ಭಾರತ್ ಎಲೆಕ್ರ್ಟಾನಿಕ್ಸ್ ಲಿಮಿಟೆಡ್ನಲ್ಲಿ ಇಂಜಿನೀಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ದೀಪರಾಜ್ ಚಂದ್ರನ್ ಎಂಬ ವ್ಯಕ್ತಿಯೇ ಆರೋಪಿಯಾಗಿದ್ದು, ಕೇಂದ್ರ, ರಾಜ್ಯ ಹಾಗೂ ಗುಪ್ತಚರ ದಳಗಳು ಜಂಟಿ ಕಾರ್ಯಾಚರಣೆಯಲ್ಲಿ ಈತನನ್ನು ಬಂಧಿಸಿದೆ.ಸೇನೆಗೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳನ್ನ ಪಾಕಿಸ್ತಾನಕ್ಕೆ ಬಿಟ್ ಕಾಯಿನ್ ವಿನಿಮಯದೊಂದಿಗೆ ರವಾನೆ ಮಾಡುತ್ತಿದ್ದ. ಆರೋಪಿ ದೀಪರಾಜ್ ಚಂದ್ರನ್ ಉತ್ತರಪ್ರದೇಶದ ಘಾಜಿಯಾಬಾದ್ನವನು ಎಂದು ತಿಳಿದು ಬಂದಿದೆ. ತನಿಖೆ ಮಾಡುತ್ತಿರುವ ಅಧಿಕಾರಿಗಳು ಹಲವು ಬೆಚ್ಚಿ ಬೀಳಿಸುವ ಮಾಹಿತಿಗಳನ್ನು ಬಹಿರಂಗಪಡಿಸುತ್ತಿದ್ದಾರೆ.ಚಂದ್ರನ್ನ ಜೊತೆ ಇನ್ನು ಯಾರೆಲ್ಲಾ ಆ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂಬುದನ್ನು ಕೂಡ ವಿಚಾರಣೆ ಮಾಡುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

