Breaking News

ಪತ್ನಿಗೆ ವೀಡಿಯೋ ಕರೆ ಮಾಡಿ ನೇಣು ಬಿಗಿದು ಆತ್ಮಹತ್ಯೆ

ಕುಂಬಳೆ: ಪತ್ನಿಗೆ ವೀಡಿಯೋ ಕರೆ ಮಾಡಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಪುತ್ತಿಗೆಯಲ್ಲಿ ನಡೆದಿದೆ. ಕರ್ನಾಟಕದ ಶಿವಮೊಗ್ಗ ಮೂಲದವರಾಗಿದ್ದು ಪ್ರಸ್ತುತ ಪುತ್ತಿಗೆ ಪಂಚಾಯತ್‌ ಕಚೇರಿ ಸಮೀಪದ ಕ್ವಾಟ್ರಸ್‌ನಲ್ಲಿ ವಾಸವಾಗಿದ್ದ ರಿಸ್ವಾನ್‌ ಅಲಿ (32) ಆತ್ಮಹತ್ಯೆ ಗೈದವರು. ಅವರು ಮರ ಕಡಿಯುವ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಊರಿನಲ್ಲಿರುವ ಪತ್ನಿ ಶಮೀಮಾ ಬಾನು ಅವರಿಗೆ ಜ. 16ರಂದು ರಾತ್ರಿ ವೀಡಿಯೋ ಕರೆ ಮಾಡಿ ತಾನು ಆತ್ಮಹತ್ಯೆಗೈಯ್ಯುವುದಾಗಿ ತಿಳಿಸಿದ್ದರು. ಬಳಿಕ ಪತ್ನಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಆತಂಕ ಗೊಂಡ ಪತ್ನಿ ಪುತ್ತಿಗೆಯಲ್ಲಿರುವ ಪರಿಚಯದವರಿಗೆ ಮಾಹಿತಿ ನೀಡಿದರು. ಅವರು ಕೂಡಲೇ ಸ್ಥಳಕ್ಕೆ ಬಂದರೂ ರಿಸ್ವಾನ್‌ ಅಷ್ಟರಲ್ಲಿ ನೇಣು ಬಿಗಿದುಕೊಂಡಿದ್ದರು. ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

Share News

About BigTv News

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *