Breaking News

ಕಾಸರಗೋಡು:ಅವಯವ ಅವ್ಯವಹಾರ ಪ್ರಕರಣ: ವಿವಿಧೆಡೆ ಇ.ಡಿ. ದಾಳಿ

ಕೇರಳವನ್ನು ಕೇಂದ್ರವಾಗಿಸಿಕೊಂಡು ನಡೆಯುತ್ತಿದ್ದ ಅಕ್ರಮ ಅವಯವ ಸಾಗಾಟ ದಂಧೆ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡಿನ ಮುಹಮ್ಮದ್ ನಜೀಬ್ ಕಲ್ಲಟ್ರನ ಮನೆ ಹಾಗೂ ಹಲವು ಸ್ಥಳಗಳ ಮೇಲೆ ಇ.ಡಿ. ಗುರುವಾರ ದಾಳಿ ನಡೆಸಿದೆ. ಎರ್ನಾಕುಳಂ, ಕೊಲ್ಲಂ ಸೇರಿದಂತೆ ಹಲವು ಆಸ್ಪತ್ರೆಗಳು ಮತ್ತು ವ್ಯವಹಾರ ಕೇಂದ್ರಗಳಲ್ಲಿ ತಪಾಸಣೆ ನಡೆಸಲಾಗಿದ್ದು, ಇದು ಅಂತಾರಾಷ್ಟ್ರೀಯ ಮಟ್ಟದ ಅವಯವ ಸಾಗಾಟ ಜಾಲ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅವಯವ ದಾನಿಗಳಿಗೆ ₹5 ರಿಂದ ₹10 ಲಕ್ಷ ನೀಡಿ, ಬಳಿಕ ಅವುಗಳನ್ನು ₹20 ರಿಂದ ₹30 ಲಕ್ಷಕ್ಕೆ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ದಾಖಲೆಗಳು ಮತ್ತು ಮಾಹಿತಿ ಸಂಗ್ರಹಿಸಲು ಇ.ಡಿ. ತನಿಖೆ ಮುಂದುವರಿಸಿದೆ.

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *