ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ತ್ರಿಶಂಕು ಆಡಳಿತ ವಾತಾವರಣ ನಿರ್ಮಾಣವಾಗುತ್ತೆ.ಅಲ್ಲದೆಎಲ್ಲ ಅತೃಪ್ತ ಶಾಸಕರ ಅನರ್ಹತೆ ಖಚಿತ ಎಂದುಮಾಜಿ ಸಚಿವ ಶಿವಶಂಕರರೆಡ್ಡಿ ಭವಿಷ್ಯ ನುಡಿದರು.ಚಿಕ್ಕಬಳ್ಳಾಪುರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅತೃಪ್ತ ಶಾಸಕರು ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಪಕ್ಷ ಆಂತರಿಕವಾಗಿ ಅತೃಪ್ತರ ಸಮಸ್ಯೆಗಳನ್ನು ಪಕ್ಷದ ಗಮನ ಸೆಳೆದು ಬಗೆ ಹರಿಸಿಕೊಳ್ಳಬಹುದಿತ್ತು. ಆದರೆ ಶಾಸಕರು ವೈಯಕ್ತಿಕ ಹಿತಾಸಕ್ತಿಗೆ ಅಧಿಕಾರದ ಆಸೆಯಿಂದ ಬಿಜೆಪಿ ಬಲೆಗೆ ಬಿದ್ದಿದ್ದಾರೆ ಎಂದು ಅಭಿಪ್ರಾಯಪಟ್ಟರು.
bigtvnews | Hubli Dharwad News | Kannada News | Karnataka News Hubli News | News In Hubli | Local news





