Breaking News

ಸಂಚಾರಕ್ಕೆ ಅಡ್ಡಿ ಇಬ್ಬರ ವಿರುದ್ಧ ಪ್ರಕರಣ ದಾಖಲು

ಮಂಗಳೂರು: ಕುಂಟಿಕಾನ ಮೇಲ್ಸೇತುವೆ ಬಳಿ ಕಾವೂರಿನಿಂದ ಮಂಗಳೂರು ನಗರಕ್ಕೆ ಬರುವ ರಸ್ತೆಯಲ್ಲಿ ವಾಹನವನ್ನು ಅಡ್ಡ ಇಟ್ಟು ವಾಹನ ಸಂಚಾರಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಇಬ್ಬರು ದ್ವಿಚಕ್ರ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಾಗಿದೆ. ಕುಂಜತ್ತಬೈಲ್ ನಿವಾಸಿ ತನ್ಸೀರ್ (25) ಮತ್ತು ಗದಗ ಜಿಲ್ಲೆ ನರಗುಂದ ತಂಡಾಪುರ ಓಣಿಲೆ ಚಂದ್ರ ಶೇಖರ್ (55) ವಿರುದ್ಧ ಪ್ರಕರಣ ದಾಖಲಾಗಿದೆ. ವಾಹನವನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿದ ವಿಚಾರದಲ್ಲಿ ಈ ಇಬ್ಬರ ನಡುವೆ ಗಲಾಟೆಯಾಗಿದೆ. ಪರಿಣಾಮ ಇಬ್ಬರೂ ರಸ್ತೆಗೆ ತಮ್ಮವಾಹನಗಳನ್ನು ಅಡ್ಡಲಾಗಿ ಇರಿಸಿ, ಪರಸ್ಪರ ಬೈದಾಡುತ್ತಾ ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿ ಮಾಡಿದ್ದಾರೆ. ಸ್ಥಳಕ್ಕೆ ಹೊಯ್ಸಳ ಪೊಲೀಸರು ಆಗಮಿಸಿ ಅವರನ್ನು ಚದುರಿಸಿದ್ದಾರೆ. ಸಂಚಾರಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಚಿನ್ನ ಖರೀದಿಸಲು ಬಂದವನಂತೆ ನಾಟಕವಾಡಿ ₹13 ಲಕ್ಷದ ಆಭರಣ ಎಗರಿಸಿದ ಖದೀಮ! ಕನ್ನಡಿಯಲ್ಲಿ ಮುಖ ನೋಡುತ್ತಲೇ ಮಾಲೀಕರಿಗೆ ಪಂಗನಾಮ

ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ₹13.20 ಲಕ್ಷ ಮೌಲ್ಯದ ಚಿನ್ನ ಕಳವು ಮಾಡಿದ್ದಾನೆ. ಪ್ರಕರಣಕ್ಕೆ …

Leave a Reply

Your email address will not be published. Required fields are marked *