ದಾವಣಗೆರೆ; ಹರಿದ್ವಾರದಲ್ಲಿ ಕರ್ತವ್ಯನಿರತನಾಗಿದ್ದಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಯೋಧ ತಪ್ಪೆನಹಳ್ಳಿ ಬಸವರಾಜ್ (29)ಪಾರ್ಥಿವ ಶರೀರ ಸ್ವಗ್ರಾಮ ಹರಪನಹಳ್ಳಿಯ ಹಲುವಾಗಲು ಗ್ರಾಮಕ್ಕೆ ಇಂದು ಮುಂಜಾನೆ ಆಗಮಿಸಿತು.ಮದುವೆ ನಿಶ್ಚಿತಾರ್ಥವಾಗಿ ಸ್ವಲ್ಪ ದಿನಗಳಲ್ಲಿ ಯೋಧ ಬಸವರಾಜ್ ಮದುವೆ ಕಾರ್ಯ ನಡೆಯುವುದಿತ್ತು, ಆದರೆ ದುರಾದೃಷ್ಟವಶಾತ್ಕರ್ತವ್ಯ ನಿರತನಾಗಿದ್ದ ಸಿಐಎಸ್ಎಫ್ ಯೋಧ ಬಸವರಾಜ್ ಜೂನ್ 28ರಂದು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.ಯೋಧನಿಗೆ ಯುವಕರ ಜೈಕಾರ:ಇಂದು ಮುಂಜಾನೆ ಹಲುವಾಗಲು ಗ್ರಾಮಕ್ಕೆ ಯೋಧನ ಪಾರ್ಥಿವ ಶರೀರ ಆಗಮಿಸಿತು. ಈ ವೇಳೆ ನಿದ್ದೆ ಮಾಡದೇ ಎಚ್ಚರದಿಂದ ಇದ್ದ ಇಡೀ ಗ್ರಾಮ ಯೋಧನಿಗೆ ಜೈಕಾರ ಕೂಗಿದರು. ಇನ್ನೂ ಕುಟುಂಬಸ್ಥರು ಆಕ್ರಂದನಮುಗಿಲು ಮುಗಿಲು ಮುಟ್ಟಿತ್ತು. ಯುವಕರ ಗುಂಪು ವಂದೇ ಮಾತರಂ, ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗುತ್ತಾ ಮೆರವಣಿಗೆ ಮೂಲಕ ಪಾರ್ಥಿವ ಶರೀರವನ್ನು ಬರ ಮಾಡಿಕೊಂಡರು. ಯೋಧನ ಹುಟ್ಟುರು ಹಲುವಾಗಲು ಗ್ರಾಮದಲ್ಲಿ ಶೋಕ ಮಡುಗಟ್ಟಿದ್ದು,ಸಕಲ ಸರ್ಕಾರಿ ಗೌರವದೊಂದಿಗೆ ಇಂದು ಅಂತ್ಯ ಸಂಸ್ಕಾರ ನಡೆಯಲಿದೆ..
bigtvnews | Hubli Dharwad News | Kannada News | Karnataka News Hubli News | News In Hubli | Local news





