Breaking News

ಹುಬ್ಬಳ್ಳಿಯಲ್ಲಿ ಮಿಶ್ರಾ ಪೇಡಾ ಎಷ್ಟೊಂದು ಮಂದಿಗೆ ಶಾಕ್ ಕೊಟ್ಟಿತು ಗೊತ್ತಾ…!

ಹುಬ್ಬಳ್ಳಿ:- ವಿದ್ಯಾನಗರದ ಮುಖ್ಯ ಸರ್ಕಲ್ ನಲ್ಲಿ ತಲೆ ಎತ್ತಿದ ಪೇಡಾ ಅಂಗಡಿ ಈಗ ಎಲ್ಲರ ಕಣ್ಣು ಕುಕ್ಕಿಸುವಂತೆ ಮಾಡಿದೆ.ರಾಜ್ಯದಲ್ಲಿ ಹೆಸರು ಮಾಡಿರುವ ಮಿಶ್ರಾ ಪೇಡಾ!ಈಗ ಅನುಮೋದಿತ ನಕ್ಷೆಗೆ ವಿರೋಧವಾಗಿ ಕಟ್ಟಡ ಕಟ್ಟಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ನೋಟೀಸ್ ಹೆಟ್ಟಿಸಿಕೊಂಡಿದೆ.ಅದು ಒಂದಲ್ಲಾ ಎರಡು ನೋಟೀಸ್.ಆದರೆ ಈ ಜಾಗೆಯ ಮಾಲಿಕರು ಮತ್ತು ಪೇಡಾ

ಅಂಗಡಿಯ ಮಾಲಿಕರು ಮಾತ್ರ ಯಾವ ನೋಟೀಸ್ ಗೂ ಕ್ಯಾರೆ ಅನ್ನದೇ ಕಟ್ಟಡ ಕಟ್ಟಿದ್ದಾರೆ. ಎಂದರೆ ಇವರ ಹಿಂದೆ ಅಂತಹ ಪ್ರಭಾವಿಗಳು ಯಾರಿದ್ದಾರೆ ಅಂತೀರಾ…? ಹುಬ್ಬಳ್ಳಿಯಲ್ಲಿ ಇಂತಹ ವ್ಯೆಲೇಷನ್ ಮಾಡಿದ ಕಟ್ಟಡಗಳು ಎಷ್ಟಿಲ್ಲಾ,ಹೀಗಾಗಿ ಕಟ್ಟಡ ಕಟ್ಟಿ ಇನ್ನೇನು ಅಂಗಡಿ ಓಪನಿಂಗ್ ಹಂತಕ್ಕೆ ಬಂದು ನಿಂತಿದೆ.ಆದರೆ ಖಡಕ್ ಪಾಲಿಕೆಯ ಆಯುಕ್ತರು ಮಾತ್ರ ಯಾರ ಒತ್ತಡಕ್ಕೂ ಮಣಿಯದೇ

ನೋಟೀಸ್ ನೀಡಿದ್ದು.ವ್ಯೆಲೇಷನ್ ಆಗಿದೆ ಅವರು ನೋಟೀಸ್ ಗೆ ಉತ್ತರ ಕೊಡದೇ ಹೋದರೆ ಮುಂದಿನ ಕ್ರಮ ಗ್ಯಾರಂಟೀ ಅಂದಿದ್ದಾರೆ ನೋಡೋಣ ಆಯುಕ್ತರು ಏನ್ಮಾಡತಾರೆ ಅಂತಾ.ಅಲ್ಲದೇ ಇದೇ ಜಾಗೆಯಲ್ಲಿ ಇದೇ ರೀತಿ ಪಾರ್ಕಿಂಗ್ ಗೆ ಜಾಗ ಬಿಡದೇ ಕಟ್ಟಿದ ಬಿಲ್ಡಿಂಗನ್ನು ಮಹಾನಗರ ಪಾಲಿಕೆ ನಿರ್ಧಾಕ್ಷೀಣ್ಯವಾಗಿ ಒಡೆದು ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು….

Share News

About Shaikh BigTv

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *