ಬೆಂಗಳೂರು: ಎಗ್‌ರೈಸ್ ಖಾಲಿಯಾಗಿದೆ ಎಂದಿದ್ದಕ್ಕೆ ಪಾನಮತ್ತ ಗ್ಯಾಂಗ್ ವ್ಯಕ್ತಿಯೊಬ್ಬರ ಮೇಲೆ ತಲ್ವಾರ್‌ನಿಂದ ಹಲ್ಲೆ ನಡೆಸಿರುವ ಘಟನೆ ಆನೇಕಲ್ ತಾಲೂಕಿನ ಬೇಗಿಹಳ್ಳಿಯಲ್ಲಿ ನಡೆದಿದೆ. ರೌಡಿ ಕನಕರಾಜು ಹಾಗೂ ಆತನ ಗ್ಯಾಂಗ್ ರಾತ್ರಿ ಎಗ್‌ರೈಸ್ ತಿನ್ನಲು ಬಂದಿದ್ದು, ಅಂಗಡಿ ಮುಚ್ಚುತ್ತಿದ್ದ ಮಾಲೀಕ ಎಗ್‌ರೈಸ್ ಖಾಲಿಯಾಗಿದೆ ಎಂದು ತಿಳಿಸಿದ್ದಾರೆ. ಇದರಿಂದ ಕಿರಿಕ್ ಮಾಡಿದ ಆರೋಪಿಗಳು, ಪಕ್ಕದ ಅಂಗಡಿಗೆ ಪೇಂಟಿಂಗ್ ಮಾಡುತ್ತಿದ್ದ ಮಂಜುನಾಥ್ ಎಂಬುವವರ ಮೇಲೆ ತಲ್ವಾರ್‌ನಿಂದ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಮಂಜುನಾಥ್ ಅವರ ಕೈಗೆ ಗಂಭೀರ ಗಾಯವಾಗಿದೆ. ಈ ಕುರಿತು ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಸಿಸಿಟಿವಿ ಹಾಗೂ ಮೊಬೈಲ್ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

