Breaking News

ಜನಿವಾರ ಧಾರಣೆ, ಕೈದಾರ ಕಟ್ಟಿದ್ದಕ್ಕೆ ವಿದ್ಯಾರ್ಥಿಗಳಿಗೆ ಬಸ್ಕಿ: ಮೊರಾರ್ಜಿ ದೇಸಾಯಿ ಶಾಲೆ ದೈಹಿಕ ಶಿಕ್ಷಕ ಸಸ್ಪೆಂಡ್.

ಕಲಬುರಗಿ ಮೂಲದ ಶಿಕ್ಷಕ ಮದನ್ ಮಕಂದಾರ್ ವಿರುದ್ಧ ಪೋಷಕರು ಹಾಗೂ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೇ ಪ್ರಾಂಶುಪಾಲರಿಗೂ ದೂರು ನೀಡಿದ್ದರು. ಹಲವು ಬಾರಿ ಪ್ರಾಂಶುಪಾಲರು ಕೂಡ ಶಿಕ್ಷಕನಿಗೆ ಎಚ್ಚರಿಕೆ ನೀಡಿ ಬುದ್ಧಿಹೇಳಿದ್ದರು. ಆದಾಗ್ಯೂ ಹಳೇ ಚಾಳಿ ಮುಂದುವರೆಸಿದ್ದ ದೈಹಿಕ ಶಿಕ್ಷಕನನ್ನು ಪ್ರಾಂಶುಪಾಲರು ಕರ್ತವ್ಯದಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ..ವಿದ್ಯಾರ್ಥಿಗಳು ಜನಿವಾರ ಹಾಕಿದ್ದಕ್ಕೆ, ಕೈಯಲ್ಲಿ ದಾರ ಕಟ್ಟಿಕೊಂಡಿದ್ದಕ್ಕೆ ಅದನ್ನು ಪ್ರಶ್ನಿಸಿ, ವಿದ್ಯಾರ್ಥಿಗಳಿಗೆ ನಿರಂತರವಾಗಿ ಬಸ್ಕಿ ಹೊಡೆಸಿ ಶಿಕ್ಷಿಸುತ್ತಿದ್ದ ದೈಹಿಕ ಶಿಕ್ಷಕನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *