Breaking News

ಚಿಟಗುಪ್ಪಿ ಆಸ್ಪತ್ರೆ ಆವರಣಕ್ಕೆ ಫಾಗಿಂಗ್ ಸಿಂಪಡಣೆ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ವಾರ್ಡ್ 57ರ ಚಿಟಗುಪ್ಪಿ ಆಸ್ಪತ್ರೆ ಆವರಣದಲ್ಲಿ ರೋಗಿಗಳ ಆರೋಗ್ಯ ಹಿತದೃಷ್ಟಿಯಿಂದ ಫಾಗಿಂಗ್ ಕಾರ್ಯ ಕೈಗೊಳ್ಳಲಾಯಿತು. ನಂತರ ಅಧಿಕಾರಿಗಳು ಬಂದಿರುವ ರೋಗಿಗಳ ಸಂಬಂಧಿಗಳಿಗೆ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಿದರು. ಹುಬ್ಬಳ್ಳಿ ಧಾರವಾಡ ಸತತವಾಗಿ ಎರಡು ದಿನಗಳಿಂದ ತುಂತುರು ಮಳೆ ಪ್ರಾರಂಭವಾಗಿದ್ದ,

ಸೊಳ್ಳೆಗಳು ಹೆಚ್ಚಾಗಿರುವ ಹಿನ್ನಲೆ ಹಾಗೂ ಇತರೆ ಕೀಟಗಳಿಂದ ಹರಡಬಹುದಾದ ರೋಗಗಳಿಂದ ಮುಕ್ತಿ ನೀಡುವ ಹಿನ್ನಲೆ ಮಹಾನಗರ ಪಾಲಿಕೆ ಹಾಗೂ ಆರೋಗ್ಯ ಇಲಾಖೆಯ ವತಿಯಿಂದ ಈ ಕಾರ್ಯಕ್ರಮವನ್ನು ಪಟ್ಟಣದ ನಗರಗಳಲ್ಲಿ ಹಾಗೂ ಇತರೆ ಜನ ಸಂದಣಿ ಇರುವ ಪ್ರಧೇಶಗಳಲ್ಲಿ ಹಮ್ಮಿಕೊಳ್ಳಾಗಿದೆ. ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕರಾದ ಪ್ರಶಾಂತ್ ಶಿವಮೊಗ್ಗಿ ಅವರು ಹಾಗೂ ವಾರ್ಡ್‌ ಜಮಾದಾರರು ಉಪಸ್ಥಿತರಿದ್ದರು.

Share News

About BigTv News

Check Also

ಡಿಜಿ ಆದೇಶಕ್ಕೆ ಹೊಸ ಕಮಿಷನರ್‌ ಬೆಲೆ ತಂದರಾ..? ಟ್ರಾಫಿಕ್ ಪೊಲೀಸರ ದರ್ಬಾರ್‌ಗೆ ಭೂಷಣ್‌ ಬೊರಸೆ ಬ್ರೇಕ್..!

ಡಿಜಿ ಆದೇಶಕ್ಕೆ ಗೌರವ ತಂದ ಹೊಸ ಕಮಿಷನರ್‌..! ಟ್ರಾಫಿಕ್ ವ್ಯವಸ್ಥೆಗೆ ಹೊಸ ರೂಪ — ಹುಬ್ಬಳ್ಳಿ ನೂತನ ಪೊಲೀಸ್ ಕಮಿಷನರ್‌ …

Leave a Reply

Your email address will not be published. Required fields are marked *