ಮಂಡ್ಯ: ಜಿಲ್ಲೆ ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷ ಚಿಕ್ಕೋಸಹಳ್ಳಿ ಎನ್. ರಮೇಶ್ ಗೌಡ ಅವರ ವಿರುದ್ಧ 18ಮಂದಿ ಸದಸ್ಯರು ಅವಿಶ್ವಾಸ ನಿರ್ಣಯ ಕೈಗೊಂಡ ಕಾರಣ ಅಧ್ಯಕ್ಷ ರಮೇಶ್ ಗೌಡ ತಮ್ಮ ಸ್ಥಾನದಿಂದ ಪದಚ್ಯುತಿಗೊಂಡಿದ್ದಾರೆ.ಪಾಂಡವಪುರ ಉಪವಿಭಾಗಾಧಿಕಾರಿ ಶೈಲಜಾ ಅವರ ಸಮ್ಮುಖದಲ್ಲಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯದ ಪರ 18ಮಂದಿ ಮತಚಲಾಯಿಸಿದರುಹಾಗಾಗಿ ಪಾಂಡವಪುರ ಉಪವಿಭಾಗಾಧಿಕಾರಿಗಳು ಅಧ್ಯಕ್ಷ ರಮೇಶ್ ಗೌಡ ಅವರಿಗೆ ಬಹುಮತವಿಲ್ಲದ ಕಾರಣ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಿ ಆದೇಶ ನೀಡಿದರು.ಎನ್.ರಮೇಶ್ ಗೌಡ ಅವರು ಕಳೆದ ನಾಲ್ಕು ವರ್ಷಗಳಿಂದ ಅಧ್ಯಕ್ಷರಾಗಿದ್ದರು.ಒಡಂಬಡಿಕೆ ಯಂತೆ ಬೇರೆಯವರಿಗೆ ಅಧ್ಯಕ್ಷ ಸ್ಥಾನ ಬಿಟ್ಟು ಕೊಡಬೇಕಾಗಿತ್ತು ಆದರೆ ಈ ಆಂತರಿಕ ಒಡಂಬಡಿಕೆಯನ್ನು ಪಾಲಿಸದ ಕಾರಣ 21 ಸದಸ್ಯರ ಪೈಕಿ 18 ಮಂದಿ ಸದಸ್ಯರು ಅಧ್ಯಕ್ಷರ ವಿರುದ್ಧ ಮತ ಚಲಾಯಿಸಿ ರಮೇಶ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಿದ್ದೇವೆ ಎಂದು ಮುಂದಿನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ಎ.ಪಿ.ಶ್ರೀಧರ್ ಮತ್ತು ರಾಮಕೃಷ್ಣೇಗೌಡ ಅವರು ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ಪಾಂಡವಪುರ ಉಪವಿಭಾಗಾಧಿಕಾರಿ ಶೈಲಜಾ ಅವರು ಮಾತನಾಡಿ ಪಂಚಾಯತ್ ರಾಜ್ ಅಧಿನಿಯಮ 49(1) ಪ್ರಕಾರ ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಮೇಶ್ ಗೌಡ ವಿರುದ್ದ 21ಸದಸ್ಯರ ಪೈಕಿ 18ಮಂದಿ ಅವಿಶ್ವಾಸ ಮಂಡಿಸಿದ ಕಾರಣ ಅಧ್ಯಕ್ಷರು ಬಹುಮತ ಕಳೆದುಕೊಂಡಿದ್ದಾರೆ ಹಾಗಾಗಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಲಾಗಿದೆ.ಹೊಸ ಅಧ್ಯಕ್ಷರ ಆಯ್ಕೆಯಾಗುವವರೆಗೆ ಉಪಾಧ್ಯಕ್ಷರು ಪ್ರಭಾರ ಅಧ್ಯಕ್ಷರಾಗಿರುತ್ತಾರೆ ಎಂದು ಮಾಹಿತಿ ನೀಡಿದರು.ಸಭೆಯಲ್ಲಿ ರಮೇಶ್ ಗೌಡ, ಲೀಲಾವತಿ, ಲಕ್ಷ್ಮಮ್ಮ ಗೈರು ಹಾಜರಿದ್ದರು.ಉಳಿದ ಎಲ್ಲಾ 18 ಮಂದಿ ಸದಸ್ಯರು ಭಾಗವಹಿಸಿ ಅವಿಶ್ವಾಸ ನಿರ್ಣಯದ ಪರ ಮತ ಚಲಾವಣೆ ಮಾಡಿದರು. ಈ ವೇಳೆ ಮಾತನಾಡಿದ ಮುಂದಿನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ಎ.ಪಿ. ಶ್ರೀಧರ್ ಮತ್ತು ರಾಮಕೃಷ್ಣೇಗೌಡ ಅವರು ಕಳೆದ ನಾಲ್ಕು ವರ್ಷಗಳಿಂದ ಅಧ್ಯಕ್ಷರಾಗಿದ್ದ ರಮೇಶ್ ಗೌಡ ಅವರು ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರ ನಡೆಸುವಲ್ಲಿ ವಿಫಲವಾಗಿದ್ದಾರೆ ಹಾಗಾಗಿ 21ಸದಸ್ಯರ ಪೈಕಿ 18 ಮಂದಿ ಸದಸ್ಯರುಗಳಾದ ನಾವು ಮಂಡ್ಯ ಪಾಂಡವಪುರ ಉಪವಿಭಾಗಾಧಿಕಾರಿಗಳ ಸಮ್ಮುಖದಲ್ಲಿ ಅಧ್ಯಕ್ಷ ರಮೇಶ್ ಗೌಡ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಮೂಲಕ ಪದಚ್ಯುತಿ ಗೊಳಿಸಿದ್ದೆವೆ ಮುಂದೆ ಸದಸ್ಯರ ವಿಶ್ವಾಸಗಳಿಸುವ ಸದಸ್ಯರು ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





