ಮುಂಬೈ: ಮುಂಬೈನಲ್ಲಿ ಕಟ್ಟಡವೊಂದಕ್ಕೆ ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಇಬ್ಬರು ಸಾವನಪ್ಪಿದ್ದಾರೆ. ಮುಂಬೈನ ಅಂಧೇರಿ ಪೂರ್ವಭಾಗದಲ್ಲಿ ಘಟನೆ ನಡೆದಿದೆ.ಕಟ್ಟಡದ 10 ಹಾಗೂ 11ನೇ ಮಹಡಿಯಲ್ಲಿ ರಾತ್ರಿ ಸುಮಾರು 8.30ಕ್ಕೆ ಬೆಂಕಿ ಕಾಣಸಿಕೊಂಡಿದೆ. ಬೃಹನ್ ಮುಂಬೈ ಮುನ್ಸಿಪಾಲ್ ಕಾರ್ಪೊರೇಷನ್ ಈ ಅವಘಡವನ್ನ ಎರಡನೇ ಹಂತದ ಬೆಂಕಿ ಅವಘಡ ಅಂತ ವರ್ಗೀಕರಿಸಿದೆ. ಇನ್ನೂ ಬೆಂಕಿ ಅವಘಡದಲ್ಲಿ ಸಿಲುಕ್ಕಿದ್ದ ಮೂವರನ್ನು ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಿಸಿದ್ದು, ಓರ್ವ ನಾಪತ್ತೆಯಾಗಿದ್ದಾನೆ. 5 ಅಗ್ನಿಶಾಮಕ ವಾಹನ ಹಾಗೂ 4 ಜಂಬೋ ವಾಟರ್ ಟ್ಯಾಂಕರ್ಗಳನ್ನ ಬಳಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಬೆಂಕಿ ಅವಘಡಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ.
bigtvnews | Hubli Dharwad News | Kannada News | Karnataka News Hubli News | News In Hubli | Local news





