಟು 7 ಪ್ರಶ್ನೆಗಳಿಗೆ ಸರಿ ಉತ್ತರ ಬದಲಾವಣೆಯಾಗಿದ್ದು, ಇವುಗಳ ಪೈಕಿ 4 ಉತ್ತರಗಳನ್ನು ಪರಿಷ್ಕರಿಸಲಾಗಿದೆ. 3 ಪ್ರಶ್ನೆಗಳಿಗೆ ನೀಡಿದ 4 ಆಯ್ಕೆಗಳು ಸರಿ ಇಲ್ಲದೆ ಇದ್ದ ಕಾರಣ ಆ ಪ್ರಶ್ನೆಗಳಿಗೆ ಕೃಪಾಂಕ ನೀಡಲು ನಿರ್ಧರಿಸಲಾಗಿದೆ.
ಪ್ರಶ್ನೆ ಪತ್ರಿಕೆ 2ರಲ್ಲಿ 6 ಪ್ರಶ್ನೆಗಳ ಸರಿ ಉತ್ತರ ಬದಲಾಗಿದ್ದು, ಇವುಗಳಲ್ಲಿ ನಾಲ್ಕು ಸರಿ ಉತ್ತರಗಳನ್ನು ಪರಿಷ್ಕರಿಸಲಾಗಿದೆ. ಎರಡು ಪ್ರಶ್ನೆಗಳಿಗೆ ನೀಡಿದ 4 ಆಯ್ಕೆಗಳು ಸರಿ ಇಲ್ಲದೆ ಇದ್ದ ಕಾರಣ ಆ ಪ್ರಶ್ನೆಗಳಿಗೆ ಕೃಪಾಂಕ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಪರಿಷ್ಕೃತ ಸರಿ ಉತ್ತರ ಪ್ರಕಟಿಸಿದ ಬಳಿಕ ಕೀ ಉತ್ತರಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಸಲ್ಲಿಸುವ ಯಾವುದೇ ಆಕ್ಷೇಪಣೆ ಪರಿಗಣಿಸಲಾಗುವುದಿಲ್ಲ ಎಂದು ಹೇಳಲಾಗಿದೆ.

Share News

About BigTv News

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *