Breaking News

ಕಲಬುರಗಿ: ಯುವಕನ ರುಂಡ-ಮುಂಡ ಬೇರ್ಪಟ್ಟಿದ್ದ ನಿಗೂಢ ಕೇಸ್ ಭೇದಿಸಿದ ಖಾಕಿ

ಕಲಬುರಗಿ: ಅಫಜಲಪುರ ತಾಲೂಕಿನ ಗೊಬ್ಬರು (ಬಿ) ಗ್ರಾಮದ ಜಮೀನಿನಲ್ಲಿ ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ 22 ವರ್ಷದ ಖಲೀಂ ಸಾಬ್‌ ಶವದ ಪ್ರಕರಣವನ್ನು ಗಾಣಗಾಪುರ ಪೊಲೀಸರು 48 ಗಂಟೆಗಳಲ್ಲಿ ಭೇದಿಸಿದ್ದಾರೆ. ಇದು ಅಪಘಾತವಲ್ಲ, ಹಣಕಾಸಿನ ವಿಚಾರಕ್ಕೆ ನಡೆದ ಕೊಲೆ ಎಂಬುದು ತನಿಖೆಯಿಂದ ಬಯಲಾಗಿದೆ. ಸೆ.25ರಂದು ಬೈಕ್‌ಗೆ ಪೆಟ್ರೋಲ್ ಖಾಲಿಯಾಗಿ ತಳ್ಳಿಕೊಂಡು ಬರುತ್ತಿದ್ದ ನಂದಿಕೂರ ತಾಂಡಾದ ಸಂದೀಪ್ ಪವಾರ್ ಹಾಗೂ ಸಂದೀಪ್ ಚವ್ಹಾಣ್‌ಗೆ ಖಲೀಂ ಪೆಟ್ರೋಲ್ ತಂದುಕೊಟ್ಟಿದ್ದ. ಆರೋಪಿಗಳು ₹200 ನೀಡಿದ್ದು, ಇನ್ನಷ್ಟು ಹಣ ನೀಡುವಂತೆ ಖಲೀಂ ಕೇಳಿದ್ದರಿಂದ ಜಗಳ ನಡೆದಿದೆ. ಮಾತಿಗೆ ಮಾತು ಬೆಳೆದು ಇಬ್ಬರೂ ಖಲೀಂನನ್ನು ಕೊಲೆ ಮಾಡಿ ಜಮೀನಿನಲ್ಲಿ ಶವ ಎಸೆದು ಪರಾರಿಯಾಗಿದ್ದರು. ಖಲೀಂ ಮೊಬೈಲ್ ಬಳಸದೇ ಇದ್ದ ಕಾರಣ ಪ್ರಕರಣ ಪತ್ತೆಹಚ್ಚುವುದು ಪೊಲೀಸರಿಗೆ ಸವಾಲಾಗಿತ್ತು. ಸ್ಥಳೀಯರು ನೀಡಿದ ಸುಳಿವಿನ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Share News

About BigTv News

Check Also

ಯುವತಿಯರನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವಕನ ಮೇಲೆ ಹಲ್ಲೆ ಆರೋಪ

ಬಾಗಲಕೋಟೆ: ಯುವತಿಯರನ್ನು ಚುಡಾಯಿಸುತ್ತಿದ್ದುದನ್ನು ಪ್ರಶ್ನಿಸಿದ ಕಾರಣಕ್ಕೆ ಯುವಕನೊಬ್ಬನ ಮೇಲೆ ಕೆಲ ಯುವಕರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೆರೂರು ಪಟ್ಟಣದಲ್ಲಿ …

Leave a Reply

Your email address will not be published. Required fields are marked *