ಶಾಲೆಯ ಕಾಂಪೌಂಡ್ ಗಾಗಿ ಶಾಲೆ ತೊರೆದ ಪುಟಾಣಿ ವಿದ್ಯಾರ್ಥಿನಿಯೋರ್ವಳು ತಾನು ಕಾಂಪೌಂಡ್ ನಿರ್ಮಿಸಿಕೊಡುವವರೆಗೂ ಸ್ಕೂಲಿಗೆ ಬರುವುದಿಲ್ಲವೆಂದು ಹಠ ಹಿಡಿದು ಕುಳಿತಿರುವ ಘಟನೆ ತುಮಕೂರಿನಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ ಸ್ವಕ್ಷೇತ್ರದಲ್ಲಿ ನಡೆದಿದೆ.2024 ರಲ್ಲಿ ಬಿಇಓ ಗೆ ಪತ್ರ ಬರೆದು ಮನವಿ ಮಾಡಿದ್ದ ಸಿಮ್ರಾ ಸನೋಬರ್ ಕಾಂಪೌಂಡ್ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದಳು. ಅಂದು ವಿದ್ಯಾರ್ಥಿನಿಗೆ ಕಾಂಪೌಂಡ್ ಕಟ್ಟಿಕೊಡುವ ಆಶ್ವಾಸನೆ ನೀಡಿದ್ದ ಬಿಇಓ, ಬಳಿಕ ಒಂದು ವರ್ಷ ಕಳೆದರೂ ಕಾಂಪೌಂಡ್ ನಿರ್ಮಾಣ ಮಾಡಿರಲಿಲ್ಲ.
ಇದರಿಂದ ನಮಗೆ ಆಟವಾಡಲು ತೊಂದರೆಯಾಗ್ತಿದೆ. ಕಾಂಪೌಂಡ್ ನಿರ್ಮಾಣ ಆಗೋವರೆಗೂ ಶಾಲೆಗೆ ಬರೊದಿಲ್ಲ ಎಂದು ಪತ್ರ ಸಿಮ್ರಾ ಸಿಎಂ ಸಿದ್ದರಾಮಯ್ಯ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಬರೆದು ಮನವಿ ಮಾಡಿಕೊಂಡಿದ್ದಾಳೆ. ವಿದ್ಯಾರ್ಥಿನಿಯ ಹೋರಾಟಕ್ಕೆ ತಂದೆ ರಫೀಕ್ ಸಾಥ್ ನೀಡಿದ್ದು, ಬಾಲಕಿಯ ಬೇಡಿಕೆಗೆ ಬೆಂಬಲವಾಗಿ ನಿಂತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

