Breaking News

ಪುಡಿರೌಡಿ ಮಂಜ ಆರ್ಭಟಕ್ಕೆ ಪೊಲೀಸ್ ಇಲಾಖೆ ಶಾಕ್ — PSI ಸಸ್ಪೆಂಡ್, 8 ಸಿಬ್ಬಂದಿ ವರ್ಗಾವಣೆ..

ಪೊಲೀಸರ ನಿರ್ಲಕ್ಷ್ಯ ಬಯಲು: ಮಂಜ ದಾಂದಲೆಗೆ ಬೆನ್ನಲ್ಲೇ ಅಮಾನತು-ವರ್ಗಾವಣೆ ಶಾಕ್!

ಘಟನೆ ಮುಚ್ಚಿಹಾಕಲು ಯತ್ನಿಸಿದ ಪೊಲೀಸರಿಗೆ ಕಂಟಕ — ಅಮಾನತು, ವರ್ಗಾವಣೆ ಶಾಕ್..!

ದೊಡ್ಡ ಗಲಾಟೆ ಸಣ್ಣ ಕೇಸ್‌ಗೆ ಸೀಮಿತ: ಈಗ ಪೊಲೀಸರಿಗೇ ಸಂಕಷ್ಟ..!

ಮಂಜ ದಾಂದಲೆ ಮುಚ್ಚಿಡಲು ಯತ್ನವೇ ತಿರುಗಿಬಿತ್ತು — ಪೊಲೀಸ್ ಅಧಿಕಾರಿಗಳ ವಿರುದ್ಧ ಖಡಕ್ ಕ್ರಮ..!

ರೌಡಿಶೀಟರ್‌ಗಳ ಜೊತೆ ಕೆಲ ಪೊಲೀಸರ ಅತಿಯಾದ ನಂಟು — ಇಡೀ ಪೊಲೀಸ್ ಇಲಾಖೆಯ ಮಾನಕ್ಕೆ ಕಳಂಕ..!

ಕೆಲ ಪೊಲೀಸರ ರೌಡಿಗಳ ಸ್ನೇಹವೇ ಇಲಾಖೆಗೆ ಕಪ್ಪು ಚುಕ್ಕೆ ಆಗುವ ಹಂತಕ್ಕೆ ಬಂದಿದೆ…

ಉತ್ತರ ಕನ್ನಡದ ಹಳಿಯಾಳದಲ್ಲಿ ಪುಡಿರೌಡಿ ಮಚ್ ಮಂಜನ ಆರ್ಭಟ ಪೊಲೀಸ್ ಇಲಾಖೆಯನ್ನೇ ತಲ್ಲಣಗೊಳಿಸಿದೆ. ಭಾನುವಾರ ಮಧ್ಯರಾತ್ರಿ ಹಳಿಯಾಳ ನಗರದ ಮೌರ್ಯ ಬಾರ್ ಮುಂಭಾಗ ಕುಡಿದ ಅಮಲಿನಲ್ಲಿ ಗಲಾಟೆ ನಡೆಸಿದ ಮಂಜ, ಸಾರ್ವಜನಿಕರ ಎದುರೇ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಭಯದ ವಾತಾವರಣ ಸೃಷ್ಟಿಸಿದ್ದಾನೆ…

ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದರೂ, ಮಂಜನ ಅಟ್ಟಹಾಸದ ಎದುರು ಪರಿಣಾಮಕಾರಿ ಕ್ರಮ ಕೈಗೊಳ್ಳಲು ವಿಫಲರಾದರು. ಸ್ಥಳಕ್ಕೇ ಆಗಮಿಸಿದ್ದ ಪಿ.ಎಸ್.ಐ ಬಸವರಾಜ್ ಕೂಡ ಸೂಕ್ತ ಕ್ರಮ ಜರುಗಿಸದೇ ಹಿಂತಿರುಗಿದರೆಂಬ ಗಂಭೀರ ಆರೋಪ ಕೇಳಿಬಂದಿದೆ..

ಇದರಿಂದ ಪೊಲೀಸ್ ಸಿಬ್ಬಂದಿಯ ಮನೋಬಲ ಕುಗ್ಗಿದ್ದು, ಸಾರ್ವಜನಿಕ ವಲಯದಲ್ಲೂ ಪೊಲೀಸ್ ಇಲಾಖೆಯ ನಡೆ-ನುಡಿಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆಘಟನೆಯ ಮರುದಿನ ಸಣ್ಣಪುಟ್ಟ ಪ್ರಕರಣ ದಾಖಲಿಸಿ ಕೈತೊಳೆದುಕೊಂಡಿದ್ದ ಪೊಲೀಸರ ವಿರುದ್ಧ ಹಲವು ಪ್ರಶ್ನೆಗಳು ಉದ್ಭವಿಸಿವೆ. ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆದಿದ್ದರೂ ಗಂಭೀರ ಪ್ರಕರಣ ದಾಖಲಿಸದಿರುವುದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ. ಆದರೆ ಘಟನೆ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ, ಪ್ರತ್ಯೇಕವಾಗಿ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ…

ಇದೀಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಕಠಿಣ ಕ್ರಮ ಕೈಗೊಂಡಿದ್ದಾರೆ. ಕರ್ತವ್ಯ ಲೋಪದ ಆರೋಪದ ಮೇರೆಗೆ ಪಿ.ಎಸ್.ಐ ಬಸವರಾಜ್ ಅವರನ್ನು ಅಮಾನತು ಮಾಡಲಾಗಿದ್ದು, ಎಂಟು ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ. ಜೊತೆಗೆ ಸಿಪಿಐ ವಿರುದ್ಧ ಇಲಾಖಾ ತನಿಖೆಗೆ ನೋಟಿಸ್ ಜಾರಿ ಮಾಡಲಾಗಿದೆ…

ಈ ಕ್ರಮ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದ್ದು, ನಿರ್ಲಕ್ಷ್ಯ ತೋರಿದವರಿಗೆ ಇದು ಸ್ಪಷ್ಟ ಎಚ್ಚರಿಕೆಯ ಸಂದೇಶವಾಗಿದೆ. ರೌಡಿಶೀಟರ್‌ಗಳ ಜೊತೆ ಕೆಲ ಪೊಲೀಸರ ಅತಿಯಾದ ನಂಟು ಇಡೀ ಪೊಲೀಸ್ ಇಲಾಖೆಗೆ ಕಳಂಕ ತರುವ ಹಂತಕ್ಕೆ ಬಂದಿದೆ ಎಂಬ ಚರ್ಚೆಯೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

Share News

About Shaikh BigTv

Check Also

ಟಿ. ನರಸೀಪುರ: ಹಾಡಹಗಲೇ ಯುವಕನ ಬರ್ಬರ ಕೊಲೆ; ಠಾಣೆಗೆ ಹಾಜರಾದ ಮೂವರು ಆರೋಪಿಗಳು

ಟಿ.ನರಸೀಪುರದ ವಿವೇಕನಗರದಲ್ಲಿ ಶನಿವಾರ ಬೆಳಗ್ಗೆ 9.30ರ ಸುಮಾರಿಗೆ ಸುಭಾಷ್ (34) ಎಂಬ ಯುವಕನನ್ನು ಮೂವರು ಆರೋಪಿಗಳು ಡ್ರ್ಯಾಗರ್‌ ಮತ್ತು ಚೂರಿಯಿಂದ …

Leave a Reply

Your email address will not be published. Required fields are marked *