ಗಾಜಿಪುರದ ನಿವಾಸಿ ಆನಂದಕುಮಾರ ಶಾಮರಾವ ಕೊಲೆಯಾದ ಯುವಕ. ಕೊಲೆ ಆರೋಪದಲ್ಲಿ ಕುವೆಂಪು ನಗರದ ನಿವಾಸಿ ಟೋನಿ ನಾಟೀಕರ್‌ನನ್ನು ಬಂಧಿಸಲಾಗಿದೆ. ಆನಂದ ಪತ್ನಿ ಸ್ನೇಹಾ ಅವರ ಕುಮ್ಮಕ್ಕಿನಿಂದ ಈ ಕೃತ್ಯ ನಡೆದಿದೆ ಎಂದು ಆರೋಪಿಸಿ ಮೃತರ ತಾಯಿ ದೇವಮ್ಮ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಸ್ನೇಹಾ ಅವರನ್ನು ಗಂಡನೊಂದಿಗೆ ಕಳುಹಿಸಲು ಟೋನಿ ಹಾಗೂ ಆತನ ಜತೆಗೆ ಇದ್ದವರು ನಿರಾಕರಿಸಿದ್ದರು. ಈ ವೇಳೆಯ ಜಗಳ ವಿಕೋಪಕ್ಕೆ ತಿರುಗಿ ಟೋನಿ ಚಾಕುವಿನಿಂದ ಆನಂದ ಅವರ ಎಡಗಾಲಿಗೆ ಬಲವಾಗಿ ಇರಿದರು. ತೀವ್ರ ರಕ್ತಸ್ರಾವವಾಗಿ ಆಸ್ಪತ್ರೆಗೆ ದಾಖಲಾಗಿದ್ದರೂ ಬದುಕಿ ಉಳಿಯಲಿಲ್ಲ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆನಂದನೇ ಚಾಕು ತಂದು ಹಲ್ಲೆಗೆ ಯತ್ನಿಸಿದ್ದ ಎಂದು ಆರೋಪಿ ಹೇಳಿಕೆ ನೀಡಿದ್ದಾನೆ.ಕೊಲೆ ಮಾಡಿದ ಆರೋಪದಲ್ಲಿ ಬಾಮೈದ ಸೇರಿ 10 ಮಂದಿ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

