Breaking News

ಕತ್ತು ಕೊಯ್ದು ಗೃಹಿಣಿಯ ಕೊಲೆ

ಚಾಮರಾಜನಗರ: ಜಿಲ್ಲೆಯಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತದ ಬಳಿ ಕತ್ತು ಕೊಯ್ದು ಗೃಹಿಣಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಭರಚುಕ್ಕಿ ಜಲಪಾತ ಬಳಿಯ ಮಯೂರ ಪ್ರವಾಸಿ ಮಂದಿರದ ಕಾವೇರಿ ನದಿ ದಂಡೆ ಮೇಲೆ ಗೃಹಿಣಿಯ ಕೊಲೆ ಮಾಡಲಾಗಿದೆ. ಬಂಡೆ ಮೇಲೆ ಕತ್ತು ಸೀಳಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆಯಾಗಿದ್ದು, ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿದರು. ಶವದ ಪಕ್ಕದಲ್ಲಿ ಪುರುಷನ ಪ್ಯಾಂಟ್, ಗೃಹಿಣಿಯ ಚಪ್ಪಲಿ, ಜ್ಯೂಸ್ ಬಾಟಲಿ, ಬಟ್ಟೆಸೋಪು ಮತ್ತು ಬ್ರಶ್ ಪತ್ತೆಯಾಗಿದೆ. ಕೊಲೆಗೀಡಾದ ಗೃಹಿಣಿಯ ವಿಳಾಸ ತಿಳಿದು ಬಂದಿಲ್ಲ ಹಾಗಾಗಿ ಘಟನೆ ಕುರಿತು ಪೊಲೀಸರಿಂದ ತಿವ್ರ ತನಿಖೆ ನಡೆಸಲಾಗುತ್ತಿದೆ…

Share News

About admin

Check Also

ಪಿಎಸ್‌ಐ-ಪಿಸಿ ಮೇಲೆ ಲೋಕಾಯುಕ್ತ ದಾಳಿ: ಠಾಣೆ ಮುಂದೆ ಪಟಾಕಿ ಸಿಡಿಸಿ ಜನರ ಸಂಭ್ರಮ!

ಭ್ರಷ್ಟಾಚಾರಕ್ಕೆ ಬಿಗಿ ಹೊಡೆತ: ಪಿಎಸ್‌ಐ, ಪಿಸಿ ಬಂಧನಕ್ಕೆ ಠಾಣೆ ಮುಂದೆ ಪಟಾಕಿ ಹಬ್ಬ! ಲೋಕಾಯುಕ್ತ ದಾಳಿ ನಂತರ ಜನರ ಸಂಭ್ರಮ: …

Leave a Reply

Your email address will not be published. Required fields are marked *