ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯ ಸೂಚನೆ ಬೆನ್ನಲ್ಲೇ ಅಲರ್ಟ್ ಆದ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್, ಕಾನೂನು ಸುವ್ಯವಸ್ಥೆ ಕಟ್ಟುನಿಟ್ಟಾಗಿ ಜಾರಿಯಾಗಲು ಸ್ವತಃ ಫಿಲ್ಡಗಿಳದ ಕಮಿಷನರ್ ಎನ್ ಶಶಿಕುಮಾರ್.ಡ್ರಗ್ ಮುಕ್ತ ಹುಬ್ಬಳ್ಳಿ ಧಾರವಾಡ ಮಾಡಲು ಪೊಲೀಸರ ಪಣ ತೊಟ್ಟಿದ್ದು, ಇಂದು ಹುಬ್ಬಳ್ಳಿ ಹಳೆ ಸಿಆರ್ ಮೈದಾನದಲ್ಲಿ ಡ್ರಗ್ ಪೆಡ್ಲರ್ ಗಳ ಪರೇಡ್ ಮಾಡಿದರು.ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ಠಾಣೆ ವ್ಯಾಪ್ತಿಯ ಡ್ರಗ್ ಪೆಡ್ಲರ್ ಗಳಿಗೆ ಬಿಸಿ ಮುಟ್ಟಿಸಿ ಪೊಲೀಸರು, ದುಡಿದು ತಿನ್ನಿ, ಸಮಾಜ ಹಾಳು ಮಾಡಿ ಬದುಕಬೇಡಿ.ಕಾನೂನು ನಿಮ್ಮ ಬಿಡಲ್ಲ ಅಂತ ವಾರ್ನಿಂಗ್ ಮಾಡಿದ ಕಮಿಷನರ್ ಎನ್ ಶಶಿಕುಮಾರ. ಕಮಿಷನರ್ ಗೆ ಡಿಸಿಪಿ ಬಿಎಸ್ ನಂದಗಾವಿ, ರವೀಶ್ ಸಾಥ್ ನೀಡಿದ್ದು, ಡ್ರಗ್ಸ್ ಕೊನೆಗಾನಿಸಲು ಶಾಲಾ ಕಾಲೇಜು ಆಡಳಿತ ವರ್ಗಕ್ಕೂ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ. ಎಲ್ಲಾ ಆರೋಪಿತರ ಡಾಕ್ಯುಮೆಂಟ್ ಮಾಡಿಸಲು ಇನ್ಸಪೆಕ್ಟರ್ ಗಳಿಗೆ ಸೂಚನೆ ನೀಡಿದ್ದಾರೆ. ಹುಬ್ಬಳ್ಳಿ-ಧಾರವಾಡ ನೂತನ ಕಮಿಷನರ್ ಕಾರ್ಯ ವೈಖರಿಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.
