ಮಳೆಗಾಲ ಆರಂಭವಾದ್ರೂ ಸಹ ಕೋಟೆನಾಡಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ. ಚಿತ್ರದುರ್ಗದ ಬುಧ್ಧ ನಗರ ನಿವಾಸಿಗಳ ನೀರಿನ ಪರದಾಟ ನೋಡುವುದ್ದಾರೇ ಮುಂಜಾನೆ ಎದ್ದು ನೀರಿಲ್ಲ ಎಂದ್ರೆ ಯಾವ ಕೆಲಸನೂ ನಡೆಯಲ್ಲ. ನಗರಸಭೆ ನಲ್ಲಿಯಲ್ಲಿ ನೀರು ಬಿಡೋದು ವಾರಕ್ಕೂ ಅಥವಾ ಹದಿನೈದು ದಿನಕ್ಕೋ ಒಮ್ಮೆ. ನೀರಿನ ಟ್ಯಾಂಕರ್ ಬಂದೊಡನೆ ಮನೆಮಂದಿ ಎಲ್ಲಾ ಕೊಡ ಹಿಡಿದು ನೀರನ್ನು ತುಂಬಿಸಿಬೇಕು. ಮಕ್ಕಳು ಶಾಲೆಗೆ ಹೋಗೋ ಹೊತ್ತಿನಲ್ಲಿ ಟ್ಯಾಂಕ್ ಬಂತು ಎಂದ್ರೆ ಶಾಲೆ ಬಟ್ಟೆ ತೆಗೆದು ನೀರು ತುಂಬಿಸಿ ನಂತ್ರ ಶಾಲೆಗೆ ಹೋಗಬೇಕು. ಒಟ್ಟಿನಲ್ಲಿ ಮಳೆ ಕೊರತೆಯಿಂದ ನಿತ್ಯ ನೀರಿನ ಬವಣೆಯು ಪ್ರತಿಯೊಬ್ಬರಿಗೂ ತಟ್ಟಿದೆ ಎಂದ್ರೆ ತಪ್ಪೇನಿಲ್ಲ.
bigtvnews | Hubli Dharwad News | Kannada News | Karnataka News Hubli News | News In Hubli | Local news





