Breaking News

ಸಾಮೂಹಿಕ ವಿವಾಹ ಹೆಸರಲ್ಲಿ ಯುವತಿಯರ ಮಾರಾಟ!!ಸಂತ್ರಸ್ತೆಯಿಂದಲೇ ‘ಖತರ್ನಾಕ್ NGO’ ಖೆಡ್ಡಾಕ್ಕೆ!

ರಾಜಸ್ತಾನ ರಾಜಧಾನಿ ಜೈಪುರ ಬಳಿ ಸಾಮೂಹಿಕ ವಿವಾಹದ ಹೆಸರಲ್ಲಿ ಬಡ ಕುಟುಂಬದ ಯುವತಿಯರನ್ನು ಪುರುಷರಿಗೆ ಮಾರಾಟ ಮಾಡುತ್ತಿದ್ದ ಖತರ್ನಾಕ್ ಜಾಲವನ್ನು ಪೊಲೀಸರು ಬೇದಿಸಿದ್ದಾರೆ.ಬಡ ಕುಟುಂಬಗಳ ಮಹಿಳೆಯರಿಗೆ ಸಾಮೂಹಿಕ ವಿವಾಹಗಳನ್ನು ಆಯೋಜಿಸುವ ಎನ್‌ಜಿಒ ಸೋಗಿನಲ್ಲಿ ನಡೆಸಲಾಗುತ್ತಿದ್ದ ಮಾನವ ಕಳ್ಳಸಾಗಣೆ ಜಾಲ ಇದಾಗಿದ್ದು, ಎನ್‌ಜಿಒ ನಡೆಸುತ್ತಿದ್ದ ಮಹಿಳೆ, ಬಡ ಕುಟುಂಬಗಳಿಂದ ಹುಡುಗಿಯರನ್ನು ಕಳ್ಳಸಾಗಣೆ ಮಾಡುವ ಏಜೆಂಟ್‌ಗಳಿಂದ ‘ಖರೀದಿಸಿ’ ವಧುವನ್ನು ಹುಡುಕುತ್ತಿರುವ ಯುವಕರಿಗೆ 2.5-5 ಲಕ್ಷ ರೂ.ಗೆ ‘ಮಾರಾಟ’ ಮಾಡುತ್ತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಬಸ್ಸಿಯ ಸುಜನ್‌ಪುರ ಗ್ರಾಮದಲ್ಲಿರುವ ತೋಟದ ಮನೆಯಲ್ಲಿ ಗಾಯತ್ರಿ ಸರ್ವ ಸಮಾಜ ಪ್ರತಿಷ್ಠಾನ ತನ್ನ ಕಚೇರಿಯನ್ನು ಸ್ಥಾಪಿಸಲಾಗಿತ್ತು. ಈ ಸಂಸ್ಥೆ ಸಾಮೂಹಿಕ ವಿವಾಹಗಳನ್ನು ಆಯೋಜಿಸುವುದಾಗಿ ಹೇಳಿಕೊಂಡಿತ್ತು. ಈ ಎನ್ ಜಿಒಗೆ ಗಾಯತ್ರಿ ಎಂಬ ಮಹಿಳೆ ಮುಖ್ಯಸ್ಥಳಾಗಿದ್ದು, ಮದುವೆಯಾಗಲು ಬಯಸುತ್ತಿದ್ದ ಯುವಕರಿಗೆ ಹುಡುಗಿಯರ ಫೋಟೋ ತೋರಿಸಿ ಅವರಿಂದ ಹಣ ಪಡೆದು ಯುವತಿಯರನ್ನು ಮಾರಾಟ ಮಾಡುತ್ತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಯುವತಿಯ ಹೇಳಿಕೆಯ ಆಧಾರದ ಮೇಲೆ, ಪೊಲೀಸರು ಫಾರ್ಮ್‌ಹೌಸ್ ಮೇಲೆ ದಾಳಿ ನಡೆಸಿ ಗಾಯತ್ರಿ, ಅವಳ ಸಹಚರ ಹನುಮಾನ್ ಮತ್ತು ಯುವತಿಯರನ್ನು ‘ಖರೀದಿಸಲು’ ಅಲ್ಲಿಗೆ ಹೋಗಿದ್ದ ಭಗವಾನ್ ದಾಸ್ ಮತ್ತು ಮಹೇಂದ್ರ ಎಂಬುವವರನ್ನು ಬಂಧಿಸಿದ್ದಾರೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *