ಪಿಎಸ್ಐ ಮಂಜುನಾಥ್ ಎಂಬುವರ ಐಡಿ ಕಾರ್ಡ್ ಬಳಸಿ ಟೋಲ್ ಪ್ಲಾಜಾ ಮತ್ತು ವಿಮಾನ ನಿಲ್ದಾಣಗಳಲ್ಲಿ ಪೊಲೀಸ್ ಎಂದು ಹೇಳಿಕೊಂಡು ಓಡಾಡುತ್ತಿದ್ದ ಕರಿಹೋಬನಹಳ್ಳಿಯ ರವಿ ಎಂಬಾತನನ್ನು ಖಚಿತ ಮಾಹಿತಿ ಮೇರೆಗೆ ಪೀಣ್ಯ ಪೊಲೀಸರು ಬಂಧಿಸಿದ್ದಾರೆ.ಆರೋಪಿಯು ಪಿಎಸ್ಐ ಮಂಜುನಾಥ್ ಎಂಬುವರ ಐಡಿ ಕಾರ್ಡಿಗೆ ತನ್ನ ಫೋಟೋ ಹಾಕಿ ಆವಾಜ್.ಬೆಂಗಳೂರು ಕೆಂಪೇಗೌಡ ಏರ್ಪೋರ್ಟ್ನ ಇಮಿಗ್ರೇಷನ್ ಬಳಿಯೂ ರವಿ ಐಡಿ ಕಾರ್ಡ್ ತೋರಿಸಿದ್ದ. ಐಡಿ ಸ್ಕ್ಯಾನ್ ಮಾಡಿದ್ದ ಇಮಿಗ್ರೇಷನ್ ಅಧಿಕಾರಿಗಳಿಗೆ ಆರೋಪಿ ರವಿ ಮೇಲೆ ಅನುಮಾನ ಬಂದಿತ್ತು. ಎದುರುಗಡೆ ಇರುವ ವ್ಯಕ್ತಿನೇ ಬೇರೆ ಐಡಿ ನಂಬರೇ ಬೇರೆ ಎನ್ನುವುದು ಪಕ್ಕಾ ಆಗಿತ್ತು. ಬಳಿಕ ಇಮಿಗ್ರೇಷನ್ನಿಂದ ನೇರವಾಗಿ ಸ್ಟೇಟ್ ಇಂಟ್ಗೆ ಮಾಹಿತಿ ಹೋಗಿತ್ತು. ಮಾಹಿತಿ ತಿಳಿದ ಪೀಣ್ಯ ಪೊಲೀಸರು ಆರೋಪಿ ರವಿಯನ್ನು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

