Breaking News

ತುಮಕೂರಿನಲ್ಲಿ 24ನೇ ರಾಷ್ಟ್ರೀಯ ಅಂಡರ್-20 ಕ್ರೀಡಾಕೂಟ : ಶೌಚಾಲಯದಲ್ಲಿ ಸೂಜಿ, ಸಿರಿಂಜ್ ಪತ್ತೆ!

ಇಂದಿನಿಂದ ಮೂರು ದಿನಗಳ ಕಾಲ ತುಮಕೂರಿನಲ್ಲಿ 24ನೇ ರಾಷ್ಟ್ರೀಯ ಅಂಡರ್ 20 ಕ್ರೀಡಾಕೂಟ ನಡೆಯಲಿದೆ. ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಇಂದು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಆದರೆ ಕ್ರೀಡಾಂಗಣದ ಶೌಚಾಲಯದಲ್ಲಿ ಇದೀಗ ಸೂಜಿ ಮತ್ತು ಸಿರಿಂಜ್ ಪತ್ತೆಯಾಗಿದ್ದು ಈ ಒಂದು ಸೂಜಿ ಮತ್ತು ಪ್ರಕರಣ ಹಲವು ಅನುಮಾನಕ್ಕೆ ಕಾರಣವಾಗಿದೆ. ಕ್ರೀಡೆ ಆರಂಭವಾದ ಮೊದಲ ದಿನವೇ ಸೂಜಿ ಮತ್ತು ಸಿರಿಂಜ್ ಗಳು ಪತ್ತೆಯಾಗಿವೆ. ಕ್ರೀಡಾಪಟುಗಳಿಂದ ಉತ್ತೇಜಕ ಮದ್ದು ಸೇವನೆ ನಡೆದಿದೆಯಾ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಇಂದು ಬೆಳಿಗ್ಗೆ ಕ್ರೀಡಾಕೂಟಕ್ಕೆ ಸಚಿವ ಜಿ ಪರಮೇಶ್ವರ್ ಚಾಲನೆ ನೀಡಿದರು. ದೇಶದ 28 ರಾಜ್ಯಗಳಿಂದ 1500ಕ್ಕೂ ಹೆಚ್ಚು ಕ್ರೀಡಾಪಟುಗಳು ಇದರಲ್ಲಿ ಭಾಗಿಯಾಗಿದ್ದಾರೆ. ಇಲ್ಲಿ ಆಯ್ಕೆ ಆಗುವವರು ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಇದೆ. ಇಂದು ಬೆಳಿಗ್ಗೆ 1,500 ಮೀಟರ್ ಊಟ ಜಾವೆಲಿನ್ ಎಸೆತ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕ್ರೀಡಾ ಸ್ಪರ್ಧೆಗಳು ನಡೆದಿದೆ. ಇದರ ಬೆನ್ನಲ್ಲೇ ಕ್ರೀಡಾಂಗಣದ ಶೌಚಾಲಯದಲ್ಲಿ ಸಿರಿಂಜ್ ಪತ್ತೆಯಾಗಿದೆ. ಕೆಲವು ಕ್ರೀಡಾಪಟುಗಳಿಂದ ಉದ್ದೀಪನ ಮದ್ದು ಬಳಕೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸುವಂತೆ ತುಮಕೂರು ಸಾರ್ವಜನಿಕರು ಆಗ್ರಹಿಸಿದ್ದಾರೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *