Breaking News

ಭಕ್ತರ ಭಕ್ತಿಗೆ ಮೆಚ್ಚಿ ಮಾತಾ ಮಾಣಿಕೇಶ್ವರಿ ದಿವ್ಯ ದರ್ಶನ

ಯಾದಗಿರಿ: ಜಿಲ್ಲೆಯ ಗುರುಮಠಕಲ್ ಸಮೀಪದ ಯಾನಾಗುಂದಿ ಕೋಟ್ಯಾಂತರ ಭಕ್ತರ ನಿರಂತರ ಪ್ರಾರ್ಥನೆಯ ಫಲವಾಗಿ ಗುರುಪೂರ್ಣಿಮೆಯ ದಿನ ಮಾತಾ ಮಾಣಿಕೇಶ್ವರಿ ಅಮ್ಮನವರು ಮಾಣಿಕ್ಯಗಿರಿಯಲ್ಲಿ ಭಕ್ತರಿಗೆ ದಿವ್ಯ ದರ್ಶನ ನೀಡಿದ್ದಾರೆ.ಅನಾರೋಗ್ಯದ ಹಿನ್ನೆಲೆಯಲ್ಲಿ ಹಾಸಿಗೆ ಹಿಡಿದಿದ್ದ ಮಾತಾ ಮಾಣಿಕೇಶ್ವರಿ ಅಮ್ಮನವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದು, ಹಾಸಿಗೆಯಿಂದ ಹೊರಬಂದು ವ್ಹೀಲ್ ಚೇರ್ ಮೇಲೆ ಅಮ್ಮ ಭಕ್ತರಿಗೆ ದರ್ಶನ ನೀಡಿದ್ದಾರೆ.ತಾಲೂಕಿನ ಯಾನಾಗುಂದಿಯ ಮಾಣಿಕ್ಯಗಿರಿ ಬೆಟ್ಟದ ಹಿಂಬದಿಯಲ್ಲಿರುವ, ಗುಹೆಯ ಹೊರಭಾಗದ ಆಸನದಲ್ಲಿ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಕಾಣಿಸಿಕೊಂಡ ಅಮ್ಮನವರು ಸತತ 10 ನಿಮಿಷಗಳ ಕಾಲ ಇದ್ದು ತೆರಳಿದ್ದಾರೆ. ತಮ್ಮ 86ನೇ ಹುಟ್ಟು ಹಬ್ಬ ಮತ್ತು ಗುರುಪೂರ್ಣಿಮೆ ನಿಮಿತ್ತ ಅಮ್ಮ ಭಕ್ತರಿಗೆ ದರ್ಶನ ನೀಡಿದ್ದಾರೆ.ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಾತಾ ಮಾಣಿಕೇಶ್ವರಿ ಅಮ್ಮನವರು ದರ್ಶನ ನೀಡುವುದಿಲ್ಲ. ವ್ಹೀಲ್ ಚೇರ್ ಮೇಲೆ ಕೂರಲು ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಇದರಿಂದ ಭಕ್ತರಲ್ಲಿ ನಿರಾಸೆಯ ಮನೋಭಾವ ಮೂಡಿತ್ತು, ಅನೇಕ ಭಕ್ತರು ಹಿಂದಿರುಗಲು ಮುಂದಾಗಿದ್ದರು, ನಂತರ ಕೆಲ ನಿಮಿಷಗಳಲ್ಲೇ ಅಮ್ಮ ದರ್ಶನ ನೀಡಲಿದ್ದಾರೆ ಎಂಬ ಸಂದೇಶ ಬಂದಿತ್ತು. ಆಗ ಭಕ್ತರಲ್ಲಿ ನವಚೈತನ್ಯ ಮೂಡಿದಂತಾಗಿತ್ತು.ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ರಾಜ್ಯದ ನಾನಾ ಮೂಲೆಗಳಿಂದ ಸಾವಿರಾರು ಭಕ್ತರ ಅಮ್ಮನವರ ದರ್ಶನಕ್ಕಾಗಿ ಆಗಮಿಸಿದ್ದರು. ಬೆಳಗ್ಗೆಯಿಂದಲೇ ಬೆಟ್ಟದ ತುಂಬೆಲ್ಲಾ ಓಂಕಾರ, ಜೈಕಾರಗಳು ಮೊಳಗುತ್ತಿದ್ದವು.,ಮಾತಾಜಿಯವರ ಜನ್ಮ ಸ್ಥಳವಾದ ಸೇಡಂ ತಾಲೂಕಿನ ಮಲ್ಲಾಬಾದ್ ಗ್ರಾಮದಲ್ಲಿ ಮಾಣಿಕೇಶ್ವರಿ ಸೇವಾ ಸಮೀತಿಯಿಂದ ಅಮ್ಮನವರ ಆರೋಗ್ಯಚೇತರಿಕೆಯಾಗಲಿ ಎಂದು ಮಹಾ ಮೃತ್ಯುಂಜಯ ಹೋಮ ನೆರವೇರಿಸಲಾಯಿತು.ಕೆಲ ದಿನಗಳ ಹಿಂದಷ್ಟೇ ಮಾತಾ ಮಾಣಿಕೇಶ್ವರಿ ಅಮ್ಮನವರ ಮುಕ್ತ ದರ್ಶನ, ಅವರ ಆರೋಗ್ಯ ಸುಧಾರಣೆಗಾಗಿ ವೈದ್ಯರ ನೇಮಕ, ಮಹಿಳಾ ಸೇವಕಿ ನೇಮಕ ಕುರಿತು ಸಾಮಾಜಿಕ ಕಾರ್ಯಕರ್ತ ಶಿವಕುಮಾರ ನಿಡಗುಂದಾ ಕೋರ್ಟ್ ಮೆಟ್ಟಿಲೇರಿದ್ದರು.

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *