ಪಹಲ್ಗಾಮ್ ನಲ್ಲಿ ದಾಳಿ ನಡೆಸಿದ ನಾಲ್ವರು ಉಗ್ರರ ಪೈಕಿ ಮೂವರನ್ನು ಭಾರತೀಯ ಸೇನೆ ಕೊಂದು ಹಾಕಿದೆ. ಇದನ್ನು ಸ್ವತಃ ಭಾರತೀಯ ಸೇನೆ ಖಚಿತಪಡಿಸಿದೆ.ಕೆಲ್ಲರ್ ಅರಣ್ಯ ಪ್ರದೇಶದಲ್ಲಿ ಅಡಗಿದ್ದ ಉಗ್ರರನ್ನು ಭಾರತೀಯ ಸೇನೆ ಹುಡುಕಿ ನುಗ್ಗಿ ಕೊಂದಿದೆ.ಇಬ್ಬರ ಹೆಸರುಗಳನ್ನು ಸೇನೆ ಬಹಿರಂಗಪಡಿಸಿದೆ.ಹತರಾದ ಉಗ್ರರ ಪೈಕಿ ಶಾಹಿದ್, ಅದ್ನಾನ್ ಶಫಿ ಎಂಬ ಇಬ್ಬರು ಉಗ್ರರ ಹೆಸರು ಬಹಿರಂಗವಾಗಿದೆ. ಇನ್ನೊಬ್ಬಾತನ ವಿವರ ಕಲೆ ಹಾಕಲಾಗುತ್ತಿದೆ. ಇದೀಗ ನಾಲ್ಕನೇ ಉಗ್ರನ ಮಾಹಿತಿಯನ್ನು ಸೇನೆ ಕಲೆ ಹಾಕಿದ್ದು ಹುಡುಕಾಟ ನಡೆಸುತ್ತಿದೆ.ಇದೀಗ ಕದನ ವಿರಾಮ ಘೋಷಿಸಲಾಗಿದ್ದು ಈ ನಡುವೆ ಭಾರತೀಯ ಸೇನೆ ಪಹಲ್ಗಾಮ್ ನಲ್ಲಿ ದಾಳಿ ನಡೆಸಿದ ಉಗ್ರರನ್ನು ಕೊಂದು ಹಾಕಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

