ಚಿಕ್ಕಮಗಳೂರು: ಕೊಪ್ಪ ತಾಲೂಕಿನ ಜಯಪುರ ಸಮೀಪದ ಹೇರೂರು ಕಾಫಿ ಎಸ್ಟೇಟ್‌ನಲ್ಲಿ ಅಕ್ರಮವಾಗಿ ಗೋಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಅಸ್ಸಾಂನಿಂದ ಕೂಲಿ ಕೆಲಸಕ್ಕೆ ಬಂದಿದ್ದ ಕಾರ್ಮಿಕರು ಎರಡು ದನಗಳನ್ನು ಕದ್ದು ಕಾಫಿ ತೋಟದಲ್ಲಿ ಹತ್ಯೆ ಮಾಡಿ ಮಾಂಸ ಹಂಚಿಕೆ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.ಸ್ಥಳೀಯರು ಇವರು ಅಸ್ಸಾಂನವರಲ್ಲ, ಅಕ್ರಮ ಬಾಂಗ್ಲಾ ವಲಸಿಗರೆಂದು ಆರೋಪಿಸಿದ್ದಾರೆ. ಪಿ.ಎಸ್.ಐ. ರವೀಶ್ ನೇತೃತ್ವದಲ್ಲಿ ದಾಳಿ ನಡೆಸಿದ ಬಾಳೆಹೊನ್ನೂರು ಪೊಲೀಸರು, ಆರೋಪಿಗಳಾದ ಅನ್ಸರ್, ಮಜೀದ್, ಮತ್ತು ಮುಜಾಮಿಲ್ ಎಂಬುವವರನ್ನು ಬಂಧಿಸಿ, ಗೋಮಾಂಸ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

