Breaking News

ಕೋಲಾರದಲ್ಲಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಕಾಲು ಕಳೆದುಕೊಂಡ ವ್ಯಕ್ತಿ.

ಚಲಿಸುತ್ತಿದ್ದ ರೈಲಿಗೆ ಸಿಲುಕಿ ಕಾಲು ಕಳೆದುಕೊಂಡ ಘಟನೆ ಕೋಲಾರದ ಕೆಜಿಎಫ್ ನ ಚಾಂಪಿಯನ್ ರೀಫ್ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಚಾರ್ಲ್ಸ್(33) ಕಾಲು ಕಳೆದುಕೊಂಡ ವ್ಯಕ್ತಿ. ಚಲಿಸುವ ರೈಲು ಹತ್ತುವಾಗ ಆಯ ತಪ್ಪಿ ರೈಲಿಗೆ ಸಿಲುಕಿದ್ದನು. ಕೂಡಲ್ಲೇ ಸ್ಥಳೀಯರ ಸಹಾಯದಿಂದ ರೈಲ್ವೇ ಸಿಬ್ಬಂದಿಗಳು ಗಾಯಾಳು ಚಾರ್ಲ್ಸ್ ನನ್ನ ಕೋಲಾರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅದೃಷ್ಟವಶಾತ್ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದು, ತನ್ನ ಕಾಲನ್ನು ಕಳೆದುಕೊಂಡಿದ್ದಾನೆ. ಈ ಕುರಿತು ಬಂಗಾರಪೇಟೆ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Share News

About admin

Check Also

ಭೀಕರ ಅಪಘಾತ : ಒಂದೇ ಕುಟುಂಬದ ನಾಲ್ವರು ಸಾವು

ಗದಗ:-ಬೆಳ್ಳಂಬೆಳಗ್ಗೆ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ಹೊರವಲಯದಲ್ಲಿ ಸಾರಿಗೆ ಬಸ್- ಕಾರು ನಡುವೆ ಅಪಘಾತ ಸಂಭವಿಸಿ ಒಂದೇ ಕುಟುಂಬದ ನಾಲ್ವರು …

Leave a Reply

Your email address will not be published. Required fields are marked *