Breaking News

ಬೆಂಗಳೂರು | ₹10.96 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ: ಆರು ಮಂದಿ ಸೆರೆ

ಬೆಂಗಳೂರು: ಗಿರಿನಗರ, ಹೆಬ್ಬಾಳ ಹಾಗೂ ವಿದ್ಯಾರಣ್ಯಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು ₹10.96 ಕೋಟಿ ಮೌಲ್ಯದ ವಿವಿಧ ಮಾದರಿಯ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ವಿದ್ಯಾರಣ್ಯಪುರ ಠಾಣೆ ಪೊಲೀಸರು ಕೆ.ಆರ್‌.ಪುರದ ಜುನೈದ್‌ ಪಾಷಾ (30) ಹಾಗೂ ರಿಜ್ವಾನ್‌ ಬೇಗ್‌ (30) ಅವರನ್ನು ಬಂಧಿಸಿ, ₹21 ಲಕ್ಷ ಮೌಲ್ಯದ 105 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ಹೆಬ್ಬಾಳ ಠಾಣೆ ಪೊಲೀಸರು ಒಡಿಶಾ ಮೂಲದ ಬನಿತ್‌ ಕರಣ್‌ (35)ನನ್ನು ಬಂಧಿಸಿ, ₹2.10 ಕೋಟಿ ಮೌಲ್ಯದ 1 ಕೆ.ಜಿ. 54 ಗ್ರಾಂ ಎಂಡಿಎಂಎ ಕ್ರಿಸ್ಟಲ್‌ ಜಪ್ತಿ ಮಾಡಿದ್ದಾರೆ. ಇನ್ನು ಗಿರಿನಗರ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ₹8.46 ಕೋಟಿ ಮೌಲ್ಯದ 4 ಕೆ.ಜಿ. 320 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ಪ್ರಕರಣಗಳ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ಸಕಲೇಶಪುರದಲ್ಲಿ ಸಿನಿಮೀಯ ಕಾರ್ಯಾಚರಣೆ: ಸರಗಳ್ಳತನ ಪ್ರಕರಣದ ಆರೋಪಿಗಳ ಬಂಧನ

ಸಕಲೇಶಪುರ: ಪಟ್ಟಣದಲ್ಲಿ ಮಹಿಳೆಯರ ಸರ ದೋಚಿ ಆತಂಕ ಸೃಷ್ಟಿಸಿದ್ದ ಇಬ್ಬರು ಸರಗಳ್ಳರನ್ನು ಸಕಲೇಶಪುರ ಪೊಲೀಸರು ಮಂಗಳವಾರ ಮುಂಜಾನೆ ಬಂಧಿಸಿದ್ದಾರೆ. ಕೆಲ …

Leave a Reply

Your email address will not be published. Required fields are marked *